ಯಾದಗಿರಿ, : ಜಿಲ್ಲೆಯಲ್ಲಿ ಜೂನ್ 26ರಂದು ಶುಕ್ರವಾರ ಒಟ್ಟು 7 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 916 ಪ್ರಕರಣಗಳ ಪೈಕಿ 785 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ತಿಳಿಸಿದ್ದಾರೆ.

ಶಹಾಪುರ ತಾಲ್ಲೂಕಿನ ಹೋತಪೇಟ ಗ್ರಾಮದ 35 ವರ್ಷದ ಪುರುಷ (ಪಿ-10655), ಸುರಪುರ ತಾಲ್ಲೂಕಿನ ರುಕ್ಮಾಪುರ ಲಕ್ಷ್ಮೀ ದೇವಸ್ಥಾನ ಸಮೀಪದ 55 ವರ್ಷದ ಮಹಿಳೆ (ಪಿ-10656), ಸುರಪುರ ಬಸ್ ಡಿಪೋದ 58 ವರ್ಷದ ಪುರುಷ (ಪಿ-10657), ಸುರಪುರ ಬಸ್ ಡಿಪೋದ 54 ವರ್ಷದ ಪುರುಷ (ಪಿ-10658), ಸುರಪುರ ಬಸ್ ಡಿಪೋದ 44 ವರ್ಷದ ಪುರುಷ (ಪಿ-10659), ಸುರಪುರ ಬಸ್ ಡಿಪೋದ 50 ವರ್ಷದ ಪುರುಷ (ಪಿ-10660), ಹುಣಸಗಿ ಲಕ್ಷ್ಮೀ ದೇವಸ್ಥಾನ ಸಮೀಪದ 53 ವರ್ಷದ ಪುರುಷ (ಪಿ-10661) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಪ್ರಕರಣ ಸಂಖ್ಯೆ ಪಿ-10655 ಮತ್ತು ಪಿ-10656ರ ವ್ಯಕ್ತಿಗಳು ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಪುಣೆ ಹಾಗೂ ಮುಂಬೈಯಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿರುತ್ತಾರೆ. ಪಿ-10661 ಐಎಲ್‍ಐ ಪ್ರಕರಣವಾಗಿದ್ದು, ಉಳಿದ ಸುರಪುರ ಬಸ್ ಡಿಪೋದ ನಾಲ್ಕು ಜನರು ಪಿ-8228ರ ಸಂಪರ್ಕದ ಹಿನ್ನೆಲೆ ಹೊಂದಿದ್ದಾರೆ. ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಹಕರಿಸಬೇಕೆಂದು ಅವರು ಕೋರಿದ್ದಾರೆ.