​ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇಟ್ಟಿದ್ದ  ಪ್ರಕರಣದ ಆರೋಪಿ ಆದಿತ್ಯ ರಾವ್ ಡಿಜಿಪಿ – ಐಜಿಪಿ ಮುಂದೆ ಶರಣು

ಮಂಗಳೂರು , ಜ . 22 : ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣದ ಆರೋಪಿ ಉಡುಪಿ ಮೂಲದ ಆದಿತ್ಯ ರಾವ್ ಬುಧವಾರ ಬೆಂಗಳೂರಿನಲ್ಲಿ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಡಿಜಿಪಿ – ಐಜಿಪಿ ನೀಲಮಣಿ ಎನ್ . ರಾಜು ಅವರ ಕಚೇರಿಗೆ ಬಂದು 

ಶರಣಾಗಿದ್ದಾನೆ .ಇಂದು ಬೆಳಗ್ಗೆ 8 : 45ರ ಸುಮಾರಿಗೆ ಆತ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ . ಆತನನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ . ಆರೋಪಿ ಆದಿತ್ಯ ರಾವ್ ವಿಮಾನ ನಿಲ್ದಾಣದಲ್ಲಿ ತಾನೇ ಸ್ಫೋಟಕ ತುಂಬಿದ ಬ್ಯಾಗ್ ಇಟ್ಟು ಪರಾರಿಯಾಗಿರುವುದಾಗಿ ಪೊಲೀಸರ ಮುಂದೆ ತಮ್ಮೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ . ಆರೋಪಿ ಆದಿತ್ಯ ರಾವ್ ನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ . ಈ ನಡುವೆ ಪೊಲೀಸರು ಆರೋಪಿ ಆದಿತ್ಯನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ .

Please follow and like us: