ವೈದ್ಯೆ, ಶಿಕ್ಷಕ, ಪೊಲೀಸ್, ನ್ಯಾಯವಾದಿ, ಆಶಾ ಕಾರ್ಯಕರ್ತೆ, ಚಾಲಕ ಸೇರಿದಂತೆ
ಭಾನುವಾರ 15 ಜನರಿಗೆ ಕೋವಿಡ್ ಸೋಂಕು ದೃಢಹಾವೇರಿ: : ಜಿಲ್ಲೆಯಲ್ಲಿ ಮೂರು ಜನ ಆಶಾ ಕಾರ್ಯಕರ್ತೆಯರು, ಓರ್ವ ಶಿಕ್ಷಕ, ಓರ್ವ ನ್ಯಾಯವಾದಿ, ಓರ್ವ ವೈದ್ಯ, ಪೊಲೀಸ್, ಚಾಲಕ ಸೇರಿದಂತೆ ಭಾನುವಾರ 15 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
ಇಂದು ಹಾವೇರಿ ತಾಲೂಕಿನ ಐದು ಜನರಿಗೆ, ಹಾನಗಲ್ ತಾಲೂಕಿನ ಐದು ಜನರಿಗೆ, ಶಿಗ್ಗಾಂವ ತಾಲೂಕಿನ ಮೂರು ಜನರಿಗೆ ಹಾಗೂ ರಟ್ಟಿಹಳ್ಳಿ ತಾಲೂಕಿನ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಈವರೆಗೆ ಜಿಲ್ಲೆಯಲ್ಲಿ 166 ಪಾಸಿಟಿವ್ ಪ್ರಕರಣ ದೃಢಗೊಂಡಿವೆ. ಈ ಪೈಕಿ 37 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡು ಜನರು ಮೃತಪಟ್ಟಿದ್ದು, 127 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.
ರಟ್ಟಿಹಳ್ಳಿ ತಾಲೂಕು ತಿಪ್ಪಾಯಿಕೊಪ್ಪದ 28 ವರ್ಷದ ವಾಹನ ಚಾಲಕ (P-23215), ಶಿಗ್ಗಾಂವಿನ ಜಯನಗರದ 54 ವರ್ಷದ ಪುರುಷ(P-23216), ಹಳೆಪೇಟೆಯ 35 ವರ್ಷದ ಪುರುಷ (P-23217), ಅರಳೇಶ್ವರದ 26 ವರ್ಷದ ಯುವತಿ(P-23218), ಹಾನಗಲ್ ತಾಲೂಕಿ ತಿಳವಳ್ಳಿಯ 39 ವರ್ಷದ ಮಹಿಳೆ P-23219), 40 ವರ್ಷದ ಮಹಿಳೆ P-23220), 39 ವರ್ಷದ ಮಹಿಳೆ P-23221), ಹಾನಗಲ್‍ನ ಹೊಸಪೇಟೆ ಓಣಿಯ 38 ವರ್ಷದ ಕೃಷಿಕ ( P-23222), ಹಾವೇರಿ ಅಶ್ವಿನಿನಗರದ 39 ವರ್ಷದ ಶಿಕ್ಷಕ(P-23223), ಹಾವೇರಿ ಬಸವೇಶ್ವರನಗರದ ನಿವಾಸಿ ಉತ್ತರ ಪ್ರದೇಶ ಮೂಲದ 33 ವರ್ಷದ ಪೇಂಟರ್ (P-23224), ಹಾವೇರಿ ತಾಲೂಕು ಕರ್ಜಗಿಯ 20 ವರ್ಷದ ಬಾಣಂತಿ(P-23225), ಹಾನಗಲ್ ನಗರದ 27 ವರ್ಷದ ನ್ಯಾಯವಾದಿ (P-23226), ಹಾವೇರಿ ತಾಲೂಕಿನ ಕನವಳ್ಳಿಯ 30 ವರ್ಷದ ವೈದ್ಯೆ((P-23227), ಬೆಂಗಳೂರಿನಿಂದ ಸ್ವ ಗ್ರಾಮಕ್ಕೆ ಬಂದಿದ್ದ ಹಿರೇಕೆರೂರಿನ ಪರ್ವತಸಿದ್ದಗೇರಿಯ 29 ವರ್ಷದ ಯುವಕ(P-23228), ಹಾವೇರಿ ನಗರದ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಕಂಠಪ್ಪ ಬಡಾವಣೆ ನಿವಾಸಿ 59 ವರ್ಷದ ಪುರುಷ (P-23229) ಸೋಂಕು ದೃಢಗೊಂಡಿದೆ. ಸದರಿ ಸೋಂಕಿತರನ್ನು ನಿಗಧಿತ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಪ್ರವಾಸ ಹಿನ್ನೆಲೆ: ತಿಪ್ಪಾಯಿಕೊಪ್ಪದ 28 ವರ್ಷದ ವಾಹನ ಚಾಲಕ ದಾವಣಗೆರೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಸಂಸ್ಥೆಯ ವ್ಯವಸ್ಥಾಪಕನಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸ್ವಾಬ್ ಟೆಸ್ಟ್ ಮಾಡಿಸಿಕೊಂಡು ಸ್ವತಃ ಹೋಂ ಕ್ವಾರಂಟೈನ್ ಆಗಿರುತ್ತಾನೆ. ಜುಲೈ 4 ರಂದು ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಿಗಧಿತ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಶಿಗ್ಗಾಂವ ಜಯನಗರದ 54 ವರ್ಷದ ಪುರುಷ ಹಳೇಪೇಟೆಯ 35 ವರ್ಷದ ಹಾಗೂ 26 ವರ್ಷದ ಮಹಿಳೆ ಕಂಟೈನ್ಮೆಂಟ್ ಜೋನ್‍ನಲ್ಲಿ ( P-9412) ವಾಸವಾಗಿದ್ದು, ಜುಲೈ 4 ರಂದು ಸ್ವಾಬ್ ವರದಿಯಲ್ಲಿ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ನಿಗಧಿತ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ತಿಳವಳ್ಳಿಯ 39 ವರ್ಷದ, 40 ವರ್ಷ ಹಾಗೂ 39 ವರ್ಷದ ಮಹಿಳೆಯರು ಆಶಾ ಕಾರ್ಯಕರ್ತೆಯರಾಗಿದ್ದು, ಇವರಿಗೆ ಜುಲೈ 1 ರಂದು ಕೋವಿಡ್ ಪರೀಕ್ಷೆ ಮಾಡಿ ಸ್ವಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು, ಜುಲೈ 4 ರಂದು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಿಗಧಿತ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಹಾನಗಲ್‍ನ ಹೊಸಪೇಟೆ ಓಣಿಯ 38 ವರ್ಷದ ಕೃಷಿ ಕೆಲಸ ಮಾಡುವ ಪುರುಷನಿಗೆ ಜುಲೈ 1 ರಂದು ಜ್ವರ-ನೆಗಡಿ ಕಾಣಿಸಿಕೊಂಡ ಸಂಬಂಧ ಹಾನಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸ್ವಾಬ್ ಪರೀಕ್ಷೆ ಮಾಡಿಸಿಕೊಂಡು ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಜುಲೈ 4 ರಂದು ಪಾಸಿಟಿವ್ ಬಂದ ಕಾರಣ ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೂ ಇವರ ಪ್ರಾಥಮಿಕ ಸಂಪರ್ಕದ ಎಂಟು ಜನರನ್ನು ಹಾಗೂ ದ್ವಿತೀಯ ಸಂಪರ್ಕದ ಏಳು ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.
ಹಾವೇರಿ ಅಶ್ವಿನಿ ನಗರದ 39 ವರ್ಷದ ಶಿಕ್ಷಕನಿಗೆ ಜ್ವರ ಹಾಗೂ ನೆಗಡಿ ಕಾಣಿಸಿಕೊಂಡ ಸಂಬಂಧ ಜುಲೈ 1 ರಂದು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಹೋಗಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆರಳಿ ಸ್ವಾನ್ ಪರೀಕ್ಷೆ ಮಾಡಿಸಿಕೊಂಡು ಹೋಂ ಕ್ವಾರಂಟೈನ್ ಆಗಿರುತ್ತಾರೆ. ಜುಲೈ 4 ರಂದು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಉತ್ತರ ಪ್ರದೇಶ ಮೂಲದ 33 ವರ್ಷದ ಪುರುಷ ಹಾವೇರಿ ನಗರದಲ್ಲಿ ಪೇಂಟರ್ ಆಗಿ ಕೆಲಸಮಾಡಿಕೊಂಡು ಬಸವೇಶ್ವರ ನಗರದಲ್ಲಿ ವಾಸವಾಗಿದ್ದು, ಜ್ವರ ಹಾಗೂ ನೆಗಡಿ ಕಾರಣ ಜುಲೈ 1 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆರಳಿ ಸ್ವಾಬ್ ಪರೀಕ್ಷೆ ಮಾಡಿಕೊಂಡು ಹೋಂ ಕ್ವಾರಂಟೈನ್ ಆಗಿದ್ದಾನೆ. ಜುಲೈ 4 ರಂದು ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ಜಗಿಯ 20 ವರ್ಷದ ಮಹಿಳೆ ಜುಲೈ 1 ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು ಸ್ವಾಬ್ ಪರೀಕ್ಷೆ ಮಾಡಿಸಿಕೊಂಡು ಹೋಂ ಕ್ವಾರಂಟೈನ್‍ಗೆ ಒಳಗಾಗಿರುತ್ತಾರೆ. ಜುಲೈ 4 ರಂದು ಪಾಸಿಟಿವ್ ದೃಢಪಟ್ಟಿರುತ್ತದೆ. ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾನಗಲ್ ಪಟ್ಟಣದ ರೇಣುಕಾ ನಗರದ ನಿವಾಸಿ 27 ವರ್ಷದ ನ್ಯಾಯವಾದಿ P-14628ರ ಪ್ರಾಥಮಿಕ ಸಂಪರ್ಕ ಕಾರಣ ಜುಲೈ 3 ರಂದು ಜ್ವರ ಹಾಗೂ ನೆಗಡಿ ಸಂಬಂಧ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸ್ವಾಬ್ ಪರೀಕ್ಷೆ ಮಾಡಿಸಿಕೊಂಡು ಹಾವೇರಿ ಅಶೋಕ ಹೋಟೆಲ್‍ನಲ್ಲಿ ಸ್ವ ಕ್ವಾರಂಟೈನ್‍ನಲ್ಲಿ ಒಳಗಾಗಿದ್ದಾರೆ. ಜುಲೈ 4 ರಂದು ಬಂದ ಲ್ಯಾಬ್ ವರದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕದ ನಾಲ್ಕು ಜನ ಹಾಗೂ ದ್ವಿತೀಯ ಸಂಪಕದ ನಾಲ್ಕು ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.
ಕನವಳ್ಳಿ ಗ್ರಾಮದ 30 ವರ್ಷದ ವೈದ್ಯೆಯು P-18104ರ ಪ್ರಾಥಮಿಕ ಸಂಪರ್ಕಿತರಾಗಿದ್ದು, ಸ್ವಾಬ್ ಪರೀಕ್ಷೆ ಮಾಡಿಸಿಕೊಂಡು ಹೋಂ ಕ್ವಾರಂಟೈನ್‍ಲ್ಲಿರುತ್ತಾರೆ. ಜುಲೈ 4 ರಂದು ಪಾಸಿಟಿವ್ ದೃಢಪಟ್ಟಿದೆ. ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಿಂದ ಹಿರೇಕೆರೂರ ತಾಲೂಕಿನ ಪರ್ವತಸಿದ್ಧಗೇರಿ ಸ್ವ ಗ್ರಾಮ ಮರಳಿ ತಂದೆ-ತಾಯಿಯೊಂದಿಗೆ ವಾಸವಾಗಿದ್ದ 29 ವರ್ಷದ ಯುವಕ ಜುಲೈ 2 ರಂದು ಸ್ವತಃ ಜ್ವರ ಪೀಡಿತನೆಂದು ತಾನೇ ಹಿರೇಕೆರೂರು ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಾಬ್ ಪರೀಕ್ಷೆ ಮಾಡಿಸಿಕೊಂಡು ಹೋಗಿರುತ್ತಾನೆ. ಜುಲೈ 4 ರಂದು ಕೋವಿಡ್ ದೃಢಪಟ್ಟಿರುತ್ತದೆ. ಜೂನ್ 15, 16 ರಂದು ದಾವಣಗೆರೆ ಹಾಗೂ ಜೂನ್ 24 ರಂದು ಶಿವಮೊಗ್ಗಕ್ಕೆ ಪ್ರಯಾಣಿಸಿದ ಮಾಹಿತಿ ಇದೆ. ಸದರಿ ವ್ಯಕ್ತಿಯ ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.
ಹಾವೇರಿ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 59 ವರ್ಷದ ಪುರುಷನಿಗೆ ಜುಲೈ 1 ರಂದು ಜ್ವರ ಹಾಗೂ ನೆಗಡಿ ಕಾಣಿಸಿಕೊಂಡ ಸಂಬಂಧ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆರಳಿ ಸ್ವಾಬ್ ಪರೀಕ್ಷೆ ಮಾಡಿಸಿಕೊಂಡು ಹೋಂ ಕ್ವಾರಂಟೈನ್‍ಗೆ ಒಳಗಾಗಿರುತ್ತಾರೆ. ಜುಲೈ 4 ರಂದು ಪಾಸಿಟಿವ್ ದೃಢಪಟ್ಟಿರುತ್ತದೆ. ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದರಿ ಸೋಂಕಿತರ ನಿವಾಸದ 100 ಮೀ.ಪ್ರದೇಶವನ್ನು ಕಂಟೈನ್‍ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ. ನಗರದ ಪ್ರದೇಶದಲ್ಲಿ ವಾಸಿಸುವ ಸೋಂಕಿತರ ನಿವಾಸದ 200 ಮೀಟರ್ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶವಾದ ತಿಪ್ಪಾಯಿಕೊಪ್ಪ, ತಿಳವಳ್ಳಿ, ಕರ್ಜಗಿ, ಕನವಳ್ಳಿ, ಪರ್ವತಸಿದ್ಧಗೇರಿ ಗ್ರಾಮಗಳನ್ನು ಸಂಪೂರ್ಣವಾಗಿ ಬಫರ್ ಜೋನ್ ಆಗಿ ಪರಿಗಣಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಆಯಾ ತಾಲೂಕಾ ತಹಶೀಲ್ದಾರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Please follow and like us:
error