ಕಾರ್ಮಿಕರ ಬದುಕಿಗೆ ನೆಲೆ ಒದಗಿಸಲು ಆರ್ ಪಿಐ ಆಗ್ರಹ

ವಿಜಯಪುರ ಜೂ . – ಲಾಕ್‌ ಡೌನ್‌ನಿಂದಾಗಿ ಬೀದಿಗೆ ಬಿದ್ದಿರುವ ಕಾರ್ಮಿಕರ ಬದುಕಿಗೆ ಭದ್ರ ನೆಲೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೂಕ್ತ ಕ್ರಮಗಳನ್ನು ಕೈಕೊಳ್ಳಬೇಕು . ಅದು ಅವರ ಜವಾಬ್ದಾರಿ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಅಧ್ಯಕ್ಷರಾದ ಎ.ಬಿ , ಹೊಸಮನಿ ಆಗ್ರಹಿಸಿದರು . ರಿಪಬ್ಲಿಕನ್ ಪಾರ್ಟಿಯ ಜಿಲ್ಲಾಧ್ಯಕ್ಷ ಹಾಗೂ ನಿವೃತ್ತ ಪೌರಾಯುಕ್ತ ಸೂರ್ಯಕಾಂತ ವೀರಕರ ಅವರ ಜನ್ಮದಿನದ ನಿಮಿತ್ಯ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೊರೊನಾ ಯೋಧರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು . ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಘೋಷಿಸಿದುದು ಒಳ್ಳೆಯ ಕ್ರಮವಾದರೂ ಅದರಿಂದ ತೋವ್ರ ತೊಂದರೆ ಅನುಭವಿಸಿದವರು ಬಡವರು ಮತ್ತು ಕಾರ್ಮಿಕರು , ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ಬೇರೆ ರಾಜ್ಯಗಳಿಗೆ ಹೋಗಿರುವ ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ಸೇರಿಕೊಳ್ಳಲು ಸರಕಾರಗಳು ಸೂಕ್ತ ವ್ಯವಸ್ಥೆ ಮಾಡದೇ ಇರುವುದು ಅಕ್ಷಮ್ಯವಾದುದು ಎಂದು ಹೇಳಿದ ಅವರು ಈಗಲಾದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಮಿಕರು ತಮ್ಮ ಬದುಕು ಕಟ್ಟಿಕೊಳ್ಳಲು ಅಗತ್ಯವಿರುವ ಸಹಾಯ ಮಾಡಬೇಕು ಎಂದು ಒತ್ತಾಯಿಸಿದರು . ತಮ್ಮ ಪ್ರಾಣಗಳನ್ನು ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು , ದಾದಿಯರು , ಮೊಲೀಸರು , ಗೃಹರಕ್ಷಕ ದಳದವರು . ಕಾರ್ಯಕರ್ತೆಯರು , ಪೌರಕಾರ್ಮಿಕರನ್ನು ಗೌರವದಿಂದ ಕಾಣಬೇಕು ಹೇಳಿದರ ಪೌರಕಾರ್ಮಿಕರು ಯಾವುದೇ ರಕ್ಷಣೆ ಸಾಮಗ್ರಿಗಳಿಲ್ಲದೆ ಕೆಲಸ ಮಾಡುತ್ತಿದ್ದಾರೆ , ಅವರು ಕೆಲಸದಿಂದ ಹಿಂದೆ ಸರಿದರೆ ನಗರ ಪಟ್ಟಣಗಳ ಪರಿಸ್ಥಿತಿ ಹೇಗಿರುತ್ತದೆಂಬುದನ್ನು ಊಹಿಸಲಾಗದು . ಕಾರ್ರಕ ಸರಕಾರ ಪೌರಕಾರ್ಮಿಕರಿಗೆ ಅಗತ್ಯವಿರುವ ರಕ್ಷಣಾ ಸಾಮಗ್ರಿಗಳನ್ನು ಒದಗಿಸಬೇಕು ಎಂದು ಹೇಳಿದರು , ಆರ್ ಸಿನ ಹಿರಿಯ ಮುಖಂಡ ತುಕಾರಾಮ ಚಂಚಲಕರ . ಮಧುಕರ ಜೋಶಿ ಅವರು ಮಾತನಾಡಿ ಪೌರಕಾರ್ಮಿಕರೇ ನಿಜವಾದ ಯೋಧರು , ಅವರೇ ಸ್ವಚ್ಛಭಾರತದ ರೂವಾರಿಗಳು , ಸರಕಾರಗಳು ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎಂದರು . ವಿವೇಕನಗರ ಬಡಾವಣೆಯ ಶ್ರೀ ಈಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಡಾವಣೆಯ ಎಚ್.ಪಿ. ಬದೂರ ಅಧ್ಯಕ್ಷತೆ ವಹಿಸಿದ್ದರು . ಆರ್‌ಪಿಐ ಜಿಲ್ಲಾಧ್ಯಕ್ಷ ಸೂರ್ಯಕಾಂತ ವೀರಕರ ಸ್ವಾಗತಿಸಿ , ನಿರೂಪಿಸಿದರು . ಬಸವರಾಜ ಅಮೀನಗಡ , ಅನಿಲ ಹೊಸಮನಿ , ಯಮನಪ್ಪ ದ್ಯಾಬೇರಿ , ಮಲ್ಲಪ್ಪ ಹಳ್ಳದಮನಿ , ಬಿ.ಸಿ. ಗೋವರ್ಧನ , ಜಿ.ಕೆ. ಹೊನವಾಡ , ಶಶಿ ಆಚಾರ , ಅರವಿಂದ ವೀರಕರ , ಬಸವರಾಜ ಬ್ಯಾಳೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .

Please follow and like us:
error