ಏಕಾಏಕಿ ಸುಟ್ಟ ಕಾರು : ಮಹಿಳೆ ಸಜೀವ ದಹನ 

ಬೀದರ್ , : : ಎ . ಸಿ . ಬಿಸಿಯಾಗಿ ಕಾರಿನಲ್ಲಿ ಬೆಂಕಿ 

ಕಾಣಿಸಿಕೊಂಡ ಪರಿಣಾಮ ಮಹಿಳೆಯೊಬ್ಬರು ಸಜೀವ 

ದಹನವಾಗಿರುವ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ನ ರಾಷ್ಟ್ರೀಯ ಹೆದ್ದಾರಿ 9ರ ನಿರ್ಣಾ ಕ್ರಾಸ್ ಬಳಿ ಇಂದು ಬೆಳಗ್ಗೆ ನಡೆದಿದೆ . ಉದಯಕುಮಾರ್ ಎಂಬವರ ಪತ್ನಿ ಕಲ್ಯಾಣಿ ( 39 ) ಎಂಬವರೇ ಕಾರಿನಲ್ಲೇ ಸಜೀವದಹನಗೊಂಡ ಮಹಿಳೆ . ಪತಿ ಉದಯಕುಮಾರ್ ಮತ್ತು ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ . ಮಹಾರಾಷ್ಟ್ರದ ಉದಗೀರ್ ನಿಂದ ಹೈದರಾಬಾದ್ ಗೆ ಒಂದೇ ಕುಟುಂಬದ ನಾಲ್ವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು . ಆಗ ಏಕಾಏಕಿ ಕಾರಿನ ಎಸಿ ಬಿಸಿಯಾಗಿ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿತು . ಸೀಟ್ ಬೆಲ್ಸ್ ಕಟ್ಟಿದ್ದ ಮಹಿಳೆ ಅದನ್ನು ತೆಗೆಯಲು ಸಾಧ್ಯವಾಗದೆ ಕಾರಿನೊಳಗೆ ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ .

Please follow and like us: