ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಪ್ರಕಾಶ್ ಕಂದಕೂರ ಛಾಯಾಚಿತ್ರಕ್ಕೆ ಬಹುಮಾನ

ಕೊಪ್ಪಳ: ತಮಿಳುನಾಡಿನ ಚೆನ್ನೈನ ಸಿ.ಎಮ್.ವೈ.ಕೆ ಸಂಸ್ಥೆ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಜಿಲ್ಲೆಯ ಛಾಯಾಗ್ರಾಹಕ ಪ್ರಕಾಶ ಕಂದಕೂರರ ಛಾಯಾಚಿತ್ರ ‘ಅರ್ಹತೆಯ ಪ್ರಮಾಣಪತ್ರ’ (‘ಸರ್ಟಿಫಿಕೆಟ್ ಆಫ್ ಮೆರಿಟ್’) ಪಡೆದಿದೆ.

ಬೆಳಕಿನ ಹಿನ್ನೆಲೆಯಲ್ಲಿ ಮಗುವನ್ನು ಎತ್ತಿ ಆಡಿಸುತ್ತಿರುವ ತಾಯಿಯ ಭಾವನೆಗಳನ್ನೊಳಗೊಂಡ `ಅಫೆಕ್ಷನ್ ಆಫ್ ಮದರ್’ ಶೀರ್ಷಿಕೆಯ ಈ ಛಾಯಾಚಿತ್ರ ಸ್ಪರ್ಧೆಯ ಕಪ್ಪು-ಬಿಳುಪು ಚಿತ್ರಗಳ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ.

ದೇಶದ ವಿವಿಧ ಭಾಗಗಳ ಒಟ್ಟು ೩೨೬ ಜನ ಸ್ಪರ್ಧಿಗಳ ೨೮೫೭ ಛಾಯಾಚಿತ್ರಗಳು ಸ್ಪರ್ಧೆಗೆ ಆಗಮಿಸಿದ್ದವು. ಅಂತರಾಷ್ಟ್ರೀಯ ಛಾಯಾಗ್ರಾಹಕರಾದ ಬಿದ್ಯಾಸಾಗರ ಬರುವಾ, ರತ್ನಜಿತ್ ಚೌಧರಿ, ಉದಯನ್ ಶಂಕರ್ ಪಾಲ್, ಸಾಧಿಕರ್ ರಹಮಾನ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಮಾರ್ಚ್ ತಿಂಗಳ ಮೂರನೇ ವಾರದಲ್ಲಿ ಚೆನ್ನೈನಲ್ಲಿ ಎರಡು ದಿನಗಳ ಕಾಲ ಛಾಯಾಚಿತ್ರ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಸಂಘಟಕ ಕಿರಣಕುಮಾರ್ ರುಬ್ಡೆ ತಿಳಿಸಿದ್ದಾರೆ.

 

Please follow and like us: