ಬಿಜೆಪಿ ಜೊತೆ ಅನರ್ಹ ಶಾಸಕನ ಡೀಲ್ ? : ಪೆನ್ ಡ್ರೈವ್ ಪ್ರದರ್ಶಿಸಿ ದಾಖಲೆ ಇದೆ ಎಂದ ಮಾಜಿ ಸಂಸದ

ಮಂಡ್ಯ , ನ . 28 : ” ಅನರ್ಹ ಶಾಸಕ ನಾರಾಯಣಗೌಡ ಬಿಜೆಪಿ ಮುಖಂಡರಿಂದ ಹಣ ಪಡೆದು ಮೈತ್ರಿ ಸರ್ಕಾರ ಉರುಳಿಸಿದ್ದಾರೆ . ಇದಕ್ಕೆ ಆಡಿಯೋ ದಾಖಲೆ ಇದೆ ‘ ಎಂದು ಮಾಜಿ ಸಂಸದ ಎಲ್ . ಆರ್‌ . ಶಿವರಾಮೇಗೌಡ ಬಾಂಬ್ ಸಿಡಿಸಿದ್ದಾರೆ . ಕೆ . ಆರ್ . ಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , 

ಶಾಸಕರಾಗಿದ್ದ ನಾರಾಯಣಗೌಡ ಅವರು ಬಿಜೆಪಿ ಮುಖಂಡರ ಜತೆ ನಡೆಸಿರುವ ಸಂಭಾಷಣೆಯ ದಾಖಲೆ ಇದೆ ಎಂದು ಪೆನ್ ಡ್ರೈವ್ ಪ್ರದರ್ಶಿಸಿದರು . ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ನಾರಾಯಣಗೌಡ ಬಿಜೆಪಿ ನಾಯಕರ ಜೊತೆ ನಡೆಸಿರುವ ಸಂಭಾಷಣೆ ಇದಾಗಿದೆ . ಮೊದಲು 5 ಕೋಟಿ ರೂಪಾಯಿಗೆ ಒಪ್ಪಂದ ಆಗಿತ್ತು . ಆದರೆ ನಾರಾಯಣಗೌಡ ಇದು ಸಾಲುವುದಿಲ್ಲ ಎಂದು ಹಿಂದಕ್ಕೆ ಬಂದಿದ್ದರು . ನಂತರ ಒಪ್ಪಂದ ನಡೆದು ಹಣ ಪಡೆದು ರಾಜೀನಾಮೆ ಸಲ್ಲಿಸಿ ಮುಂಬೈಗೆ ತೆರಳಿದರು . ಈ ಆಡಿಯೋ ಬಗ್ಗೆ | ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯಬೇಕು . ನಾರಾಯಣಗೌಡ ತಾನು ಹಣ ಪಡೆದಿಲ್ಲ ಎಂದು ಹಾಗೂ ಸಿಎಂ ಯಡಿಯೂರಪ್ಪ ತಾವು ಹಣ ನೀಡಿಲ್ಲ ಎಂದು ಧರ್ಮಸ್ಥಳದ ಮುಂಜುನಾಥನ ಮುಂದೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು . ಮೈತ್ರಿ ಸರ್ಕಾರದಲ್ಲಿ ಮಂಡ್ಯ ಜಿಲ್ಲೆಗೆ ನಿಗದಿಯಾಗಿದ್ದ 8 , 500 ಕೋಟಿ ರೂಪಾಯಿ ಅನುದಾನವನ್ನು ಬಿಜೆಪಿ ಸರ್ಕಾರ ಹಿಂದಕ್ಕೆ ಪಡೆದಿದೆ . ಹೀಗಾಗಿ ಬಿಜೆಪಿಯವರು ಕೆ . ಆರ್ . ಪೇಟೆಯಲ್ಲಿ ಮತ ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ ಎಂದರು .

Please follow and like us: