ಸಚಿವ ಸಿ.ಟಿ.ರವಿ. ಥರ್ಡ ಅಂಪೈರ್ ಟೆಸ್ಟ್ ಪಾಜಿಟಿವ್ ಕನ್ಪರ್ಮ

ಚಿಕ್ಕಮಗಳೂರು : ಒಂದರಲ್ಲಿ ಪಾಜಿಟಿವ್, ಇನ್ನೊಂದರಲ್ಲಿ ನೆಗೆಟಿವ್ ರಿಜಲ್ಟ್ ಬಂದಿದ್ದ ಸಚಿವ ಸಿ.ಟಿ.ರವಿಗೆ ಮೂರನೇ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.

ಥರ್ಡ್ ಅಂಪೈರ್ ಫಲಿತಾಂಶದಲ್ಲಿ ಕೋವಿಡ್ ಪಾಸಿಟಿವ್ ಇದೆ. ಆದರೆ ಯಾವುದೇ ತೊಂದರೆಗಳ ಲಕ್ಷಣಗಳಿಲ್ಲದೆ ನಾನು ಸಹಜವಾಗಿದ್ದೇನೆ. ಸೂಕ್ತ ಚಿಕಿತ್ಸೆಗಳನ್ನು ಪಡೆಯುತ್ತಾ ನಾನು ಮನೆಯಿಂದಲೇ ಕೆಲಸ ಮುಂದುವರಿಸುತ್ತೇನೆ ಆದಷ್ಟು ಬೇಗ ಗುಣಮುಖನಾಗಿ ನಿಮ್ಮೆಲ್ಲರೊಂದಿಗೆ ಕೆಲಸ ಮಾಡುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ

Please follow and like us: