ಮದುವೆಗೆ 50 ಕ್ಕೂ ಹೆಚ್ಚು ಜನ ಸೇರಿದರೆ ಕಾನೂನು ಕ್ರಮ;

ರಾತ್ರಿ 8 ರ ನಂತರ ಕಪ್ರ್ಯೂ ಬಿಗಿಗೊಳಿಸಲು ಜಿಲ್ಲಾಧಿಕಾರಿ ಆದೇಶ

ಧಾರವಾಡ : ಕೋವಿಡ್-19 ಕೋರೊನಾ ವೈರಾಣು ಸಮಾಜದಲ್ಲಿ ಹರಡದಂತೆ ಮುಂಜಾಗೃತೆ ವಹಿಸಲು ಕೇಂದ್ರ ಸರಕಾರ ಮಾರ್ಗಸೂಚಿಗಳನ್ನು ನೀಡಿದ್ದು, ಜಲ್ಲೆಯಲ್ಲಿ ಈ ಕುರಿತು ವ್ಯಾಪಕ ಪ್ರಚಾರ, ತಿಳುವಳಿಕೆ, ಜಾಗೃತಿ ಮೂಡಿಸಿದರೂ ಕೇಲವು ಕಡೆ 50 ಜನ ಮಾತ್ರ ಇರುವ ನಿಯಮ ಮೀರಿ ಹೆಚ್ಚು ಜನ ಸೇರುತ್ತಿರುವುದು ಕಂಡು ಬರುತ್ತಿದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಪಡೆ ಹಾಗೂ ತಹಸಿಲ್ದಾರಗಳ ಸಭೆ ಜರುಗಿಸಿ, ಮಾತನಾಡಿದರು.
ಮದುವೆ ಕಾರ್ಯಕ್ರಮಗಳಲ್ಲಿ ಅತಿ ಜನ ಸೇರುವುದು, ಸಾಮಾಜಿಕ ಅಂತರ ಕಾಪಾಡದಿರುವುದು, ಸೆನಟೈಜರ್, ಮಾಸ್ಕ್ ಬಳಸದಿರುವುದು ಕಂಡು ಬಂದರೆ ಸಂಘಟಕರ ಮೇಲೆ ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಸಂಬಂದಿಸಿದ ಅಧಿಕಾರಿಗಳು ಪ್ರಕರಣ ದಾಖಲಿಸಿ, ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಹೇಳಿದರು.
ಮಾರ್ಗಸೂಚಿಗಳನ್ನು ಪಾಲಿಸದೆ 50 ಕ್ಕಿಂತ ಹೆಚ್ಚು ಜನ ಸೇರಿದರೆ ಸಾರ್ವಜನಿಕರು ಸಹ ಜಿಲ್ಲಾಡಿಳಿತದ ಸಹಾಯವಾಣಿಗೆ ಅಥವಾ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಮಾಹಿತಿದಾರರ ವಿವರ ಗೌಪ್ಯವಾಗಿ ಇರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರಾತ್ರಿ ಕಪ್ರ್ಯೂ ಬಿಗಿಗೊಳಿಸಿ: ಸರಕಾರದ ಆದೇಶದಂತೆ ಪ್ರತಿದಿನ ರಾತ್ರಿ 8 ಗಂಟೆ ಯಿಂದ ಬೆಳಗಿನ 5 ಗಂಟೆವರೆಗೆ ರಾತ್ರಿ ಕಪ್ರ್ಯೂ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಆದರೂ ಅನಗತ್ಯವಾಗಿ ಮತ್ತು ಖಾಸಗಿ ವಾಹನಗಳಲ್ಲಿ ಜನ ಸಂಚರಿಸುತ್ತಿರುವುದು ಕಂಡು ಬರುತ್ತಿದೆ.
ಕಪ್ರ್ಯೂ ಆದೇಶವನ್ನು ಪೆÇಲೀಸ್ ಇಲಾಖೆ ಮತ್ತು ಸಂಬಂದಿಸಿದ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಪ್ರ್ಯೂ ಆದೇಶ ಉಲ್ಲಂಘಿಸಿ ಸಂಚರಿಸುವ, ಗುಂಪು ಸೇರುವ ಜನರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಕಪ್ರ್ಯೂ ಪರಿಣಾಮಕಾರಿಯಾಗಿ ಅನುμÁ್ಠನಗೊಳಿಸಿ ಸಂಬಂದಿಸಿದ ಅಧಿಕಾರಿಗಳು ವರದಿ ನೀಡಬೇಕಬೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು
ಮಾಸ್ಕ್ ಹಾಕದ್ 15 ಸಾವಿರ ಜನರಿಗೆ ಪಾಲಿಕೆ ಅಧಿಕಾರಿಗಳಿಂದ 3 ಲಕ್ಷ ದಂಡ ವಸೂಲು: ಮಾಸ್ಕ್ ಧರಿಸದೆ ಸಾರ್ವಜನಿಕವಾಗಿ ಓಡಾಡುವ, ವಾಹನಗಳಲ್ಲಿ ಸಂಚರಿವ ಸಾರ್ವಜನಿಕರಿಗೆ ಪಾಲಿಕೆ ಅಧಿಕಾರಿಗಳು ದಂಡ್ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೊರೊಣಾ ನಿಯಂತ್ರಣದ ಮಾರ್ಗಸೂಚಿಗಳ ಕುರಿತು ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಮಾಸ್ಕ್ ಧರಿಸದ ಜನರಿಗೆ ದಂಡ ವಿಧಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಮಾತನಾಡಿ, ಜುಲೈ 3 ರ ವರೆಗೆ ಮಾಸ್ಕ್ ಧರಿಸದೆ ನಿಯಮ ಉಲ್ಲಂಘನೆ ಮಾಡಿರುವ ಒಟ್ಟು 1543 ಜನರಿಂದ ಸುಮಾರು ರೂ. 308600 ಗಳನ್ನು ದಂಡ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಶವಂತ ಮದಿನಕರ, ಕಿಮ್ಸ್‍ನ ಡಾ: ಲಕ್ಷ್ಮೀಕಾಂತ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ಎಸ್.ಕೆ. ಮಾನಕರ, ಡಾ: ಸುಜಾತಾ ಹಸವೀಮಠ, ಡಾ: ಶಶಿ ಪಾಟೀಲ, ಡಾ: ಎಸ್.ಎಂ. ಹೊನಕೇರಿ, ಡಾ: ತನುಜಾ, ಡಾ: ಶಶಿಕಲಾ ನಿಂಬಣ್ಣವರ ಮತ್ತು ತಹಶಿಲ್ದಾರರಾದ ಡಾ.ಸಂತೋಷಕುಮಾರ ಬಿರಾದಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ನವಿನ ಹುಲ್ಲೂರ, ಅಶೋಕ ಶಿಗ್ಗಾಂವಿ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


Please follow and like us: