ಚಾಮರಾಜನಗರ ರ್ಯಾಪಿಡ್ ಆಂಟಿಜನ್ ಟೆಸ್ಟ್ ಕಿಟ್ ಹಂಚಿಕೆ : ಪರಿಣಾಮಕಾರಿ ಬಳಕೆಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಆದೇಶ

ಚಾಮರಾಜನಗರ, – ಕೋವಿಡ್-19ರ ಪ್ರಕರಣಗಳನ್ನು ಶೀಘ್ರ ಪತ್ತೆಹಚ್ಚಲು ಅನುಕೂಲವಾಗುವ ಒಂದು ಸಾವಿರ ರ್ಯಾಪಿಡ್ ಆಂಟಿಜನ್ ಟೆಸ್ಟ್ ಕಿಟ್‍ಅನ್ನು ಜಿಲ್ಲೆಗೆ ನೀಡಲಾಗಿದ್ದು ಇದರ ಪರಿಣಾಮಕಾರಿ ಬಳಕೆಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಆದೇಶಿಸಿದ್ದರೆ.

ಕೋವಿಡ್-19 ಪ್ರಕರಣಗಳು ಹೆಚ್ಚಾಗುತಿರಯವ ಹಿನ್ನೆಲೆಯಲ್ಲಿ ಸರ್ಕಾರವು ಜಿಲ್ಲೆಗೆ ಒಂದು ಸಾವಿರ ರ್ಯಾಪಿಡ್ ಆಂಟಿಜನ್ ಟೆಸ್ಟ್ ಕಿಟ್‍ಗಳನ್ನು ನೀಡಿದೆ.

ಅತಿ ಶೀಘ್ರವಾಗಿ ಕೋವಿಡ್ ಪರೀಕ್ಷೆಯ ವರದಿ ನೀಡುವ ರ್ಯಾಪಿಡ್ ಆಂಟಿಜನ್ ಕಿಟ್‍ಗಳನ್ನು ಕಂಟೈನ್ಮೆಂಟ್ ಜೋನ್‍ಗಳಲ್ಲಿ, ಫಿವರ್ ಕ್ಲಿನಿಕ್‍ಗಳಿಗೆ ಆಗಮಿಸುವ ಐ.ಎಲ್.ಐ. ಸಾರಿ ರೋಗಿಗಳು, ಆರೋಗ್ಯ ಕಾರ್ಯಕರ್ತರು, ಗರ್ಭಿಣಿಯರು, ಕಿಮೋಥೆರಪಿ ರೋಗಿಗಳು, ಅಂತರಾಷ್ಟ್ರೀಯ ಪ್ರಯಾಣಿಕರು, ಕೋವಿಡ್-19 ಶಂಕಿತ ಸಾವುಗಳನ್ನು ಹಾಗೂ ಕೋವಿಡ್ -19 ರೋಗ ಲಕ್ಷಣಗಳಿರುವ ವ್ಯಕ್ತಿಗಳು, ಕ್ಯಾನ್ಸರ್ ಪೀಡಿತರು, ಹೆಚ್‍ಐವಿ ರೋಗಿಗಳು, ತುರ್ತು ಶಸ್ತ್ರ ಚಿಕಿತ್ಸೆಗೆ ಒಳಪಡುವ ರೋಗಿಗಳು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೆ ಬಳಕೆ ಮಾಡಲು ಸರ್ಕಾರದ ಸತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.

ಜಿಲ್ಲೆಯದ್ಯಾಂತ ಸೋಂಕು ಹರಡುವುದನ್ನು ನಿಯಂತ್ರಿಸಲು ಸಾರ್ವಜನಿಕರ ಸುರಕ್ಷತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಗೆ ಹಂಚಿಕೆ ಮಾಡಲಾಗಿರುವ ರ್ಯಾಪಿಡ್ ಟೆಸ್ಟ್ ಕಿಟ್‍ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ರ್ಯಾಪಿಡ್ ಆಂಟಿಜನ್ ಪರೀಕ್ಷೆಯನ್ನು ಕೈಗೊಳ್ಳಬೇಕು.

ಈಗಾಗಲೇ ನೀಡಿರುವ ಗಂಟಲು ದ್ರವ ಸಂಗ್ರಹಣಾ ಸಂಚಾರಿ ವಾಹನಗಳನ್ನು ಸಹ ಬಳಸಿಕೊಂಡು ಪರೀಕ್ಷೆ ನಡೆಸಿ ಐಸಿಎಂಆರ್ ಪೋರ್ಟಲ್‍ನಲ್ಲಿ ದಾಖಲಿಸಿ 3 ದಿವಸಗಳೊಳಗಾಗಿ ಪರೀಕ್ಷಾ ವರದಿಯನ್ನು ಜಿಲ್ಲಾ ಕಣ್ಗಾವಲು ಘಟಕಕ್ಕೆ ಸಲ್ಲಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

Please follow and like us: