ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಾರ್ಯ ಶ್ಲಾಘನೀಯ : ಡಿಸಿ

ಕೊಪ್ಪಳ : ಜಿಲ್ಲೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ಅನೇಕ ಮಹದುzಶಗಳನ್ನು ಹೊಂದಿರುವುದರಿಂದ ಅದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧುವಾರ ನಡೆದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಶಾಖೆಯ ವಾರ್ಷಿಕ ಲೆಕ್ಕ ಪತ್ರ ಪರಿಶೋಧನೆ ಮತ್ತು ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇದುವರೆಗೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿರುವುದು ಅದರ ವರದಿಯಿಂದಲೇ ಗೊತ್ತಾಗುತ್ತದೆ. ಅಲ್ಲದೆ ಈಗಾಗಲೇ ಅದು ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ವಿಪತ್ತು ನಿರ್ವಹಣೆಯಲ್ಲಿ ಸಾಕಷ್ಟು ಶ್ರಮಿಸಿದ್ದಾರೆ.
ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದಕ್ಕೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅತ್ಯುತ್ತಮಮ ಅವಕಾಶ ಒದಗಿಸುತ್ತದೆ. ಸ್ವಯಂ ಪ್ರೇರಣೆಯಿಂದ ಸೇವೆ ಮಾಡುವುದಕ್ಕೆ ಇದು ಸೂಕ್ತ ವೇದಿಕೆಯಾಗಿದೆ.
ಈಗಾಗಲೇ ರಕ್ತನಿಧಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕಣ್ಣಿನ ಸಂಗ್ರಹಣಾ ಘಟಕವನ್ನು ಪ್ರಾರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಐ ಬ್ಯಾಂಕ್ ಸಹ ಮಾಡುವ ಗುರಿ ಇದೆ. ಇದರ ಜೊತೆಗೆ ದೇಹ ಬ್ಯಾಂಕ್, ಚರ್ಮ ಬ್ಯಾಂಕ್ ಸೇರಿದಂತೆ ಅಂಗಾಗಳ ಬ್ಯಾಂಕ್ ಸಂಕೀರಣವನ್ನು ಸ್ಥಾಪನೆ ಮಾಡುವ ಗುರಿ ಹೊಂದಲಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಖಜಾಂಚಿ ಆನಂದ ಜಿಗಜಿಣಗಿ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕೊಪ್ಪಳದಲ್ಲಿ ನಮ್ಮ ಶಾಖೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ಇತರೆ ಜಿಲ್ಲೆಗೆ ಮಾದರಿಯಾಗಿದೆ.
ರೆಡ್ ಕ್ರಾಸ್ ಭವನ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕಾಗಿ ಮೊದಲ ಹಂತವಾಗಿ ರಾಜ್ಯ ಶಾಖೆಯಿಂದ ೨೦ ಲಕ್ಷ ರುಪಾಯಿ ನೀಡಲಾಗುವುದು. ಇನ್ನು ಹಂತಹಂತವಾಗಿ ನೀಡಲಾಗುವುದು ಎಂದರು.
ಇಲ್ಲಿ ರಕ್ತ ನಿಧಿ ಅತ್ಯುತ್ತಮವಾಗಿದ್ದು, ಕೇವಲ ಸ್ಥಳೀಯ ರಕ್ತದ ಬೇಡಿಕೆಯನ್ನು ಅಷ್ಟೇ ಅಲ್ಲಾ, ನಾನಾ ಜಿಲ್ಲೆಗೂ ಇಲ್ಲಿಗೆ ರಕ್ತ ಪೂರೈಕೆ ಮಾಡಿರುವುದು ಶ್ಲಾಘನೀಯ ಎಂದರು. ಕೊಪ್ಪಳ ಶಾಖೆಗೆ ಅಗತ್ಯ ಎಲ್ಲ ಸೌಕರ್ಯವನ್ನು ರಾಜ್ಯ ಶಾಖೆಯಿಂದ ನೀಡುವುದಕ್ಕೆ ನಾನು ಕಟಿಬದ್ಧವಾಗಿzನೆ ಎಂದರು.
ಜಿಪಂ ಸಿಇಓ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಉಪಾಧಕ್ಷ ರಘುನಂದನ್‌ಮೂರ್ತಿ ಅವರು ಮಾತನಾಡಿ, ಕೊಪ್ಪಳದಲ್ಲಿ ರೆಡ್ ಕ್ರಾಸ್ ಉತ್ತಮ ಕೆಲಸ ಮಾಡುವುದರ ಬಗ್ಗೆ ಕೇಳಿzನೆ. ಆದರೆ, ಈಗ ಅದನ್ನು ಇನ್ನಷ್ಟು ಉತ್ತಮ ಮಾಡಲು ಏನು ಮಾಡಬೇಕು ಎನ್ನುವುದನ್ನು ಸಾಮಾನ್ಯ ಸಭೆಯಲ್ಲಿ ಅಭಿಪ್ರಾಯ ಸಂಗ್ರಹ ಮಾಡಿ, ಅದನ್ನು ಅನುಸರಿಸಿ ಎಂದರು.
ರೆಡ್ ಕ್ರಾಸ್ ರಾಜ್ಯ ಪ್ರಧಾನಕಾರ್ಯದರ್ಶಿ ವಿಜಯಕುಮಾರ ಪಾಟೀಲ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ ಅವರು ವಾರ್ಷಿಕ ವರದಿ ವಾಚನ ಮಾಡಿದರೇ ಖಜಾಂಚಿ ಸುದೀರ್ ಅವರಾದಿ ಅವರು ವಾರ್ಷಿಕ ಲೆಕ್ಕಪತ್ರ ವರದಿ ನೀಡಿ, ಅನುಮೋದನೆ ಪಡೆದರು. ಉಪಾಧಕ್ಷರಾದ ಡಾ. ಸಿ.ಎಸ್ ಕರಮುಡಿ ಅವರು ಸ್ವಾಗತಿಸಿದರು. ನಿರ್ದೇಶಕ ಸೋಮರಡ್ಡಿ ಅಳವಂಡಿ ಪ್ರಸ್ಥಾವಿಕ ಮಾತನಾಡಿದರು. ಮಂಜುನಾಥ ಸಜ್ಜನ ಕಾರ್ಯಕ್ರಮ ನಿರೂಪಿಸಿದರು. ಡಾ. ಗವಿಸಿದ್ದನಗೌಡ ಅವರು ವಂದನೆ ಮಾಡಿದರು.
ಪದಾಧಿಕಾರಿಗಳ ಆಯ್ಕೆ ಃ- ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮುಂದಿನ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಅವರು ಘೋಷಣೆ ಮಾಡಿದರು.
ಡಾ. ಚಂದ್ರಶೇಖರ ಕರಮುಡಿ, ಡಾ. ಶ್ರೀನಿವಾಸ ಹ್ಯಾಟಿ, ಸೋಮರಡ್ಡಿ ಅಳವಂಡಿ, ಸುಧೀರ ಅವರಾದಿ, ಡಾ. ಮಂಜುನಾಥ ಸಜ್ಜನ, ರಾಜೇಶ ಯಾವಗಲ್, ಡಾ. ಗವಿಸಿದ್ದನಗೌಡ, ಡಾ. ಶಿವನಗೌಡ ಸಿ.ಡಿ., ಡಾ. ರವಿ ದಾನಿ ಹಾಗೂ ಡಾ. ಶಿವನಗೌಡ ಪಾಟೀಲ ಅವರು ಕಾರ್ಯಕಾರಿ ಸಮಿತಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು.

Please follow and like us: