ಶಾರ್ಟ್ ಸರ್ಕ್ಯೂಟ್-ಕಬ್ಬು,ಜೋಳ ಸಂಪೂಣ೯ಭಸ್ಮ :  ೨0ಲಕ್ಷ ರೂ ಬೆಳೆನಷ್ಟ

<-> ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಕಬ್ಬಿನ ಗದ್ಧೆಯಲ್ಲಿದ್ದ ಟ್ರಾನ್ಸ್ಪರ್ಮರ್ ನಲ್ಲಿ ಉಂಟಾದ ಶಾಟ್೯ ಸಕ್ರ್ಯೂಟ್ ನಿಂದಾಗಿ ಅಗ್ನಿ ಆವಘಡ ಸಂಭವಿಸಿ ಪರಿಣಾಮ ಕಬ್ಬಿನ ಗದ್ದೆ ಹಾಗೂ ಜೋಳದ ಹೊಲವನ್ನೇ ಭಸ್ಮಗೊಳಿಸಿರುವ ಘಟನೆ ಶುಕ್ರವಾರ ಸಂಜೆ ಜರುಗಿದೆ. ಕೂಡ್ಲಿಗಿ ಪಟ್ಟಣದ ಚೋರನೂರು 

ರಸ್ತೆಯಲ್ಲಿರುವ ಚನ್ನನಗೌಡ.ಲೋಕನಗೌಡ ಎಂಬುವವರಿಗೆ ಸೇರಿರುವ 12ಎಕರೆ ಯಲ್ಲಿ ಬೆಳೆದಿದ್ದಕಬ್ಬು ಬೆಳೆ ಹಾಗೂ 8ಎಕರೆ ಜೋಳದಬೆಳೆ ಬೆಳೆದಿದ್ದು. ಎಲ್ಲವನ್ನೂ ಬೆಂಕಿಯ ಜ್ವಾಲೆ ತನ್ನ ಕೆನ್ನಾಲಗೆ ಚಾಚಿ ಆಪೋಷನ ತೆಗೆದುಕೊಂಡಿದ್ದು.ಪರಿಣಮ ಸುಮಾರು20ಲಕ್ಷರೂಗಳಷ್ಟು ನಷ್ಟ  ವಾಗಿರುವುದಾಗಿ ತಿಳಿದುಬಂದಿದೆ. ಕಬ್ಬಿನಗದ್ದೆಯಲ್ಲಿರುವ ಟ್ರಾನ್ಸ್ ಫಾಮ್೯ರ್ನಲ್ಲಾದ ಲೋಪದಿಂದಾಗಿ ಆಕಸ್ಮಿಕ ಬೆಂಕಿ ಉತ್ಪನ್ನವಾಗಿ ಅದು ಹತ್ತಿರವಿರುವ ಕಬ್ಬಿನ ಬೆಳಗೆ ಹತ್ತಿದ್ದು.ಕೆಲವೇ ಹೊತ್ತಲ್ಲಿ ಇಡೀ ಕಬ್ಬಿನಗದ್ದೆಯನ್ನ ಬೆಂಕಿ ಆವರಸಿದೆ ಮತ್ತು ಅದಕ್ಲೆ ಹೊಂದಿಕೊಂಡಿರುವ ಜೋಳದ  ಹೊಲಕ್ಕೂ ಜ್ವಾಲೆ ಹರಡಿ ಕಬ್ಬು ಹಾಗೂ ಜೋಳ ಸಂಪೂಣ೯ ಸುಟ್ಟು ಭಸ್ಮವಾಗಿದೆ.ಬೆಂಕಿ ಆವರಿಸಿರುವ ವಿಷಯ ತಿಳಿದ ಕೂಡ್ಲಿಗಿ ಅಗ್ನಿಶಾಮಕ ಸಿಬ್ಬಂದಿ ತಮ್ಮ 2 ವಾಹನಗಳೊಂದಿಗೆ ಬೆಂಕಿ ನಂದಿಸಲು ಹರಸಾಹಸ ಮಾಡಿದ್ದಾರೆ ಪ್ರಯೋಜವಾಗಿಲ್ಲ. ಸಾವ೯ಜನಿಕರೂ ಸಹ ನಿರಂತರ ಪ್ರಯತ್ನ ಪಟ್ಟರಾದರೂ ಏನೂಪ್ರಯೋಜನವಾಗಿಲ್ಲ.ಈ ಅಗ್ನಿ ಅವಘಡದಿಂದ 12ಎಕರೆಯಲ್ಲಿದ್ದ ಕಟಾವು ಹಂತದ್ದಲ್ಲಿದ್ದ ಕಬ್ಬು ಹಾಗೂ 8ಎಕರೆಯಲ್ಲಿದ್ದ ಜೋಳದ ಬೆಳೆ ಅಗ್ನಿಗೆ ಬಲಿಯಾಗಿ ಸಂಪೂಣ೯ ಭಸ್ಮವಾಗಿದ್ದು. ಒಟ್ಟು 20 ಲಕ್ಷರೂ ನಷ್ಟುನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. *ತಹಶೀಲ್ದಾರರು ಬೆಟ್ಟಿ-ಸಾಂತ್ವಾನ* ಬೆಂಕಿ ಅವಘಡದ ಸುದ್ದಿ ತಿಳಿದ ತಹಶೀಲ್ದಾರರಾದ ಎಸ್.ಮಹಾಬಲೇಶ್ವರರು ಗ್ರಾಮಲೆಕ್ಕಿಗ ನವೀನ ಹಾಗೂ ಸಿಬ್ಬಂದಿಯೊಂದಿಗೆ ಘಟನೆ ಜರುಗಿದ ಸ್ಥಳಕ್ಕೆ ಬೆಟ್ಟಿ ನೀಡಿ ಪರಿಶೀಲಿಸಿದ್ದು.ಬೆಳೆ ನಷ್ಟದ ಸಂಕಷ್ಟದಲ್ಲಿದ್ದ ಲೋಕನಗೌಡ ಹಾಗೂ ಚನ್ನನಗೌಡರಿಗೆ ಸಾಂತ್ವಾನ ಹೇಳಿದ್ದಾರೆ ಮತ್ತು ಇಲಾಖೆಯಿಂದ ಬರಬಹುದಾದ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆಯನ್ನಿತ್ತಿದ್ದಾರೆ.ಘಟನೆಯ ಮಾಹಿತಿ ತಿಳಿದ ಕೂಡ್ಗಿಗಿ ಘಟಕದ ಜೆಸ್ಕಾಂ ಅಧಿಕಾರಿ ತಮ್ಮ ಸಿಬ್ಬಂದಿಯೊಡನೇ ದಿಡೀರ್ ಸ್ಥಳಕ್ಕೆ ದಾವಿಸಿ ಹೆಚ್ಚಿನ ಘಟನೆಯು  ಜರುಗದಂತಹ ಮುಂಜಾಗೃತ ಕ್ರಮಗಳನ್ನು ಕೈಗೊಂಡರು. ತಹಶೀಲ್ದಾರವರ ವರದಿ ಹಾಗೂ ಶಿಪಾರಸ್ಸಿನಂತೆ ಬೆಂಕಿ ಆಕಸ್ಮಿಕ ನಷ್ಟದ ಕುರಿತಾದ ಸಂಪೂಣ೯ ಮಾಹಿತಿಯನ್ನು ತಮ್ಮ ಉನ್ಮತಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರಕ್ಕಾಗಿ ಕೋರಲಾಗುವುದೆಂದು ಜೆಸ್ಕಾಂ ಅಧಿಕಾರಿ ತಿಳಿಸಿದ್ದಾರೆ.ಬೆಂಕಿ ನಂದಿಸುವ ಕಾಯ೯ದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ನಿರಂತರ 4ತಾಸುಗಳ ಕಾಲ ಲಾಯ೯ಚರಣೆ ನಡೆಸಿದರಾದರೂ ಪ್ರಯೋಜವಾಗಿಲ್ಲ.ಇವರೊಂದಿಗೆ ಜೆಸ್ಕಾಂ ಸಿಬ್ಬಂದಿ ಭಾಗಿಯಾದರು ಮತ್ತು ಹಲವಾರು ಸಾವ೯ಜನಿಕರೂ ಇವರೆಲ್ಲರೊಂದಿಗೆ ಸಾಥ್ ನೀಡಿದರು.

Please follow and like us: