ವಕೀಲರ ರಕ್ಷಣೆಗಾಗಿ ” ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಲು ಆಗ್ರಹಿಸಿ ಪ್ರತಿಭಟನೆ

ಕೊಪ್ಪಳ :  ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನ್ಯಾಯಾಲಯದ ಆವರಣದಲ್ಲಿಯೇ ವಕೀಲರಾದ ತಾರಿಹಳ್ಳಿ ವೆಂಕಟೇಶ ಎಂಬುವರನ್ನು ಹಾಡುಹಗಲೇ ಬರ್ಬರವಾಗಿ ಹತ್ಯೆ ದಿ : 17-02-2021 ರಂದು ತೆಲಂಗಾಣದ ವಕೀಲ ದಂಪತಿಗಳಾದ ವಾಮನ್ ರಾವ್ ಮತ್ತು ಅವರ ಹೆಂಡತಿಯಾದ ಪಿ . ವಿ . ನಾಗಮಣಿ ಇವರನ್ನು ಸಹ ನಡುರಸ್ತೆಯಲ್ಲಿ ಹಾಡು ಹಗಲೇ ಬರ್ಬರವಾಗಿ ಹತ್ಯೆಗಯ್ಯಲಾಗಿದೆ .  ಈ ಹಿಂದೆಯೂ ಸಹ ಅನೇಕ ವಕೀಲರುಗಳನ್ನು ಹತ್ಯೆ ಮಾಡಿದ್ದಲ್ಲದೇ , ವಕೀಲರುಗಳ ಮೇಲೆ ಮೇಲಿಂದ ಮೇಲೆ ಹಲ್ಲೆಗಳು ನಡೆಯುತ್ತಿವೆ ಇವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ವಕೀಲರ ರಕ್ಷಣೆಗಾಗಿ ” ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ಕೊಪ್ಪಳ ಜಿಲ್ಲಾ ವಕೀಲರ ಸಂಘದವರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಲ್ಕರ್ ಮುಖಾಂತರ  ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾದ ಮನವಿ ಸಲ್ಲಿಸಿದರು.

ವಕೀಲರು  ಅನೇಕ ಪ್ರಜೆಗಳ ಮಾನ , ಆಸ್ತಿ , ಜೀವಗಳನ್ನು ರಕ್ಷಣೆ ಮಾಡುವ ಕೆಲಸಗಳಲ್ಲಿ ತೊಡಗಿಕೊಂಡಿದ್ದು , ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ . ನಮಗೆ ಯಾವುದೇ ಕಾನೂನಿನ ರಕ್ಷಣೆ ಇಲ್ಲದಂತಾಗಿದೆ . ವಕೀಲರ ರಕ್ಷಣೆಗಾಗಿ “ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವದು ಅತ್ಯವಶ್ಯಕವಾಗಿದೆ . ಆದ್ದರಿಂದ , ಕೂಡಲೇ ತಾವುಗಳು ಕರ್ನಾಟಕದ ವಕೀಲರ ರಕ್ಷಣೆಗಾಗಿ ವಕೀಲರ ರಕ್ಷಣಾ ಕಾಯ್ದೆ ” ಯನ್ನು ಜಾರಿಗೆ ತಂದು ನಮ್ಮಲ್ಲಿ ವಕೀಲರ ಜೀವ , ಮಾನ , ಕುಟುಂಬಗಳನ್ನು ರಕ್ಷಿಸಲು ಶೀಘ್ರವಾಗಿ ಜಾರಿಗೊಳಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಮುಖ್ಯ ಧ್ವಾರದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಸ್ವಲ್ಪ ಹೊತ್ತು ಸಂಚಾರಕ್ಕೆ ಅಡ್ಡಿಯಾಗಿ ಪರದಾಡುವಂತಾಗಿತ್ತು. ನಂತರ ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ಎಂ.ಮಾರುತಿ ವಕೀಲರ ಸಂಘದ ಮನವಿ ಸ್ವೀಕರಿಸಿ ಸರಕಾರಕ್ಕೆ ಕಳಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ  ಜಿಲ್ಲಾಧ್ಯಕ್ಷ ಹೆಚ್.ಹೆಚ್.ಮುರಡಿ, ಬಸವರಾಜ್ ಸಜ್ಜನ್  ಕಾರ್ಯದರ್ಶಿ, ಉಪಾಧ್ಯಕ್ಷ ಜಿ.ಸಿ.ಗಮ್ಮಿಗಿ, ಪೀರಾಹುಸೇನ್ ಹೊಸಳ್ಳಿ, ಎ.ವಿ.ಕಣವಿ, ಹನುಮಂತ ಕೆಂಪಳ್ಳಿ,  ರಾಕೇಶ ಪಾನಗಂಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us: