ಹಾವೇರಿ 12 ಜನರಿಗೆ ಸೋಂಕು – 33 ಜನ ಗುಣಮುಖ- ಸಕ್ರಿಯ ಪ್ರಕರಣಗಳ ಇಳಿಮುಖ


ಹಾವೇರಿ: ಕೆನರಾ ಬ್ಯಾಂಕ್ ಉದ್ಯೋಗಿ ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ 12 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 33 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 334 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. ಇಂದಿನವರೆಗೆ 244 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ ಈವರೆಗೆ ಏಳು ಜನರು ಮೃತಪಟ್ಟಿದ್ದಾರೆ. 83 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾಹಿತಿ ನೀಡಿದ್ದಾರೆ.
ಗುರುವಾರ ಹಾವೇರಿ ನಗರದ 11 ಹಾಗೂ ರಾಣೇಬೆನ್ನೂರು ನಗರದ ಓರ್ವರಿಗೆ ಕೋವಿಡ್ ಸೋಂಖು ದೃಢಪಟ್ಟಿದೆ. ಸೋಂಕಿತರನ್ನು ನಿಗಧಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾವೇರಿ ವಿದ್ಯಾನಗರದ ನಿವಾಸಿ ಕೆನರಾ ಬ್ಯಾಂಕಿನ ಸೂಪರ್‍ವೈಸರ್ 33 ವರ್ಷದ ಪುರುಷ(ಎಚ್.ವಿ.ಆರ್-318), ಶಿವಬಸವನಗರ ಕಂಟೈನ್ ಮೆಂಟ್ ಜೋನ್‍ನ ಪಿ-25371 ಸೋಂಕಿತನ ಸಂಪರ್ಕಿತ 31 ವರ್ಷದ ಮಹಿಳೆ(ಎಚ್.ವಿ.ಆರ್.-319), ಮೆಹಬೂಬನಗರದ 38 ವರ್ಷದ ಪುರುಷ(ಎಚ್.ವಿ.ಆರ್-320), 22 ವರ್ಷದ ಮಹಿಳೆ(ಎಚ್.ವಿ.ಆರ್-321), 26 ವರ್ಷದ ಮಹಿಳೆ ಎಚ್.ವಿ.ಆರ್-322), ಶಿವಾಜಿನಗರ ಮೊದಲ ಕ್ರಾಸ್‍ನ ಪಿ-28497ರ ಸೋಂಕಿತರ ಸಂಪರ್ಕಿತರಾದ ಆರು ವರ್ಷದ ಗಂಡು ಮಗು(ಎಚ್.ವಿ.ಆರ್-323), 32 ವರ್ಷದ ಮಹಿಳೆ (ಎಚ್.ವಿ.ಆರ್-324), 35 ವರ್ಷದ ಮಹಿಳೆ(ಎಚ್.ವಿ.ಆರ್-325), 65 ವರ್ಷದ ಮಹಿಳೆ (ಎಚ್.ವಿ.ಆರ್-326), ಎಂಟು ವರ್ಷದ ಬಾಲಕ(ಎಚ್.ವಿ.ಆರ್-327), ನಾಲ್ಕು ವರ್ಷದ ಬಾಲಕ (ಎಚ್.ವಿ.ಆರ್-328) ಹಾಗೂ ರಾಣೇಬೆನ್ನೂರಿನ ಮಾರುತಿ ನಗರದ ಐ.ಎಲ್.ಐ ಲಕ್ಷಣಹೊಂದಿದ 26 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಕೆನರಾ ಬ್ಯಾಂಕ್ ಉದ್ಯೋಗಿ 33 ವರ್ಷದ ಪುರುಷ ಲಕ್ಷ್ಮೇಶ್ವರದಿಂದ ಹಾವೇರಿಗೆ ಹೋಗಿ ಬಂದವನಾಗಿರುತ್ತಾನೆ. ರ್ಯಾಪಿಟ್ ಆಂಟಿಗೇನ್ ಕಿಟ್ ಮೂಲಕ ಜುಲೈ 14 ರಂದು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿರುತ್ತದೆ. ಶಿವಾಜಿನಗರದ 31 ವರ್ಷದ ಸೋಂಕಿತೆ ಪಿ-25371 ಸಂಪರ್ಕಿತೆಯಾಗಿದ್ದು, ಜುಲೈ 14 ರಂದು ರ್ಯಾಪಿಟ್ ಅಂಟಿಗೇನ್ ಕಿಟ್ ಮೂಲಕ ಪರೀಕ್ಷೆಗೆ ಒಳಪಡಿಸಿದ್ದು, ಪಾಸಿಟಿವ್ ಬಂದಿರುತ್ತದೆ. ಮೆಹಬೂಬ ನಗರದ ಮೂರು ಜನರ ಸ್ವಾಬ್ ಪರೀಕ್ಷೆಯನ್ನು ಜುಲೈ 14 ರಂದು ರ್ಯಾಪಿಟ್ ಆಂಟಿಗೇನ್ ಕಿಟ್ ಮೂಲಕ ಮಾಡಲಾಗಿದ್ದು, ಪಾಸಿಟಿವ್ ಬಂದಿರುತ್ತದೆ (ಇವರ ತಂದೆ ಜುಲೈ 7 ರಂದು ಎಸ್.ಡಿ.ಎಂ.ಸಿ. ದಾಖಲಾಗಿ ಅಲ್ಲೆ ಸ್ವಾಬ್ ಪರೀಕ್ಷೆಗೆ ಒಳಪಡಿಸಿದಾಗ ಜುಲೈ 10 ರಂದು ಪಾಸಿಟಿವ್ ದೃಢಪಟ್ಟಿದ್ದು ಅಲ್ಲಿಯೇ ಮರಣಹೊಂದಿರುತ್ತಾರೆ). ಶಿವಬಸವನಗರದ ಏಳು ಜನ ಸೋಂಕಿತರು ಪಿ-28497ರ ಸಂಪರ್ಕಿತರಾಗಿದ್ದು, ಜುಲೈ 11 ರಂದು ಇವರ ಸ್ವಾಬ್ ಪರೀಕ್ಷೆ ಮಾಡಲಾಗಿದ್ದು, ಜುಲೈ 15 ರಂದು ಪಾಸಿಟಿವ್ ದೃಢಪಟ್ಟಿದೆ. ರಾಣೇಬೆನ್ನೂರಿನ ಮಾರುತಿ ನಗರದ ನಿವಾಸಿ ಐ.ಎಲ್.ಐ. ಲಕ್ಷಣ ಕಾರಣ ಜುಲೈ 13 ರಂದು ಪರೀಕ್ಷೆಗೆ ಒಳಪಡಿಸಲಾಗಿದ್ದು, ಜುಲೈ 14 ರಂದು ಪಾಸಿಟಿವ್ ಬಂದಿರುತ್ತದೆ.

ನಿಯಮಾನುಸಾರ ಸೋಂಕಿತರ ನಿವಾಸ ಇರುವ ಪ್ರದೇಶದ 100 ಮೀಟರ್ ಪ್ರದೇಶವನ್ನು ಕಂಟೈನಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಹಾಗೂ ನಿವಾಸದ 200 ಪ್ರದೇಶವ ಬಫರ್ ಜೋನ್ ಆಗಿ ಘೋಷಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಆಯಾ ತಾಲೂಕಾ ತಹಶೀಲ್ದಾರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಇಂದು ಬಿಡುಗಡೆ: ಹಾವೇರಿ-14, ಶಿಗ್ಗಾಂವ-06, ಬ್ಯಾಡಗಿ ಹಾಗೂ ಹಾನಗಲ್ ತಲಾ ನಾಲ್ಕು, ಸವಣೂರು-3, ಹಿರೇಕೆರೂರು -02 ಸೇರಿ 33 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. (ಪಿ-34997, ಪಿ-34998, ಪಿ-34999, ಪಿ-35000, ಪಿ-35001, ಪಿ-28406, ಪಿ-31833, ಪಿ-30686, ಪಿ-31830, ಪಿ-37067, ಪಿ-37083, ಪಿ-31636, ಪಿ-31845, ಪಿ-31847, ಪಿ-31,839, ಪಿ-31837, ಪಿ-31913, ಪಿ-31808, ಪಿ-31797, ಪಿ-31794, ಪಿ-31789, ಪಿ-31795, ಪಿ-31886, ಪಿ-31890, ಪಿ-31893, ಪಿ-31906, ಪಿ-31916, ಪಿ-31925, ಪಿ-31,926, ಪಿ-31907, ಪಿ-31801, ಪಿ-31841, ಪಿ-35003,)