೧೫ ಕ್ಷೇತ್ರಗಳಲ್ಲಿ ಮುಂದುವರೆದ ಮತದಾನ

ಬೆಂಗಳೂರು , ಡಿ . 5 : ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡಿದೆ . ಗೋಕಾಕ , ಕಾಗವಾಡ , ಅಥಣಿ , ಯಲ್ಲಾಪುರ , ವಿಜಯನಗರ , ರಾಣೆಬೆನ್ನೂರು , ಹಿರೇಕೆರೂರು , ಹುಣಸೂರು , ಕೆ . ಆರ್ . ಪೇಟೆ , ಚಿಕ್ಕಬಳ್ಳಾಪುರ , 

ಹೊಸಕೋಟೆ , ಮಹಾಲಕ್ಷ್ಮೀ ಲೇಔಟ್ , ಕೆ . ಆರ್‌ . ಪುರ , ಶಿವಾಜಿ ನಗರ ಹಾಗೂ ಯಶವಂತಪುರ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ . ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಥಣಿ ಮತ ಕ್ಷೇತ್ರದ ನಾಗನೂರು ಪಿ . ಕೆ . ಸರ್ಕಾರಿ ಪ್ರೌಢಶಾಲೆಯ 204ರ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸಿದರು . ವಿಜಯನಗರ ಕ್ಷೇತ್ರದ ಉಪಚುನಾವಣೆಯ ಮತದಾನ ಆರಂಭಗೊಂಡಿದೆ . 247 ಬೂತ್ ಗಳಿರುವ ವಿಜಯನಗರ ಕ್ಷೇತ್ರದಲ್ಲಿ ಹೊಸಪೇಟೆ ನಗರದಲ್ಲಿ 165 , ಕಮಲಾಪುರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 20 , ಉಳಿದವು ಗ್ರಾಮಾಂತರ | ಕ್ಷೇತ್ರದ ವ್ಯಾಪ್ತಿಯ ಬೂತ್ ಗಳಾಗಿವೆ . ಈ ಪೈಕಿ ಒಂದು ಪಿಂಕ್ ಬೂತ್ ಆಗಿದೆ . ಮತದಾನ ಪ್ರಕ್ರಿಯೆ ಕ್ಷೇತ್ರದಾದ್ಯಂತ ಸುಸೂತ್ರವಾಗಿ ಆರಂಭವಾಗಿದೆ .

Please follow and like us: