ಕವಿ ಡಾ.ಲಕ್ಷ್ಮಣ ವಿ.ಎ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ

Dharawad :  2019 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಬೆಳಗಾವಿಯ ಕವಿ ಡಾ.ಲಕ್ಷ್ಮಣ ವಿ.ಎ ಅವರ ‘ಅಪ್ಪನ ಅಂಗಿ’ ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಖ್ಯಾತ ಕವಿಗಳು ಹಾಗೂ ವಿಮರ್ಶಕರುಗಳಾದ ಪ್ರತಿಭಾ ನಂದಕುಮಾರ ಹಾಗೂ ಸುಬ್ಬು ಹೊಲೆಯಾರ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಈ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಶೀರ್ಘದಲ್ಲಿ ನೆರವೇರುವುದು..

ಅಂತಿಮ ಸುತ್ತಿಗೆ ಆಯ್ಕೆ ಆದ 11 ಕವಿಗಳ ಸಂಕಲನಗಳು ತೀವ್ರ ಸ್ಪರ್ಧೆ ಒಡ್ಡಿದವು. ಆಯ್ಕೆ ಕಷ್ಟವೇ ಆಯಿತು. ಕೊನೆಗೆ ಎರಡು ಸಂಕಲನ ನಡುವೆ ಯಾವುದನ್ನು ಆಯ್ಕೆ ಮಾಡಬೇಕು ತೀರ್ಮಾನಿಸಲು ಎರಡು ದಿನ ತಗೆದುಕೊಂಡೆವು ಎಂದು ತೀರ್ಪುಗಾರರು ಹೇಳಿದರು. ಅವರಿಗೆ ನಮ್ಮ ಧನ್ಯವಾದಗಳು ಸಲ್ಲುತ್ತವೆ. ಮೊದಲ ಸುತ್ತಿನ ಆಯ್ಕೆಯನ್ನು ಪ್ರಕಾಶ್ ಖಾಡೆ, ಡಾ. ಡಿ ಬಿ ಗವಾನಿ, ಗಿರಿಯಪ್ಪ ಕಿರೇಸೂರ, ಎಚ್ ಎಸ್ ರಾಮನಗೌಡ, ವಿಭಾ ಸಾಹಿತ್ಯ ಪ್ರಶಸ್ತಿ ಸಂಚಾಲಕರಾದ ಸುನಂದಾ ಮತ್ತು ಪ್ರಕಾಶ ಕಡಮೆ ಅವರು ಮಾಡಿಕೊಟ್ಟಿದ್ದಾರೆ. 

ಅಂತಿಮ ಸುತ್ತಿಗೆ ಆಯ್ಕೆ ಆಗಿದ್ದ ಕವಿಗಳು

1) ರಾಮಲಿಂಗಪ್ಪ ಟಿ ಬೇಗೂರ
2) ಚಾಂದ್ ಪಾಷ ಎನ್ ಎಸ್
3) ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
4) ಸುನೈಫ್, ದಕ್ಷಿಣ ಕನ್ನಡ
5) ಬಿದಲೋಟಿ ರಂಗನಾಥ್
6) ನೂರುಲ್ಲಾ ತ್ಯಾಮಗೊಂಡ್ಲು
7) ಡಾ.ಲಕ್ಷ್ಮಣ ವಿ.ಎ
8) ರಾಮಚಂದ್ರ ಕುಲಕರ್ಣಿ
9) ಡಾ.ಪದ್ಮನಿ ನಾಗರಾಜು
10) ಕು.ಸ ಮಧುಸೂದನ
11) ಮಿಲನ್ ಎಂ.ಎಚ್

ಕವಿ ಪರಿಚಯ:
ವಿಭಾ ಸಾಹಿತ್ಯ ಪ್ರಶಸ್ತಿ-2019 ಪಡೆದ ಕವಿ ಡಾ.ಲಕ್ಷ್ಮಣ ವಿ.ಎ ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದಲ್ಲಿ 1977 ರಲ್ಲಿ ಜನಿಸಿದ ಇವರ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಮೋಳೆಯಲ್ಲೇ ನಡೆಯಿತು. ಧಾರವಾಡದ ಕರ್ನಾಟಕ ಸೈನ್ಸ್ ಕಾಲೇಜಿನಲ್ಲಿ ಪಿಯೂಸಿ ಮುಗಿಸಿದ ಲಕ್ಷ್ಮಣ್, ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ತಮ್ಮ ವೈದ್ಯಕೀಯ ಪದವಿ ಗಳಿಸಿದರು. ನಂತರ ಮೈಸೂರು ವಿ.ವಿಯಿಂದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ, ಮತ್ತು ಡಿಪ್ಲೋಮಾ ಇನ್ ಫಾರ್ಮಸಿಯನ್ನು ತುಮಕೂರಿನ ಕೊರಟಗೆರೆಯಲ್ಲಿ ಪಡೆದರು. ಲಕ್ಷ್ಮಣ್ ಪ್ರಕಟಿಸಿದ ಪ್ರಥಮ ಕವನ ಸಂಕಲನ ‘ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’ ವು ಕಣವಿ ಕಾವ್ಯ ಪ್ರಶಸ್ತಿ ಹಾಗೂ ಮುಂಬೈ ನೇಸರು ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದೆ.

Please follow and like us: