Koppal ಸ್ಕೂಟಿ-ಬಸ್ ನಡುವೆ ಡಿಕ್ಕಿಯಿಂದ ಸ್ಕೂಟಿ ಚಲಾಯಿಸುತ್ತಿದ್ದ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಕೆಳಗೆ ಬಿದ್ದ ಸ್ಕೂಟಿ ಚಾಲನೆ ಮಾಡುತ್ತಿದ್ದ ಬಾಲಕಿಯ ತಲೆ ಮೇಲೆ ಬಸ್ ಹರಿದಿದ್ದರಿಂದ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಿನ್ನಾಳದ ದೇವಲಾಪೂರದ ಬಳಿ ಘಟನೆ ನಡೆದಿದ್ದು ಮೃತ ದುರ್ದೈವಿಯನ್ನು ನೇಹಾ ಶೆಡದ್ ಎಂದು ಗುರುತಿಸಲಾಗಿದೆ.
ತೇಜಸ್ವಿನಿ, ಗೌರಿ ತುಪ್ಪದ ಗಂಭೀರವಾಗಿ ಗಾಯಗೊಂಡ ಬಾಲಕಿಯರು ಎಲ್ಲರೂ
ಭಾಗ್ಯನಗರದ ನ್ಯಾಷನಲ್ ಸ್ಕೂಲ್ ನಲ್ಲಿ ೯ನೇ ತರಗತಿ ಓದುತ್ತಿದ್ದ ಬಾಲಕಿಯರು. ಕಿನ್ನಾಳ ಡ್ಯಾಂ ಗೆ ಬರ್ತಡೇ ಸೆಲೆಬ್ರೆಷನ್ ಗಾಗಿ ತೆರಳಿದ್ದರು.ವಾಪಸ್ ಬರುವಾಗ ದುರ್ಘಟನೆ ನಡೆದಿದ್ದು ಗಂಭೀರವಾಗಿ ಗಾಯಗೊಂಡ ಬಾಲಕಿಯರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪರಾರಿಯಾಗಿದ್ದ ಬಸ್ ಚಾಲಕನನ್ನು ಅರೆಸ್ಟ್ ಮಾಡಲಾಗಿದ್ದು ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹಂಪ್ಸ್ ನಿಂದಾಗಿ ಈ ದುರ್ಘಟನೆ ನಡೆದಿದೆ ಎಂದೂ ಹೇಳಲಾಗುತ್ತಿದೆ

Please follow and like us: