ಕೊಪ್ಪಳ ಬಿ.ಟಿ.ಪಾಟೀಲ್ ನಗರದ ವ್ಯಕ್ತಿಗೆ ಕರೋನಾ ಪಾಜಿಟಿವ್

Koppal ಪಿ -3009 ವ್ಯಕ್ತಿಗೆ ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು , ಪ್ರಸ್ತುತ ವ್ಯಕ್ತಿಯು ಬೆಂಗಳೂರು ಕೋವಿಡ್ ನಿಗಧಿತ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ . ಸದರಿ ವ್ಯಕ್ತಿಯು ಕೊಪ್ಪಳ ನಗರದ ವಾರ್ಡ್ -27 ಬಿ.ಟಿ.ಪಾಟೀಲ್ ನಗರದ ನಿವಾಸಿಯಾಗಿದ್ದು , ದಿನಾಂಕ : 26 / 05 / 2020 ರಂದು ಸಾಯಂಕಾಲ 6:00 ಗಂಟೆಗೆ ಸಹೋದರ / ಚಾಲಕ ಜೊತೆಗೆ ALTO K10 , KA – 25 T – 9564 ಕಾರಿನಲ್ಲಿ ರಾಯಚೂರಿಗೆ ಪ್ರಯಾಣ ಬೆಳೆಸಿದ್ದು , ರಾಯಚೂರ ನಗರದ ನಿಜಲಿಂಗಪ್ಪ ಕಾಲೋನಿ ಕರ್ನಾಟಕ ಹೌಸಿಂಗ್ ಬೋರ್ಡ್‌ನಲ್ಲಿರುವ ಸಹೋದರನ ಮನೆಯಲ್ಲಿ ವಾಸ್ತವ್ಯ ಮಾಡಿರುತ್ತಾರೆ . ದಿ : 27 / 05 / 2020 ರಂದು Clarity Diagnostic Center , usha diagnostic Center ಗೆ ಭೇಟಿ ನೀಡಿ ನಂತರ ಡಾ || ಮಹಾಲಿಂಗಪ್ಪ ವೈದ್ಯರ ಹತ್ತಿರ ತಪಾಸಣೆ ಮಾಡಿಸಿಕೊಳ್ಳುತ್ತಾರೆ . ದಿ : 28 / 05 / 2020 ರಂದು ಡಾ | ಮಂಜುನಾಥ , ಶ್ವಾಸಕೋಶ ತಜ್ಞರು ( ನವೋದಯ ವೈದ್ಯಕೀಯ ಆಸ್ಪತ್ರೆ ) ಭೇಟಿ ಮಾಡಿರುತ್ತಾರೆ . ಅದೇ ದಿನ ರಾತ್ರಿ ರಾಯಚೂರಿನಿಂದ ಹೆಂಡತಿ ಮತ್ತು ಮಗನ ಜೊತೆ ಖಾಸಗಿ ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಾರೆ . ದಿ : 29 / 05 / 2020 ರ ಕೋರಮಂಗಲದ ಮಾವನ ಮನೆಯಲ್ಲಿರುತ್ತಾರೆ . ದಿ : 30 / 05 / 2020 ರಂದು HCG Hospital ನಲ್ಲಿ ತಪಾಸಣೆಗೆ ಒಳಗೊಂಡಿರುತ್ತಾರೆ . ಕೋವಿಡ್ 19 Positive ಎಂದು ಪತ್ತೆಯಾಗಿರುತ್ತದೆ . ಪ್ರಾಥಮಿಕ ಸಂಪರ್ಕಿತರು : ಒಟ್ಟು 12 ಜನ ( ಕೊಪ್ಪಳದಲ್ಲಿ ಮಾತ್ರ ) ಪತ್ತೆ ಹಚ್ಚಲಾಗಿದ್ದು , ಈಗಾಗಲೇ 6 ಜನರಿಗೆ ಕೋವಿಡ್ ಟೆಸ್ಟ್ ಮಾಡಿದ್ದು , ಫಲಿತಾಂಶದ ವರದಿಗೆ ಕಾಯ್ದಿರಿಸಲಾಗಿದ್ದು , ಉಳಿದ 6 ಜನರಲ್ಲಿ ಹೆಂಡತಿ ಮತ್ತು ಮಗ ಪಿ -3009 ಸೋಂ

ಕಿತ ವ್ಯಕ್ತಿಯೊಂದಿಗೆ ಬೆಂಗಳೂರಿಗೆ ಹೋಗಿದ್ದರಿಂದ ಅವರನ್ನು ಅಲ್ಲಿಯೇ ತಪಾಸಣೆಗೆ ಒಳಪಡಿಸಲಾಗಿದ್ದು , ಉಳಿದ 4 ಜನರನ್ನು ಇಂದು ಕೋವಿಡ್ -19 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ . ಇದುವರೆಗೆ 13 ಜನರು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದ್ದು , ಪಿ -3009 ಹಾಗೂ ಅವರ ಇಬ್ಬರ ಸಹೋದದರ CDR ಮಾಹಿತಿ ಪಡೆದು ಪತ್ತೆ ಮುಂದುವರೆಸಲಾಗುವುದು .

ಕಾರ್ಯ ಸಾರ್ವಜನಿಕರಲ್ಲಿ ಮನವಿ : ಕೊಪ್ಪಳ ನಗರದ APMC ವಾರ್ಡ್‌ನಲ್ಲಿರುವ ಉದಯ ಶಂಕರ ಟ್ರೇಡಿಂಗ್ ಕಂಪನಿಗೆ ಕಳೆದ 15 ದಿನಗಳಿಂದ ಭೇಟಿ ಮಾಡಿದ ಸಾರ್ವಜನಿಕರು Home Quarantine ನಲ್ಲಿರಲು ತಿಳಿಸಲಾಗಿದ್ದು , ರೋಗದ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹೇಳಿದ್ದಾರೆ

Please follow and like us: