​ಸಿಎಎ ಪ್ರತಿಭಟನಾಕಾರರಿಗೆ ಪಾಕಿಸ್ತಾನಕ್ಕೆ ಹೋಗಿ ಎಂದ ಪೋಲೀಸ್ ಅಧಿಕಾರಿ!

 28 Dec , 2019  : ಕಳೆದ ಶುಕ್ರವಾರ ಮೀರತ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ 

ನಡೆಯುತ್ತಿದ್ದ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸುತ್ತಿದ್ದ ಮೀರತ್ ಎಸ್‌ಪಿ ಅಖಿಲೇಶ್ ನಾರಾಯಣ್ ಸಿಂಗ್ ‘ ಪಾಕಿಸ್ತಾನಕ್ಕೆ ಹೋಗಿ ‘ ಎಂದು ಆಕ್ರೋಶದಿಂದ ಹೇಳುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ . ಯಾರೋ ತಮ್ಮ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ ಈ ವೀಡಿಯೊದಲ್ಲಿ ಮೀರತ್‌ನ ಇಕ್ಕಟ್ಟಾದ ಗಲ್ಲಿಯೊಂದರಲ್ಲಿ ಕೆಲವು ಇತರ ಪೊಲೀಸ್ ಸಿಬ್ಬಂದಿಗಳೊಂದಿಗೆ ಸಾಗುತ್ತಿದ್ದ ಸಿಂಗ್ ಒಂದು ಕಡೆ ಸ್ಕಲ್ ಕ್ಯಾಪ್ ಧರಿಸಿದ್ದ ಕೆಲ ವ್ಯಕ್ತಿಗಳು ನಿಂತಿದ್ದ ಕಡೆಗೆ ಬಂದು ‘ ‘ ನೀವೆಲ್ಲಿ ಹೋಗುತ್ತೀರಿ ? ಈ ಗಲ್ಲಿಯಲ್ಲೀಗ ಸರಿ ಪಡಿಸುತ್ತೇನೆ . ನೀವು ನನಗೊಂದು ಅವಕಾಶ ಕೊಟ್ಟಿದ್ದೀರಿ ‘ ‘ ಎಂದು ಹೇಳುವುದು ಕೇಳಿಸುತ್ತದೆ . ಆಗ ಅಲ್ಲಿದ್ದವರೊಬ್ಬರು ‘ ನಾವು ನಮಾಝ್ ಸಲ್ಲಿಸುತ್ತಿದ್ದೇವೆ ಅಷ್ಟೇ ‘ ‘ ಎಂದಾಗ , ಸಿಂಗ್ ” ಅದು ಸರಿ ಆದರೆ ನೀವು ಧರಿಸಿರುವ ಈ ಕಪ್ಪು ಮತ್ತು ನೀಲಿ ಪಟ್ಟಿಗಳು ,  ಅವರಿಗೆ ಪಾಕಿಸ್ತಾನಕ್ಕೆ ಹೋಗಲು ಹೇಳಿ , ಇಲ್ಲಿರಲು ಬಯಸದೇ ಇದ್ದರೆ ಹೋಗಿ ಬಿಡಿ . ನೀವು ಇಲ್ಲಿ ಬರುತ್ತೀರಿ ಆದರೆ ಬೇರೆ ಯಾರದ್ದೋ ಗುಣಗಾನ ಮಾಡುತ್ತೀರಿ , ” ಎಂದು ಆ ಪೊಲೀಸ್ ಅಧಿಕಾರಿ ಆ ಎರಡು ನಿಮಿಷ ಅವಧಿಯ ವೀಡಿಯೊದಲ್ಲಿ ಹೇಳುವುದು ಕೇಳಿಸುತ್ತದೆ . ಆ ಅಧಿಕಾರಿ ಮತ್ತು ಇತರ ಪೊಲೀಸರು ಅಲ್ಲಿಂದ ಹೋದರೂ ಮತ್ತೆ ಅಲ್ಲಿಗೆ ಕನಿಷ್ಠ ಮೂರು ಬಾರಿ ಬಂದು ” ಪ್ರತಿ ಮನೆಯ ಪ್ರತಿ ವ್ಯಕ್ತಿಯನ್ನು ಜೈಲಿಗೆಸೆಯುತ್ತೇನೆ , ಎಲ್ಲರನ್ನೂ ನಾಶ ಪಡಿಸುತ್ತೇನೆ ‘ ಎಂದು ಹೇಳುತ್ತಿರುವುದೂ ದಾಖಲಾಗಿದೆ . ಯಾವ ಸನ್ನಿವೇಶದಲ್ಲಿ ಅಧಿಕಾರಿ ಈ ರೀತಿ ಕಿಡಿ ಕಾರಿದ್ದಾರೆಂದು ನಿಖರವಾಗಿ ತಿಳಿದಿಲ್ಲವಾದರೂ ಕೆಲವರು ಪಾಕ್ ಪರ ಘೋಷಣೆಗಳನ್ನು ಕೂಗುತ್ತಿದ್ದುದಕ್ಕೆ ತಾನು ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾಗಿ ಸಿಂಗ್ ಸುದ್ದಿ ಸಂಸ್ಥೆಯೊಂದರ ಜತೆ | ಮಾತನಾಡುತ್ತಾ ಹೇಳಿದ್ದಾರೆ .

Please follow and like us: