ಜೈಪುರ : ಸಹೋದ್ಯೋಗಿ ಪತ್ರಕರ್ತೆ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯುವ ಪ್ರಯತ್ನದಲ್ಲಿ ಹಲ್ಲೆಗೊಳಲಾಗಿದ್ದರು ಎನ್ನಲಾದ ಪತ್ರಕರ್ತ ಇಲ್ಲಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

“ಇಬ್ಬರು ಪತ್ರಕರ್ತರು ರಾತ್ರಿ 11.30ರ ಸಮಯದಲ್ಲಿ ಡಾಬಾಗೆ ತೆರಳಿದ್ದರು. ಅಲ್ಲಿಗೆ ಮೂವರು ಬೈಕ್ ‌ನಲ್ಲಿ ಬಂದಿದ್ದರು. ಆ ಬಳಿಕ ಪತ್ರಕರ್ತರು ಮೂವರ ನಡುವೆ ಹೊಡೆದಾಟ ನಡೆದಿತ್ತು” ಎಂದು ಮನ ಸರೋವರ ಠಾಣೆಯ ಅಧಿಕಾರಿ ದಿಲೀಪ್ ಕುಮಾರ್ ಹೇಳಿದ್ದಾರೆ.

 

ಈ ಗಲಾಟೆಯಲ್ಲಿ ಅಭಿಷೇಕ್ ಸೋನಿ ಎಂಬ ಪತ್ರಕರ್ತರ ತಲೆಗೆ ಗಾಯವಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರು ಬಳಿಕ ಮೃತಪಟ್ಟರು. ಸಿಸಿಟಿವಿ ದೃಶ್ಯಾವಳಿಯನ್ನು ನೋಡಿದಾಗ ದಾಳಿಕೋರರನ್ನು ಗುರುತಿಸುವ ಸಂಬಂಧ ಕೆಲ ಸುಳಿವು ಸಿಕ್ಕಿದೆ. ಶೀಘ್ರವೇ ಅವರನ್ನು ಬಂಧಿಸಲಾಗುವುದು” ಎಂದು ಅವರು ವಿವರಿಸಿದ್ದಾರೆ.

ಈ ಸಂಬಂಧ ಪೊಲೀಸರು ಭಾರತೀಯ ದಂಡಸಂಹಿತೆಯ ಸೆಕ್ಷನ್ 307ರಡಿ ಪ್ರಕರಣ ದಾಖಲಿಸಿದ್ದಾರೆ.

Please follow and like us: