ಬಟ್ಟೆ ತೊಳೆಯಲು ಹೋಗಿದ್ದ ತಾಯಿ- ಮಕ್ಕಳು ನೀರು ಪಾಲು

Mandya ಬಟ್ಟೆ ತೊಳೆಯಲು ಹೋಗಿದ್ದ ತಾಯಿ- ಮಕ್ಕಳು ನೀರು ಪಾಲಾದ ದುರಂತ ಘಟನೆ ಮಂಡ್ಯದಲ್ಲಿ ನಡೆದಿದೆ.ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೀರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು ಮೃತಪಟ್ಟವರನ್ನು ಬೀರನಹಳ್ಳಿ ಗ್ರಾಮದ ಗೀತಾ (38), ಆಕೆಯ ಮಕ್ಕಳಾದ ಸವಿತಾ (19), ಸೌಮ್ಯ (14) ಎಂದು ಗುರುತಿಸಲಾಗಿದೆ. ಬಟ್ಟೆ ತೊಳೆಯುವಾಗ ಆಕಸ್ಮಿಕವಾಗಿ ಕೆರೆಗೆ ಒಬ್ಬರು ಬಿದ್ದರು ಅವರನ್ನು ಹೋಗಿ ಇನ್ನಿಬ್ಬರು ನೀರು ಪಾಲಾಗಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Please follow and like us: