ಬೈಕ್‌ಗೆ ಟಿಪ್ಪರ್ ಢಿಕ್ಕಿ; ಇಬ್ಬರು ಕಂದಮ್ಮಗಳ ಸಾವು

ಕೊಪ್ಪಳ: ಚಲಿಸುತ್ತಿದ್ದ ಬೈಕ್‌ಗೆ ಟಿಪ್ಪರ್ ಡಿಕ್ಕಿ‌ ಹೊಡೆದ ಪರಿಣಾಮ ಇಬ್ಬರು ಕಂದಮ್ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಮಂಗಳವಾರ ಸಂಜೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪದಲ್ಲಿ ಜರುಗಿದೆ.

ಮೃತ ಮಕ್ಕಳನ್ನು ನೀಲಪ್ಪ ಮಾರ್ತಾಂಡಪ್ಪ ದೊಡ್ಡಮನಿ (07) ಹಾಗೂ ಮಲ್ಲಪ್ಪ ಮಾರ್ತಾಂಡಪ್ಪ ದೊಡ್ಡಮನಿ (05) ಎಂದು ಗುರುತಿಸಲಾಗಿದೆ. ಮಕ್ಕಳಿಗೆ ತಿನ್ನಲು ಏನಾದರೂ ಕೊಡಿಸೋಣ ಎಂದು ಮಾವ ಗಿರೀಶ್ ಬೈಕ್ ಮೇಲೆ ಮಕ್ಕಳನ್ನು ಕರೆದುಕೊಂಡು ಅಂಗಡಿಗೆ ಹೋಗುವಾಗ ಈ ದುರ್ಘಟನೆ ನಡೆದಿದೆ. ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದಿರುವ ಕುಕನೂರು ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ.

Please follow and like us: