ಆನ್ಲೈನ್ ಶಿಕ್ಷಣದ ಕುರಿತ ಗೊಂದಲದ ಹೇಳಿಕೆ -ಸಚಿವ ಮಾಧುಸ್ವಾಮಿ ಸ್ಪಷ್ಟನೆ

ತುಮಕೂರು :ಆನ್ಲೈನ್ ಶಿಕ್ಷಣದ ಕುರಿತ ಗೊಂದಲದ ಹೇಳಿಕೆಗೆ ಸಂಬಂದಿಸಿದಂತೆ ತುಮಕೂರಿನಲ್ಲಿ ಕಾನೂನು ಸಚಿವ ಜೆ.ಸಿ.ಮಾದುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

5ನೇ ತರಗತಿವರೆಗೂ ಆನ್ಲೈನ್ ಶಿಕ್ಷಣ ಬೇಡ ಅಂತಾ ಮಾಡಿದ್ದೇವೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ರು ನಾವು ಅದನ್ನ 7ನೇ ತರಗತಿವರೆಗೂ ಬೇಡ ಎಂದು ಕ್ಯಾಬಿನೆಟ್ ಸಭೆಯಲ್ಲಿ ಸಲಹೆ ಕೊಟ್ಟಿದ್ವಿ.ಏಳನೇ ತರಗತಿ ಹಳ್ಳಿಮಕ್ಕಳು ಆನ್ ಲೈನ್ ನೋಡೋಕೆ ಆಗಲ್ಲ ಅಂತ ಕೇಳಿದ್ವಿ ಈವರೆಗೂ ಅವರ ಆದೇಶ ಇರೋದು 5 ನೇ ತರಗತಿವರೆಗೆ.

ನಾವು ಕ್ಯಾಬಿನೇಟ್ ನಲ್ಲಿ ಎಲ್ಲರು ಕುಳಿತು ಮಾತನಾಡುವಾಗ ಈ ವಿಚಾರ ಮಾತನಾಡಿದ್ವಿ.ಏಳನೇ ತರಗತಿವರೆಗೂ ವಿಸ್ತರಿಸಿ ಎಂದು ಮನವಿ ಮಾಡಿದ್ದೇವೆ ಅಷ್ಟೇ. ಅದು ನಮ್ಮ ಸಲಹೆ ಅಷ್ಟೇ ಆಗಿದೆ.ಕೊನೆ ನಿರ್ಧಾರ ಏನ್ ಅಲ್ಲ ಎಂದು ತುಮಕೂರಿನಲ್ಲಿ‌ ಸಚಿವ ಮಾಧುಸ್ವಾಮಿ ಸ್ಪಷ್ಟನೆ..

Please follow and like us: