ಕೊಪ್ಪಳದ ವಿಸ್ತಾರ್ ರಂಗಶಾಲೆಯ ಕಲಿಕಾರ್ಥಿಗಳ ರಂಗ ಪ್ರಯೋಗ “ ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್” ಅದ್ಬುತ ಪ್ರದರ್ಶನಗೋಂಡಿತು.
– ಹಿಂಸೆ, ದ್ವೇಷ, ಅಸೂಯೆಗಳು ಗಲಭೆಯೆಬ್ಬಿಸಿ ಬೆಂಕಿಯ ಕೆನ್ನಾಲಿಗೆ ಸುಟ್ಟು ಭಸ್ಮ ಮಾಡುವಾಗ, ಹಸುಳೆ ಅಬಲೆಯರ ಅತ್ಯಾಚಾರಗಳ ಬೆನ್ನಲ್ಲೇ ಕ್ರೌಯ೯ ತಾಂಡವವಾಡುವಾಗ , ಪ್ರಕ್ಷುಬ್ಧತೆಯ ವಾತಾವರಣ ಎಲ್ಲರ ಮನಸ್ಸು ಖಿನ್ನವಾಗುವುದು.ಸಣ್ಣ ನಗುವೊಂದಕೆ ಮನ ಹಪಹಪಿಸುವುದು.
ವಾಸ್ತವದಿಂದ ಕಳಚಿಕೊಂಡು ಕನಸೊoದ ಕಾಣುವ , ಎಲ್ಲ ಮರೆತು ನಕ್ಕು ನಗಿಸುವ ಹೊಸ ಕಲಿಕಾರ್ಥಿಗಳ ರಂಗ ಪ್ರಯೋಗ ಅದ್ಭುತವಾಗಿತ್ತು “ ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್” ಇದು ಷೇಕ್ಸ್ ಪಿಯರ್ ಮಹಾಕವಿಯ ಕನಸು , ಕಣ್ಣಾಗಿಸುವ ಕನಸು, ಮನಕೂಡಿಸುವ ಕನಸು, ಕೆಡುಕನ್ನು ಒಳಿತಾಗಿಸುವ ಕನಸು, ಪ್ರಸ್ತುತ ಜಂಜಾಟಗಳೆಲ್ಲದರಿಂದ ದೂರಾಗಿಸಿ ಕನಸಂಥಾ ಲೋಕವನ್ನು ನನಸು ಮಾಡಿಕೊಳ್ಳುವಂಥಾ ಮನಸ್ಸು ನೀಡುವ ಕನಸಿದು…. ಇದೆಲ್ಲಕ್ಕೂ ಮಿಗಿಲಾಗಿ ರಂಗಭೂಮಿಯೆಂಬ ಸ್ವರ್ಗಕ್ಕಿಳಿಯಲು ಹಾತೊರೆದು, ಶ್ರದ್ಧೆಯಿಂದ ಅರಿತು, ಕಲಿತು, ಮೊದಲ ಬಾರಿಗೆ ರಂಗವನ್ನೇರಲಿರುವ ಅನೇಕರ ಕನಸು…… ಇವರೆಲ್ಲರೊಡನೆ ನಿರ್ದೇಶಕರಾದ ಶ್ರೀಮತಿ ರೇಣುಕಾ ಚವ್ಹಾಣ ಹಾಗೂ ಇಡೀ ತಾಂತ್ರಿಕ ವರ್ಗದವರ ಕನಸು ನನಸಾಗುವುದು ಅಂದು… ‘ಕನಸಿ’ಗೆ ಸಾಕ್ಷಿಯಾಗುವ ಅಪರೂಪದ ರಂಗ ಕಾಲಾಕ್ರುತಿ.
ಷೇಕ್ಸ್ ಪಿಯರ್ ಮಹಾಕವಿಯ ಈ ನಾಟಕವನ್ನು ಕನ್ನಡಕ್ಕೆ ತಂದಿರುವವರು ಪ್ರೊ. ಕೆ.ಎಸ್.ನಿಸಾರ್ ಅಹಮದ್ . ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಬಿಡನಾಳ ಗ್ರಾಮದ ಬಾಂಧವಿ ಶಾಲೆಯಲ್ಲಿ ಪ್ರಯೋಗ ಕಂಡಿತು.
ಆರ್ ಕೆ ಬಾಗವಾನ ,ಗೋಗೇರಿ ಡಾ, ಗೌರಿ ನಾಜರ್ ಪಿ ಎಸ್, ಆಶಾ ವಿ, ಬಸವರಾಜ ಚಿಲವಾಡಗಿ,ಶಾಂತರಾಜ ರಾಯಚೂರು, ಮುಂತಾದ ಊರಿನ ಹಿರಿಯರು ನೋಡಿ ಆನಂದಿಸಿದರು