ಅಂತರಾಜ್ಯದಿAದ ಬರುವವರಿಗೆ ಸಾಂಸ್ಥಿಕ ಹಾಗೂ ಹೋಮ್ ಕ್ವಾರಂಟೈನ್ ಕಡ್ಡಾಯ : ಡಿಸಿ

ಕೊಪ್ಪಳ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸ್ತುತ ಮಾರ್ಗಸೂಚಿಯನುಸಾರ ಮಹಾರಾಷ್ಟçದಿಂದ ಬರುವಂತಹ ಪ್ರಮಾಣಿಕರನ್ನು 07 ದಿನ ಸಾಂಸ್ಥಿಕ ಕ್ವಾರಂಟೈನ್ ಮತ್ತು ಹೋಮ್ ಕ್ವಾರಂಟೈನ್ ಜೊತೆಗೆ ದೆಹಲಿ, ತಮಿಳುನಾಡು ರಾಜ್ಯಗಳಿಂದ ಬರುವಂತಹ ಪ್ರಮಾಣೀಕರನ್ನು 03 ದಿನ ಸಾಂಸ್ಥಿಕ ಕ್ವಾರಂಟೈನ್ ಮತ್ತು 11 ದಿನ ಹೋಮ್ ಕ್ವಾರಂಟೈನ್‌ನ್ನು ಕಡ್ಡಾಯವಾಗಿ ಮಾಡುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾಯದ್ಯಾಂತ ಕೊವೀಡ್-19 ಪ್ರಕರಣಗಳು ಹೆಚ್ಚಿತ್ತಿರುವ ಹಿನ್ನಲೆಯಲ್ಲಿ ಆರಂಭದಲ್ಲಿಯೇ ಸೋಂಕು ಪ್ರಸರಣವನ್ನು ತಡೆಗಟ್ಟಲು ಜಿಲ್ಲಾಡಳಿತವು ಪ್ರಮುಖ ನಿರ್ಧಾಗಳನ್ನು ಕೈಗೊಂಡಿರುತ್ತದೆ.  ಮಹಾರಾಷ್ಟçದಿಂದ ಬರುವ ಪ್ರಮಾಣಿಕರನ್ನು 07 ಸಾಂಸ್ಥಿಕ ಕ್ವಾರಂಟೈನ್ ಮತ್ತು 07 ಹೋಮ್ ಕ್ವಾರಂಟೈನ್, ದೆಹಲಿ, ತಮಿಳುನಾಡು ರಾಜ್ಯಗಳಿಂದ ಬರುವಂತಹ ಪ್ರಮಾಣಿಕರನ್ನು 03 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮತ್ತು 11 ಹೋಮ್ ಕ್ವಾರಂಟೈನ್, ಇತರೇ ಎಲ್ಲಾ ರಾಜ್ಯಗಳಿಂದ ಕೊಪ್ಪಳ ಜಿಲ್ಲೆಗೆ ಆಗಮಿಸುವ ಎಲ್ಲಾ ಪ್ರಮಾಣಿಕರು ಕಡ್ಡಾಯವಾಗಿ 03 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಹಾಗೂ 11 ಹೋಮ್ ಕ್ವಾರಂಟೈನ್ ಇದರಲ್ಲಿ ವಿಶೇಷ ವರ್ಗದ ಜನರಿಗೆ ಅಂದರೆ ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ, ತೀವ್ರತರವಾದ ಖಾಯಿಲೆಯಿಂದ ಬಳಲುತ್ತಿರುವವರು, ಮರಣ ಸಂಬAಧವಾಗಿ ಬಂದವರು, ಮಾನಸಿಕ ಅಸ್ವಸ್ಥರು, ಇವರುಗಳಿಗೆ ಸಾಂಸ್ಥಿಕ ಕ್ವಾರಂಟೈನ್‌ನಿAದ ವಿನಾಯಿತಿ ನೀಡಲಾಗಿದ್ದು, 14 ದಿನಗಳ ಹೋಮ್ ಕ್ವಾರಂಟೈನ್‌ಗೆ ಕಳುಹಿಸಲಾಗುವುದು.


ಇತರೆ ರಾಜ್ಯಗಳಿಂದ ಸಾಂಸ್ಥಿಕ ಕ್ವಾರಂಟೈನ್‌ಗಾಗಿ ಜಿಲ್ಲಾದ್ಯಂತ ವಿವಿಧ ಹಾಸ್ಟೆಲ್‌ಗಳನ್ನು ಹಾಗೂ ಹೋಟೆಲ್‌ಗಳನ್ನು ಗುರುತಿಸಲಾಗಿದೆ.  ಇಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಿ ಫಲಿತಾಂಶ ಆಧಾರದ ಮೇಲೆ ಸಾಂಸ್ಥಿಕ ಹಾಗೂ ಹೋಮ್ ಕ್ವಾರಂಟೈನ್ ಬಗ್ಗೆ ನಿರ್ಧಾರಿಸಲಾಗುವುದು.  ಫಲಿತಾಂಶ ಪಾಸಿಟಿವ್ ಬಂದ ಸಂದರ್ಭದಲ್ಲಿ ಕೊವೀಡ್-19 ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು.  ಫಲಿತಾಂಶ ನೆಗಟಿವ್ ಬಂದರೆ ಹೋಮ್ ಕ್ವಾರಂಟೈನ್‌ಗೆ ಕಳುಹಿಸಲಾಗುವುದು.
ಅಂತರಾಜ್ಯದಿAದ ಜಿಲ್ಲೆಗೆ ಯಾವುದೇ ಮಾರ್ಗವಾಗಿ ವಿಮಾನ, ರೈಲು, ಬಸ್ ಮತ್ತು ಖಾಸಗಿ ವಾಹನಗಳ ಮೂಲಕ ಬರುವ ಪ್ರತಿಯೊಬ್ಬ ಪ್ರಮಾಣಿಕರು ಕಡ್ಡಾಯವಾಗಿ ಯುನಿಸೇಫ್ ಮಕ್ಕಳ ರಕ್ಷಣಾ ಘಟಕ ಯೋಜನೆಯ ವ್ಯವಸ್ಥಾಪಕ ಮತ್ತು ಜಿಲ್ಲಾ ಕೇಂದ್ರದ ನೋಡಲ್ ಅಧಿಕಾರಿ ಹರೀಶ್ ಜೋಗಿ (ಮೊ.ಸಂ.9035129484) ಹಾಗೂ ಜಿಲ್ಲಾ ನಗರಾಭೀವೃದ್ಧಿ ಕೋಶ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ (ಮೊ.ಸಂ.9606729144) ಇವರನ್ನು ಸಂಪರ್ಕಿಸಿ ನೋಂದಾಯಿಸಿಕೊAಡು ಜಿಲ್ಲಾ ಆಸ್ಪತ್ರೆಯಲ್ಲಿರುವ ಫೀವರ್ ಕ್ಲಿನಿಕ್ ಬಳಿ ತಮ್ಮ ವರದಿ ಮಾಡಿಕೊಳ್ಳಬೇಕು.  ಪ್ರಮಾಣೀಕರು ಯಾವುದೇ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಲ್ಲಿ ಅಥವಾ ನೇರವಾಗಿ ಮನೆಗೆ ಹೋದಲ್ಲಿ ಅವರ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಕಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

Please follow and like us: