ಈಗಾಗಲೇ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳವರ ಆಶೀರ್ವಾದ, ಮಾರ್ಗದರ್ಶನದಲ್ಲಿ ನಡೆಯುವ ಈ ಅಭಿಯಾನಕ್ಕೆ ಅಭಿನವ ಬೀಚಿ ಎಂದು ಖ್ಯಾತಿಯಾಗಿರುವ ಶ್ರೀ ಪ್ರಾಣೇಶ್ ಇವರನ್ನೂ ಕೂಡ ರಾಯಭಾರಿಯನ್ನಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಘೋಷಿಸಲಾಗಿದೆ, ರಾಷ್ಟ್ರಮಟ್ಟದಲ್ಲಿ ಅಮಿತಾಬ್ ಬಚ್ಚನ್ ಇರುವ ಹಾಗೆ ಕೊಪ್ಪಳಕ್ಕೆ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಶ್ರೀ ಪ್ರಾಣೇಶ್ ಗಂಗಾವತಿ ಇವರುಗಳು ನೇತೃತ್ವವಹಿಸಿ ಸಮಾಜದ ಪ್ರತಿಯೊಬ್ಬರಿಗೂ ಕ್ಷಯರೋಗದ ಜಾಗೃತಿಯನ್ನು ಮೂಡಿಸುವುದು ಹಾಗೂ ಅತಿ ಹೆಚ್ಚು ಕ್ಷಯರೋಗಿಗಳಿರುವ ಕೊಪ್ಪಳ ಜಿಲ್ಲೆಯಲ್ಲಿ ರೋಗವನ್ನು ತಡೆಗಟ್ಟಿ ಜನರ ಜೀವ ಕಾಪಾಡುವ ಉದ್ದೇಶವಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ. ಎಂ. ಜಿ ಮಹೇಶ್ ಅವರು ತಿಳಿಸಿದರು.
ಗಂಗಾವತಿ ಪ್ರಾಣೇಶ ಜಿಲ್ಲಾ ಕ್ಷಯರೋಗ ಜಾಗೃತ ಅಭಿಯಾನದ ರಾಯಭಾರಿಯಾಗಿ ಆಯ್ಕೆ
Please follow and like us: