ರೈತರಿಗಾಗಿ ಉಪವಾಸ ಸತ್ಯಾಗ್ರಹ : ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿದ ಚಿಂತಕ ಅನೀಸ್ ಪಾಷಾ

 

ದಾವಣಗೆರೆ : ರಾಜ್ಯದ

 ಪ್ರಗತಿಪರ ಚಿಂತಕರು, ಹೋರಾಟಗಾರರಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ ದಾವಣಗೆರೆಯ ವಕೀಲ, ಹೋರಾಟಗಾರ  ಅನೀಸ್ ಪಾಶ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ರೈತರ ಹೋರಾಟವನ್ನು ಬೆಂಬಲಿಸಿ  ಉಪವಾಸ ಸತ್ಯಾಗ್ರಹ ಮಾಡಿ ವಿಭಿನ್ನ ರೀತಿಯಲ್ಲಿ ರೈತರಿಗೆಹುಟ್ಟುಹಬ್ಬವನ್ನು ಸಮರ್ಪಣೆ ಮಾಡಿದರು.

ತನಗೆ ಹಾರ, ತುರಾಯಿ, ಉಡುಗೊರೆ ಕೊಡುವ ಬದಲಿಗೆ ನನ್ನ ದೇಶದ ದೆಹಲಿಯಲ್ಲಿ
ಹೋರಾಟನಿರತ ರೈತರು ಚಳಿಯನ್ನು ಲೆಕ್ಕಿಸದೆ ಹೋರಾಟ ಮಾಡುತ್ತಿದ್ದು, ಅವರಿಗೆ ರಗ್ಗು,ಬೆಡ್‍ಶೀಟ್ ಅಥವಾ ಟೋಪಿಗಳನ್ನು  ನೀಡಲು ಮನವಿ ಮಾಡಿಕೊಂಡಿದ್ದರಿಂದ ಬೆಡ್‍ಶೀಟ್, ರಗ್ಗು, ಶಾಲ್ ಮತ್ತುಟೋಪಿಗಳನ್ನು ರೈತರಿಗೆ ವಿವಿಧ ಸಂಘಟನೆಯವರುಉಡುಗೊರೆಯಾಗಿ ನೀಡಿದರು. ಬೆಳಿಗ್ಗೆ 10:00 ಘಂಟೆಯಿಂದ ಕಾರ್ಯಕ್ರಮವನ್ನು ಪ್ರಾರಂಭಿಸಿ ಈ ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಅನೀಸ್ ಪಾಶರವರು ಮಾತನಾಡಿ ಭಾರತ ದೇಶದಲ್ಲಿ ರೈತನು ಈಗ ಸಂಕಷ್ಟದಲ್ಲಿದ್ದು, ರೈತರ ಒಳತಿಗಾಗಿ ಕಾನೂನು ತಂದಿದ್ದೇವೆ ಎಂದು ಸರ್ಕಾರಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಯಾವುದೇ ಕಾನೂನು ಜಾರಿಗೊಳಿಸುವ ಪೂರ್ವದಲ್ಲಿ ಅದರ ಆಗು ಹೋಗುಗಳನ್ನು ದೇಶಾಧ್ಯಾಂತ ಕೂಲಂಕುಶವಾಗಿ ಚರ್ಚಿಸಿ ರೈತರ ಸಲಹೆಗಳನ್ನು ಪಡೆದು ಸಂಸತ್ತಿನಲ್ಲಿ ಚರ್ಚೆ ನಡೆದ ನಂತರ ಅದನ್ನು ಮಂಡಿಸಲಾಗುತ್ತದೆ. ಆದರೆ ಈ ನಿಯಮದ ವಿರುದ್ಧವಾಗಿ ಏಕಾಏಕಿ ಕಾನೂನುಗಳನ್ನು ಜಾರಿಗೊಳಿಸಿ ಆ ನಂತದಲ್ಲಿ ಒತ್ತಡ  ಹೇರುವುದು ಸರಿಯಲ್ಲ. ಅದರ ವಿರುದ್ಧ ಹೋರಾಟ ಮಾಡಿದರೆ ಇವರು ರೈತರೇ ಅಲ್ಲ ವಿರೋಧ ಪಕ್ಷಗಳ ಪಿತೂರಿ, ಪಾಕಿಸ್ಥಾನದ ಏಜೆಂಟ್ಎಂದು ಹೇಳಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿವೆ. ಸವೋಚ್ಚ ನ್ಯಾಯಾಲಯವು ಕೂಡ ರೈತರ ನೋವನ್ನು ಅರ್ಥ ಮಾಡಿಕೊಳ್ಳದೆ ಆ ಕಾನೂನಿಗೆ ತಡೆಯನ್ನು ನೀಡದೆ ಜನವರಿ ತಿಂಗಳಿಗೆ ಮುಂದೂಡಿರುವುದು ಆಶ್ಚರ್ಯಕರ ಮತ್ತು ನೋವಿನ ಸಂಗತಿಯಾಗಿದೆ. ಹಾಗಾಗಿ ಸವೋಚ್ಚ ನ್ಯಾಯಾಲಯ ಈ ವಿಷಯದಲ್ಲಿವಿಳಂಬ ನೀತಿ ಅನುಸರಿಸಬಾರದು. ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ರೈತಮುಖಂಡರಾದ ತೇಜಸ್ವಿ ಪಟೇಲ್‍ರ ವರು ಮಾತನಾಡಿ ಹೋರಾಟ ಮಾಡುತ್ತಿರುವವರು ರೈತರೇ ಅಲ್ಲ ಎಂದು ಅಪವಾದ ಮಾಡುತ್ತಿದ್ದು, ಹೋರಾಟ ಮಾಡಲು ಪಾಹಣಿಗಳನ್ನು ಹಿಡಿದುಕೊಂಡು ಬಂದು
ಹೋರಾಟವನ್ನು ಮಾಡಬೇಕಾ ಕಾನೂನನ್ನು ಮಾಡುವಾಗ ಎಷ್ಟು ಜನ ಸಂಸದರು ಪಾಹಣಿಯನ್ನು ಹೊಂದಿದವರು ಕುಳಿತು ಕಾನೂನನ್ನು ತಂದಿದ್ದಾರೆ ಎಂದು ಪ್ರಶ್ನೆ ಮಾಡಿ ತಮ್ಮ ಒಂದು ತಿಂಗಳ ಗೌರವ ಧನವನ್ನು ರೈತರಿಗಾಗಿ ನೀಡಿರುತ್ತಾರೆ. ಮತ್ತೊಬ್ಬ ರೈತ ಮುಖಂಡರವರಾದ ಉಚ್ಚವ್ವನಹಳ್ಳಿ ಮಂಜುನಾಥ್‍ರವರು ಮಾತನಾಡಿ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ
ರೈತರಿಗೆ ವಿಭಿನ್ನ ರೀತಿಯಲ್ಲಿ ಸರ್ಕಾರಗಳು ತೊಂದರೆ ಮಾಡಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿವೆ. ಈ ಕಾಯ್ದೆಗಳನ್ನು ತಕ್ಷಣ ರದ್ದುಗೊಳಿಸಬೇಕೆಂದು ಒತ್ತಾಯ ಮಾಡಿದರು. ಜೆ.ಡಿ.ಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಸಿ ಗುಡ್ಡಪ್ಪರವರು ಮಾತನಾಡಿ ಮೂರು ಕಾಯ್ದೆಗಳು ರೈತರಿಗೆ ಮಾರಕವಾಗಿದ್ದು, ಈ ಕಾಯ್ದೆಗಳನ್ನು ಈ ತಕ್ಷಣ ರದ್ದುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಸಾಯಂಕಾಲ 5:00 ಘಂಟೆಗೆ ಉಪವಾಸ ಮುಕ್ತಾಯ ಸಮಾರಂಭಕ್ಕೆ ಪ್ರೊಫೆಸರ್ ಎ.ಬಿ ರಾಮಚಂದ್ರಪ್ಪರವರು ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಜೆ.ಡಿ.ಎಸ್ವಕ್ತಾರ ಜಸ್ಟೀನ್ ಜಯಕುಮಾರ, ನಾಗೇಂದ್ರಪ್ಪ, ಅರುಣ್, ಮಂಜುನಾಥ್, ಜನಶಕ್ತಿಯ ಸತೀಶ್ ಅರವಿಂದ್, ಆದಿಲ್ ಖಾನ್, ಪರಿಸರ ಸಂರಕ್ಷಣೆಯ ಗಿರೀಶ್ ದೇವರಮನೆ, ನಾವು ಭಾರತೀಯರು ಸಂಘಟನೆಯ ಟಿ. ಅಸ್ಗರ್, ಕರಿಬಸಪ್ಪ, ಜಬೀನಾ ಖಾನಂ, ಜಿಲ್ಲಾ ಪಂಚಾಯ್ತಿ ಕಾಂಗ್ರೇಸ್ ಸೇವಾದಳ ಡೋಲಿ ಚಂದ್ರು, ಜಮಾತೆ ಇಸ್ಲಾಮಿನ ಅಯೂಬ್, ಮುಸ್ಲಿಂ ಲೀಗ್‍ನ ಅತಾವುಲ್ಲಾ, ಶ್ರೀಧರ್ ಪಾಟಿಲ್, ಹಿದಾಯತ್ ಖಾನ್, ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್‍ನ ರಹಮತ್, ಜಬ್ಬಾರ್, ಖಲೀಲ್, ಟಿ.ಪರಶುರಾಮ್, ಹನೀಫ್ ಸಿ. ಸೀರಾಜುದ್ದೀನ್, ಮುಸ್ತಾಫಾ, ಇರ್‍ಫಾನ್,
ಶಮೀಮ್ ಪಾಶ, ಮುನ್ನಾ, ಹಯಾತ್, ಚಂದ್ರು, ಅನಿಲ್ ಕುಮಾರ್, ಬಕ್ಷಿ, ಅಶ್ರಫ್ , ಇಂತಿಯಾಜ್, ಮತ್ತಿತರರು ಉಪಸ್ಥಿತರಿದ್ದರು. ವಕೀಲ, ಹೋರಾಟಗಾರ, ಚಿಂತಕ ಅನೀಸ್ ಪಾಷಾರವರ ಈ ವಿಶಿಷ್ಟ ರೀತಿಯಪ್ರತಿಭಟನೆ ಜನಮೆಚ್ಚುಗೆಗೆ ಪಾತ್ರಾಗಿದೆ.

Please follow and like us: