ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಬಿಜೆಪಿಗೆ ? 

ಕೋಲಾರ :  ಜೆಡಿಎಸ್ ನ   ಮತ್ತೊಬ್ಬ ಹಿರಿಯ ಶಾಸಕ ಬಿಜೆಪಿ ಸೇರುವ ಸಾಧ್ಯತೆಗಳಿವೆ. ಕೋಲಾರ ಜೆಡಿಎಸ್ ಶಾಸಕ 

ಶ್ರೀನಿವಾಸಗೌಡ ಬಿಜೆಪಿಗೆ ಸೇರುವುದು ಖಚಿತ ಎನ್ನಲಾಗುತ್ತಿತ್ತು ಅದಕ್ಕೆ ಅವರೇ ಪ್ರತಿಕ್ರಿಯೆ ನೀಡಿದ್ದು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಧರ್ಮ ಮುರಿದು ಬಿಜೆಪಿಗೆ ಬೆಂಬಲ ಸೂಚಿಸಿದ್ದೇ. ಓಪನ್ ಆಗಿ ಬಿಜೆಪಿ ಪರವಾಗಿ ಕೆಲಸ‌ ಮಾಡಿದ್ದೇನೆ, ಅದಕ್ಕೆ ಬೇರೆ ಬೇರೆ ಕಾರಣಗಳು ಇವೆ.ನಾಲ್ಕು ಬಾರಿ, ನಾಲ್ಕು ಪಕ್ಷಗಳಿಂದ ಗೆದ್ದಿದ್ದೇನೆ, ಮುಂದೆ ಏನಾಗುತ್ತೋ ಗೊತ್ತಿಲ್ಲ. ರಾಜಕಾರಣ ಹರಿಯುವ ನೀರಿದ್ದಂಗೆ, ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ, ಹರಿಯುತ್ತಲೆ ಇರುತ್ತೆ.  ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ್ತೆ ಮೈತ್ರಿಯಾದ್ರು ಕೂಡ ನಮಗೆ ಅನುಕೂಲಕರವಾಗಿದೆ‌. ಎಂದು ಹೇಳುವ ಮೂಲಕ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಬಿಜೆಪಿ ಸೇರುವುದರ ಬಗ್ಗೆ ಸುಳಿವು ನೀಡಿದ್ದಾರೆ

Please follow and like us: