ಜಿಲ್ಲೆ ವಿಭಜನೆ ವಿರೋಧಿಸಿ ಬಳ್ಳಾರಿ ಬಂದ್,ಪ್ರತಿಭಟನೆ

ಕತ್ತೆಗಳ ಮೆರವಣಿಗೆ ಮಾಡಿದ ಹೋರಾಟಗಾರರು

ಬಳ್ಳಾರಿ : ಗಣಿನಾಡು ಬಳ್ಳಾರಿ ಜಿಲ್ಲೆಯ ವಿಭಜನೆ ವಿರೋಧಿಸಿ ಅಖಂಡ ಬಳ್ಳಾರಿ ಜಿಲ್ಲೆ ಉಳಿವಿಗಾಗಿ ಒತ್ತಾಯಿಸಿ ಮಳೆಯಲ್ಲೂ  ಬಳ್ಳಾರಿ ಬಂದ್ ಪ್ರಾರಂಭವಾಗಿದೆ. 15 ನಾನಾ ಸಂಘಟನೆಗಳು ಮತ್ತು ಆಟೋ ಚಾಲಕರು ಬಹಿರಂಗ ಬೆಂಬಲ ನೀಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಬಳ್ಳಾರಿ ಬಂದ್ ಮಾಡಲಾಗುತ್ತದೆ-  ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯಲಿರೋ  ಬಂದ್-ಗೆ ಬಿಜೆಪಿ ಶಾಸಕ  ಸೋಮಶೇಖರ್ ರೆಡ್ಡಿ , ಕೈ ಶಾಸಕ ನಾಗೇಂದ್ರ ಬಹಿರಂಗವಾಗಿ ಬಂದ್ ನಲ್ಲಿ ಭಾಗಿಯಾಗೋಲ್ಲಾ, ನೈತಿಕ ಬೆಂಬಲ ಮಾತ್ರ ಎಂದು ಘೋಷಣೆ ಮಾಡಿದ್ದಾರೆ ಇಬ್ಬರು ಶಾಸಕರು- ಕೆಲ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಲಿದ್ದಾರೆ, ಪ್ರಮುಖ ನಾಯಕರು ಪಕ್ಷ ತಿರ್ಮಾನ ಮಾಡಿಲ್ಲಾ ಅಂತಿದ್ದಾರೆ-  ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡುವಂತೆ ಮನವಿ ಮಾಡಿರೋ ಹೋರಾಟಗಾರರು- ಜನ ಸೈನ್ಯ ಸಂಘಟನೆಯಿಂದ ಶ್ರೀ ಕನಕ ದುರ್ಗಮ್ಮ ದೇವಾಲಯದ ಬಳಿ ಉರುಳು ಸೇವೆ ಕೂಡ ಮಾಡಲಾಯಿತು. ಪರಿಸ್ಥಿತಿ ನೋಡಿಕೊಂಡು ರಾಜ್ಯ ಸಾರಿಗೆ ಬಸ್ ಗಳ ಸಂಚಾರ ನಡೆಸಲು ತಿರ್ಮಾನ ಮಾಡಿರೋ KSRTC ಡಿಸಿ.

ಬಳ್ಳಾರಿ ಬಂದ್ ಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದ್ದು- 3 ಜನ DYSP, 18 ಜನ CPI, 40 ಜನ ಪಿಎಸ್ಐ, 200 HC-  PCಗಳು, 3 DAR ತುಕಡಿಗಳನ್ನು ನೇಮಕ ಮಾಡಲಾಗಿದೆ ಎಂದು ಬಳ್ಳಾರಿ ಎಸ್ಪಿ ಸೈದುಲು ಅಡಾವತ್ ಮಾಹಿತಿ ನೀಡಿದ್ದಾರೆ. ಎರಡು ಕತ್ತೆಗಳನ್ನು ತಂದ ಹೋರಾಟಗಾರರು-
ಒಂದು ಕತ್ತೆ ಯಡಿಯೂರಪ್ಪ ಮತ್ತೊಂದು ಕತ್ತೆ ಆನಂದ ಸಿಂಗ್ ಎಂದು
ಕತ್ತೆ ಮೇಲೆ ಕುಳಿತು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿ ಎಸ್ಪಿ ಸೈದುಲ್ ಅಡಾವತ್ ಹೋರಾಟಗಾರರಿಗೆ ಎಚ್ಚರಿಕೆ.
ಯಾವುದೇ ಕಾರಣಕ್ಕೂ ಬಲವಂತದ ಬಂದ್ ಮಾಡುವಂತಿಲ್ಲ. ಅಂಗಡಿ ಮುಚ್ಚುವಂತೆ ಒತ್ತಾಯ ಮಾಡಿದ್ರೆ ಕ್ರಮದ ಎಚ್ಚರಿಕೆ.

ಬಳ್ಳಾರಿ ಬಂದ್- ಬಳ್ಳಾರಿಯಲ್ಲಿ ಬಂದ್ ಗೆ ಬೆಂಬಲ ನೀಡಿದ ಸಾರ್ವಜನಿಕರು. ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಲಾಗಿದೆ- ಯಾವುದೇ ರೀತಿಯ ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಲಾಗಿದೆ- ಬೀಗಿ ಪೊಲೀಸ್ ಬಂದೋಬಸ್ತ್

Please follow and like us: