​ಖಾಸಗಿ ಬಾಹ್ಯಾಕಾಶ ಯಾನದ ಯುಗಾರಂಭ

ಹೊಸದಿಲ್ಲಿ: ಕೋಟ್ಯಧಿಪತಿ ಉದ್ಯಮಿ ಎಲನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸಿದ್ಧಪಡಿಸಿದ, ಇಬ್ಬರು ಅಮೆರಿಕನ್ ಗಗನಯಾತ್ರಿಗಳಿದ್ದ ಮೊಟ್ಟಮೊದಲ ರಾಕೆಟ್ ‌ಶಿಪ್ ಶನಿವಾರ ಗಗನಕ್ಕೆ ಚಿಮ್ಮಿತು. ಈ ಮೂಲಕ ಖಾಸಗಿ ಬಾಹ್ಯಾಕಾಶಯಾನ ಯುಗಾರಂಭವಾಗಿದೆ.

ನಾಸಾದ ಡೌಗ್ ಹರ್ಲೆ ಮತ್ತು ಬಾಬ್ ಬೆಹಂಕೆನ್ ಅವರಿದ್ದ ಬಾಹ್ಯಾಕಾಶ ನೌಕೆಯನ್ನು ಫಾಲ್ಕನ್-9 ರಾಕೆಟ್ ಮಧ್ಯಾಹ್ನ 3.22ಕ್ಕೆ ಚಿಮ್ಮಿಸಿತು. ಅರ್ಧ ಶತಮಾನ ಹಿಂದೆ ಅಪೋಲೊ ಮೂಲಕ ಚಂದ್ರಯಾನ ಮಿಷನ್‌ಗೆ ಚಾಲನೆ ನೀಡಲಾದ ಸ್ಥಳದಿಂದಲೇ ಈ ಬಾಹ್ಯಾಕಾಶ ನೌಕೆಯನ್ನು ಆಗಸಕ್ಕೆ ಚಿಮ್ಮಿಸಲಾಯಿತು.

ಕೆಲ ನಿಮಿಷಗಳಲ್ಲಿ ಸುರಕ್ಷಿತವಾಗಿ ಕಕ್ಷೆ ಸೇರಿದರು. ಈ ಮುಂಬತ್ತಿ ಬೆಳಗೋಣ ಎಂಬ ಐತಿಹಾಸಿಕ ನುಡಿಯೊಂದಿಗೆ ಹರ್ಲೆ ಮುಂಬತ್ತಿ ಬೆಳಗಿದರು. 1961ರಲ್ಲಿ ಅಮೆರಿಕ ಮೊಟ್ಟಮೊದಲ ಮಾನವಸಹಿತ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ ವೇಳೆ ಕಕ್ಷೆ ತಲುಪಿದ ಅಲೆನ್ ಶೆಪರ್ಡ್ ಈ ಉದ್ಗಾರ ಮಾಡಿದ್ದರು.

ಸ್ಪೇಸ್‌ಎಕ್ಸ್ ಕಕ್ಷೆಗೆ ಗಗನಯಾತ್ರಿಗಳನ್ನು ಕರೆದೊಯ್ದ ಮೊಟ್ಟಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ರಷ್ಯಾ, ಅಮೆರಿಕ ಹಾಗೂ ಚೀನಾ ಸರ್ಕಾರಗಳು ಮಾತ್ರ ಈ ಸಾಧನೆ ಮಾಡಿದ್ದವು.

40 ವರ್ಷಗಳ ಹಿಂದೆ ನಾಸಾ ಹೊಚ್ಚಹೊಸ ಬಾಹ್ಯಾಕಾಶ ವಾಹನದೊಂದಿಗೆ ಬಾಹ್ಯಾಕಾಶ ಯಾನಿಗಳನ್ನು ಕಳುಹಿಸಿ ಬಾಹ್ಯಾಕಾಶ ನೌಕಾ ಯೋಜನೆ ಆರಂಭಿಸಿತ್ತು. 2011ರಲ್ಲಿ ಈ ಯೋಜನೆ ಕೊನೆಗೊಂಡ ಬಳಿಕ ಅಮೆರಿಕ ನೆಲದಿಂದ ಬಾಹ್ಯಾಕಾಶ ಯಾನಿಗಳು ತೆರಳಿರುವುದು ಇದೇ ಮೊದಲು.

Please follow and like us: