ಬಿಜೆಪಿಯ ಗಾಂಧಿ ಸಂಕಲ್ಪ ಯಾತ್ರೆ : ತಂಗಡಗಿ ವಿರುದ್ದ ವಾಗ್ದಾಳಿ

ಕಾರಟಗಿ :    ೧೫೦ ನೇ ಗಾಂಧಿ ಜಯಂತಿ ಅಂಗವಾಗಿ ಇಂದು ನವಲಿ ಗ್ರಾಮದಿಂದ ಕಾರಟಗಿಯವರೆಗೆ  ಸುಮಾರು ೨೦ ಕಿ.ಮೀ ವರಗೆ ಗಾಂಧಿ ಸಂಕಲ್ಪ ಯಾತ್ರೆಯನ್ನು ಬಿಜೆಪಿ ಹಮ್ಮಿಕೊಂಡಿತ್ತು, ಸಂಕಲ್ಪ ಯಾತ್ರೆ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ  ಸಂಸದ ಸಂಗಣ್ಣ ಕರಡಿ ಸಂಗಣ್ಣ ಮಾತನಾಡಿ, ಪ್ರಮುಖವಾಗಿ ಪ್ಲಾಸ್ಟಿಕ್ ಮುಕ್ತ ಭಾರತವನ್ನು ನಿರ್ಮಾಣ ಮಾಡಲು ಈ ಯಾತ್ರೆಯನ್ನು 

ದೇಶಾದ್ಯಂತ ನಡೆಸಲಾಗುತ್ತಿದೆ. ಅಲ್ದೇ ಜಿಲ್ಲೆಯಲ್ಲಿ ನೀರಾವರಿ ಅಭಿವೃದ್ಧಿ ಆಗಬೇಕು ಎಂಬ ಉದ್ದೇಶ ಕೂಡ ಇದೆ ಎಂದರು. ಇನ್ನು  ಸಾವರ್ಕರ್ ಒಬ್ಬ ಮಹಾತ್ಮ, ಸಿದ್ದರಾಮಯ್ಯನವರು, ಕಾಂಗ್ರೆಸ್  ನಾಯಕರು ಹಗುರವಾಗಿ ಮಾತನಾಡೋದು ಬಿಡಬೇಕು. ಸರ್ದಾರ್ ವಲ್ಲಾಬಾಯಿ ಪಟೇಲ್, ಶಾಸ್ತ್ರಿ, ಬಿಡಿ ಜೆತ್ತಿ, ಸಾವರ್ಕರ್ ಇಂತವರನ್ನ ದೂರುವುದರಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ನ ಗಾಂಧಿ ಫ್ಯಾಮಿಲಿಗೆ ಭಾರತ ರತ್ನ ಕೊಡುವುದರಲ್ಲಿ ತಲ್ಲೀನರಾಗಿದ್ದಾರೆ. ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡಲಿ ನಮ್ಮ ಅಭ್ಯಂತರ ಇಲ್ಲ  ಅಂತಾ ಹೇಳಿದರು.  ಶಿವರಾಜ್ ತಂಗಡಗಿ ಮಾಡಿದ ಹಗರಣ ತನಿಖೆ ಆಗಬೇಕು.ನೀರಾವರಿ ಇಲಾಖೆಯಲ್ಲಿ 40 ಕೋಟಿ ನುಂಗಿಹಾಕಿದ್ದಾರೆ. ಸುಡುಗಾಡ ಸಿದ್ದರು ಕಲ್ಲು ನುಂಗಿದ್ರೆ, ತಂಗಡಗಿ ಕೆರೆ ನುಂಗಿದ್ದಾರೆಂದು ವ್ಯಂಗ್ಯವಾಡಿ ಹಗರಣ ಬಗ್ಗೆ ಸರ್ಕಾರ ತನಿಖೆ ನಡೆಸಲು ಒತ್ತಾಯಿಸಿದರು. 

ಶಾಸಕ  ಬಸವರಾಜ ದಡೇಸೂಗುರು ಮಾತನಾಡಿ, ನಮ್ಮ ಸಂಕಲ್ಪ ಈ ಭಾಗದಲ್ಲಿ ಸಮನಾಂತರ ಜಲಾಶಯವಾಗಬೇಕು ಎಂಬುದು ನಮ್ಮ ಉದ್ದೇಶ. ಈಗಾಗಲೇ ಸಂಸದರು ಹಾಗೂ ರಾಯಚೂರು, ಬಳ್ಳಾರಿ,  ಕೊಪ್ಪಳ ಶಾಸಕರ ನಿಯೋಗ ಹೋಗಿ ಸಚಿವ ಬೊಮ್ಮಾಯಿ ಅವರಿಗೆ ಒತ್ತಾಯಿಸಿದ್ದೇವೆ ಅಂತಾ ಹೇಳಿದರು.ಈ ಸಂಕಲ್ಪ ಯಾತ್ರೆ ಕೇಂದ್ರದ್ದು,  ರಾಜ್ಯದಲ್ಲಿ ಇದು ಸಂಸದರ ನೇತೃತ್ವದಲ್ಲಿ ನಡೆಯುತ್ತಿದೆ. ತಂಗಡಗಿ ನಡೆಸಿದ್ದು ಜಿಲ್ಲಾ ಮಟ್ಟದ್ದು,  ತಂಗಡಗಿ ಖಾಲಿ ಇರುವ  ಮನುಷ್ಯ, ಏನ್ ಬೇಕಾದರೂ ಮಾಡ್ತಾರೆ ಅಂತಾ ಹೇಳಿದರು

ಈ ವೇಳಿ ಮಧ್ಯ ಪ್ರವೇಶಿ ಸಂಸದ ಕರಡಿ ಸಂಗಣ್ಣ ಮಾತನಾಡಿ, ಕನಕಗಿರಿ ಕನಕರಾಯನ ಹಾಗೂ ಹುಲಿಗೆಮ್ಮ ದೇವಸ್ಥಾನದಲ್ಲಿ ಸಾಕ್ಷಿ ಮಾಡಲಿ ಕೋಟಿಗಟ್ಟಲೆ ಲೂಟಿ ಮಾಡಿದ್ದಾರೆ. ಅವತ್ತು ಏನು ಆಸ್ತಿ ಇದೆ ನೋಡಿ, ನೂರಕ್ಕೆ ನೂರು ಪರ್ಸೆಂಟ್ ಲೂಟಿ ಮಾಡಿದ್ದಾರೆ. ವಾರಕ್ಕೆ ಒಂದು ಸಲ ಜಾಲಿ ಟ್ರಿಪ್ ಮಾಡ್ತಾರೆ. ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರೈಸ್ ಪಾರ್ಕ್ ಬಗ್ಗೆ ಯಾವುದೇ ರೀತಿ ಮಾತನಾಡುತ್ತಿಲ್ಲ. ಸ್ಥಳೀಯವಾಗಿ ದಡೇಸೂಗುರು ಕೆಲಸ ಮಾಡುತ್ತಿದ್ದಾರೆ ಅಂತಾ ತಂಗಡಗಿ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ಬರ ಇತ್ತು. ಈಗ ಯಡಿಯೂರಪ್ಪ ಅವರ ಕಾಲ ಗುಣ ಚೆನ್ನಾಗಿ ಇದೆ ನೀರು ಹರಿಯುತ್ತಿದೆ. ಇದನ್ನ ಪರೋಕ್ಷವಾಗಿ ಹೇಳಲಾಗುತ್ತಿದೆ. ಅಂತಾ ತಿಳಿಸಿದರು.ವಈ ವೇಳೆ ಸಂಸದರು ಸ್ವಲ್ಪ ದೂರದ ವರೆಗೆ ರನ್ನಿಂಗ್ ಮಾಡಿದರು, ಕಾರ್ಯಕರ್ತರು ಕೂಡ ಅವರನ್ನು ಹಿಂಬಾಲಿಸಿದ ದೃಶ್ಯ ಕಂಡು ಬಂದಿತು. ಸಂಕಲ್ಪ ಯಾತ್ರೆಯಲ್ಲಿ ಕಾರ್ಯಕರ್ತರ ಸಂಖ್ಯೆ ಬಹಳಷ್ಟು ಕಡಿಮೆ ಸಂಖ್ಯೆಯಲ್ಲಿತ್ತು.

Please follow and like us: