ಯಾದಗಿರಿ ಮತ್ತೆ 37 ಜನರಿಗೆ ಪಾಜಿಟಿವ್ : ಸೋಂಕಿತರ ಸಂಖ್ಯೆ 865ಕ್ಕೆ ಏರಿಕೆ

ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 865ಕ್ಕೆ ಏರಿಕೆ
ಜಿಲ್ಲೆಯಲ್ಲಿ ಮತ್ತೆ 37 ಜನರಿಗೆ ಕೊರೊನಾ ಪಾಸಿಟಿವ್
**
ಯಾದಗಿರಿ, : ಜಿಲ್ಲೆಯಲ್ಲಿ ಜೂನ್ 17ರಂದು ಮಂಗಳವಾರ 10 ವರ್ಷದೊಳಗಿನ 7 ಮಕ್ಕಳು ಸೇರಿದಂತೆ ಒಟ್ಟು 37 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 865 ಪ್ರಕರಣಗಳ ಪೈಕಿ 478 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುರುಮಠಕಲ್ ತಾಲ್ಲೂಕಿನ ಗೊಟಣಕಿ ಗ್ರಾಮದ 18 ವರ್ಷದ ಯುವತಿ (ಪಿ-7637), ಗೊಟಣಕಿ ಗ್ರಾಮದ 40 ವರ್ಷದ ಮಹಿಳೆ (ಪಿ-7638), ಸುರಪುರ ತಾಲ್ಲೂಕಿನ ಕಿರದಳ್ಳಿ ಗ್ರಾಮದ 32 ವರ್ಷದ ಮಹಿಳೆ (ಪಿ-7639), ಕಿರದಳ್ಳಿ ಗ್ರಾಮದ 4 ವರ್ಷದ ಗಂಡುಮಗು (ಪಿ-7640), ಕಿರದಳ್ಳಿ ಗ್ರಾಮದ 35 ವರ್ಷದ ಪುರುಷ (ಪಿ-7641), ಸುರಪುರ ತಾಲ್ಲೂಕಿನ ಅಸ್ಕಿ ಗ್ರಾಮದ 28 ವರ್ಷದ ಪುರುಷ (ಪಿ-7642), ಕಿರದಳ್ಳಿ ಗ್ರಾಮದ 15 ವರ್ಷದ ಯುವತಿ (ಪಿ-7643), ಸುರಪುರ ತಾಲ್ಲೂಕಿನ ಮಲ್ಕಾಪುರದ 30 ವರ್ಷದ ಮಹಿಳೆ (ಪಿ-7644), ಮಲ್ಕಾಪುರದ 13 ವರ್ಷದ ಬಾಲಕ (ಪಿ-7645), ಕಿರದಳ್ಳಿ ಗ್ರಾಮದ 25 ವರ್ಷದ ಮಹಿಳೆ (ಪಿ-7646).

ಕಿರದಳ್ಳಿ ಗ್ರಾಮದ 5 ವರ್ಷದ ಬಾಲಕ (ಪಿ-7647), ಕಿರದಳ್ಳಿ ಗ್ರಾಮದ 23 ವರ್ಷದ ಪುರುಷ (ಪಿ-7648), ಶಹಾಪುರದ 30 ವರ್ಷದ ಪುರುಷ (ಪಿ-7649), ಶಹಾಪುರದ 26 ವರ್ಷದ ಮಹಿಳೆ (ಪಿ-7650), ಶಹಾಪುರದ 14 ವರ್ಷದ ಬಾಲಕಿ (ಪಿ-7651), ಶಹಾಪುರದ 31 ವರ್ಷದ ಮಹಿಳೆ (ಪಿ-7652), ಯಾದಗಿರಿ ತಾಲ್ಲೂಕಿನ ಮುದ್ನಾಳ ಗ್ರಾಮದ 37 ವರ್ಷದ ಪುರುಷ (ಪಿ-7653), ಗುರುಮಠಕಲ್ ತಾಲ್ಲೂಕಿನ ವಂಕಸಂಬ್ರದ 29 ವರ್ಷದ ಮಹಿಳೆ (ಪಿ-7654), ಶಹಾಪುರ ತಾಲ್ಲೂಕಿನ ಹೋತಪೇಟ ಗ್ರಾಮದ 6 ವರ್ಷದ ಬಾಲಕಿ (ಪಿ-7655), ಹೋತಪೇಟ ಗ್ರಾಮದ 40 ವರ್ಷದ ಪುರುಷ (ಪಿ-7656).

ಹೋತಪೇಟ ಗ್ರಾಮದ 10 ವರ್ಷದ ಬಾಲಕಿ (ಪಿ-7657), ಹೋತಪೇಟ ಗ್ರಾಮದ 25 ವರ್ಷದ ಮಹಿಳೆ (ಪಿ-7658), ಹೋತಪೇಟ ಗ್ರಾಮದ 11 ವರ್ಷದ ಬಾಲಕಿ (ಪಿ-7659), ಹೋತಪೇಟ ಗ್ರಾಮದ 58 ವರ್ಷದ ಮಹಿಳೆ (ಪಿ-7660), ಹೋತಪೇಟ ಗ್ರಾಮದ 18 ವರ್ಷದ ಯುವಕ (ಪಿ-7661), ಜೇವರ್ಗಿ ತಾಲ್ಲೂಕಿನ ಬಿರಾಳ ಗ್ರಾಮದ 35 ವರ್ಷದ ಪುರುಷ (ಪಿ-7662), ಗುರುಮಠಕಲ್ ತಾಲ್ಲೂಕಿನ ನಜರಾಪುರದ 45 ವರ್ಷದ ಮಹಿಳೆ (ಪಿ-7663), ನಜರಾಪುರದ 55 ವರ್ಷದ ಪುರುಷ (ಪಿ-7664), ನಜರಾಪುರದ 25 ವರ್ಷದ ಮಹಿಳೆ (ಪಿ-7665), ನಜರಾಪುರದ 3 ವರ್ಷದ ಗಂಡುಮಗು (ಪಿ-7666).

ನಜರಾಪುರದ 15 ವರ್ಷದ ಮಹಿಳೆ (ಪಿ-7667), ನಜರಾಪುರದ 6 ವರ್ಷದ ಹೆಣ್ಣುಮಗು (ಪಿ-7668), ಶಹಾಪುರ ತಾಲ್ಲೂಕಿನ ಬೀರನೂರ ಗ್ರಾಮದ 26 ವರ್ಷದ ಪುರುಷ (ಪಿ-7669), ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ 23 ವರ್ಷದ ಮಹಿಳೆ (ಪಿ-7670), ಗೋಗಿ ಗ್ರಾಮದ 35 ವರ್ಷದ ಪುರುಷ (ಪಿ-7671), ಗೋಗಿ ಗ್ರಾಮದ 6 ವರ್ಷದ ಬಾಲಕ (ಪಿ-7672), ಗೋಗಿ ಗ್ರಾಮದ 20 ವರ್ಷದ ಯುವಕ (ಪಿ-7673) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 37 ಜನ ಸೋಂಕಿತರಲ್ಲಿ 20 ಮಹಿಳೆ, 17 ಪುರುಷರಿದ್ದಾರೆ. ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈಯಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿರುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ ಟಿಶ್ಯೂ ಪೇಪರ್ ಅನ್ನು ಬಳಸಬೇಕು. ಕೈ ಸ್ವಚ್ಛಗೊಳಿಸುವ ದ್ರಾವಣ (ಸ್ಯಾನಿಟೈಸರ್) ಅಥವಾ ನೀರು ಮತ್ತು ಸೋಪಿನಿಂದ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವಿಕೆಯನ್ನು ಮಾಡಬಾರದು. ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಸಹಾಯವಾಣಿ ಸಂಖ್ಯೆ 104 ಅಥವಾ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 08473 253950 ಹಾಗೂ ವಾಟ್ಸ್‍ಆ್ಯಪ್ ಸಂಖ್ಯೆ 9449933946 ಗೆ ಸಂಪರ್ಕಿಸಬಹುದು. ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಹಕರಿಸಬೇಕೆಂದು ಅವರು ಕೋರಿದ್ದಾರೆ.

Please follow and like us: