ದೇವದುರ್ಗ ಕ್ರಿಕೆಟ್ ಬುಕ್ಕಿಗಳ ಬಂಧನ

ದೇವದುರ್ಗ : ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಕ್ರಿಕೆಟ್ ಬುಕ್ಕಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 5300 ರೂ. ನಗದು ಹಣ ಹಾಗೂ ಎರಡು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ . ಬಂಧಿತರ ಹೆಸರು) ಶ್ರೀನಿವಾಸ್ ತಂದೆ ಚಂದಣ್ಣ ಸಾ: ರಾಷ್ಟ್ರಪತಿ ಓಣಿ ದೇವದುರ್ಗ , ರಮೇಶ್ ತಂದೆ ಸುಭಾಷ್ ಸಾ: ಹೇಮನೂರು .

ತನಿಖಾಧಿಕಾರಿಗಳು ಬಸವರಾಜ ಸಿಹೆಚ್ ಸಿ 07 ಪೊಲೀಸ್ ಠಾಣೆ ದೇವದುರ್ಗ 10 ಪ್ರಕರಣದ ಸಂಕ್ಷಿಪ್ತ ಸಾರಾಂಶ : – ದಿನಾಂಕ 30/09/2020 ರಂದು ರಾತ್ರಿ 07-30 ಗಂಟೆಗೆ ಪಿಎಸ್.ಐರವರು ಠಾಣೆಯಲ್ಲಿದ್ದಾಗ ದೇವದುರ್ಗ ಪಟ್ಟಣದ ನಗರಗುಂಡ ಕ್ರಾಸ್ ಹತ್ತಿರ ಕ್ರಿಕೆಟ್ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಬಾತ್ಮಿ ಇದ್ದ ಮೇರೆಗೆ ಮಾನ್ಯ ಡಿ.ಎಸ್.ಪಿ & ಸಿಪಿಐ ದೇವದುರ್ಗ ರವರ ಮಾರ್ಗದರ್ಶನದಲ್ಲಿ ಪಿಎಸ್.ಐರವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ದೇವದುರ್ಗ ಪಟ್ಟಣದ ನಗರಗುಂಡ ಕ್ರಾಸ್ ಹತ್ತಿರ ಅಂಗಡಿ ಮರೆಯಲ್ಲಿ ನಿಂತು ನೋಡಿದ್ದು ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಇಂದು ಕೊಲ್ಕತ್ತಾ ನೈಟ್ ರೈಡರ , ರಾಜಸ್ಥಾನ ರಾಯಲ್ ಪಂದ್ಯಗಳ ಮಧ್ಯೆ ಕ್ರಿಕೇಟ್ ನಡೆಯುತ್ತಿದ್ದು , ಕೊಲ್ಕತ್ತಾ ನೈಟ್ ರೈಡರ್ ಗೆಲ್ಲುತ್ತದೆ ಅಂತಾ ನನಗೆ 100 / – ರೂ ಕೊಟ್ಟರೆ 1000 / – ರೂ ಕೊಡುತ್ತೇನೆ ಅಂತಾ ಕೂಗಾಡುತ್ತಾ ಜನರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದಾಗ ರಾತ್ರಿ 08-15 ಗಂಟೆಗೆ ದಾಳಿ ಮಾಡಿದ್ದು , ಇಬ್ಬರು ವ್ಯಕ್ತಿಗಳು ಸಿಕ್ಕಿಬಿದ್ದಿದ್ದು ಉಳಿದವರು ಸ್ಥಳದಿಂದ ಓಡಿ ಹೋಗಿದ್ದು , ಸಿಕ್ಕಿಬಿದ್ದ ವ್ಯಕ್ತಿಗಳ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನ ಮಾಡಿ ನೋಡಿದ್ದು . 1 ) ಶ್ರೀನಿವಾಸ ತಂದೆ ಚಂದಣ್ಣ ವಯಾ -46 ಚಾ- ಮರಾಠ – ಪಾನ್ ಶಾಪ್ ಅಂಗಡಿ ಸಾ- ರಾಷ್ಟ್ರಪತಿ ಓಣಿ ದೇವದುರ್ಗ ಈತನ ವಶದಲ್ಲಿ 3100 / – ರೂ ನಗದು ಹಣ ಹಾಗೂ ಜೂಜಾಟದ ಸಾಮಾಗ್ರಿ ಒಂದು ಸ್ಯಾಮ್ಸಂಗ್ ಮೊಬೈಲ್ ಸಿಕ್ಕಿದ್ದು 2 ) ರಮೇಶ ತಂದೆ ಸುಭಾಶ್ ವಯಾ -30 ಔಾ- ಹಡಪದ – ಕಟಿಂಗ್ ಶಾಪ್ ಅಂಗಡಿ ಸಾ- ಹೇಮನೂರ ಈತನ ವಶದಲ್ಲಿ 2200 / – ರೂ ನಗದು ಹಣ , ಹಾಗೂ ಜೂಜಾಟದ ಸಾಮಾಗ್ರಿ ಸ್ಯಾಮ್ಸಂಗ್ ಮೊಬೈಲ್ ಸಿಕ್ಕಿದ್ದು , ಹೀಗೆ ಒಟ್ಟು 5300 / ರೂ ನಗದು ಹಣ ಹಾಗೂ ಜೂಜಾಟದ ಸಾಮಾಗ್ರಿಗಳಾದ ಎರಡು ಮೊಬೈಲಗಳನ್ನು ಒಂದು ಕವರನಲ್ಲಿ ಹಾಕಿಕೊಂಡು ಅದಕ್ಕೆ ಪಂಚರ ಸಹಿಯುಳ್ಳ ಹಾಗೂ ಪಿಎಸ್.ಐರವರು ತಮ್ಮ ಸಹಿಯುಳ್ಳ ಚೀಟಿಯನ್ನು ಅಂಟಿಸಿ ಇಬ್ಬರು ಆರೋಪಿತರೊಂದಿಗೆ ವಶಕ್ಕೆ ಪಡೆದುಕೊಂಡು ಠಾಣೆಗೆ ರಾತ್ರಿ 21-30 ಗಂಟೆಗೆ ಬಂದು ದಾಳಿ ಪಂಚನಾಮ ಮುದ್ದೆಮಾಲು ಹಾಗೂ ಇಬ್ಬರು ಆರೋಪಿತರನ್ನು ಹಾಜರುಪಡಿಸಲಾಗಿದೆ.

Please follow and like us:
error