ಭರ್ಜರಿ ಮಹಾಮಳೆಗೆ ತೇಲಿಬಂದ ಶವಗಳು

ಬೆಂಗಳೂರು : ಮೊನ್ನೆಯಿಂದ ಮತ್ತೆ ಆರಂಭವಾಗಿರುವ ಮಹಾಮಳೆ ಬಹಳಷ್ಟು ಆವಾಂತರಗಳನ್ನು ಸೃಷ್ಟಿಸಿದೆ.  ಮನೆಮಠಗಳು ನೀರಿನಲ್ಲಿ ಮುಳುಗಿ ಹೋಗಿದ್ದು ಸೇತುವೆಗಳು ಕೊಚ್ಚಿ ಹೋಗಿವೆ. 

ಹಾವೇರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಮೃತವ್ಯಕ್ತಿಗಳ ತೇಲಿಬಂದಿವೆ. ಹಾವೇರಿ ನಗರದ ಹೊರವಲಯದಲ್ಲಿ ಇರೋ ಹೆಗ್ಗೇರಿ ಕೆರೆಯಲ್ಲಿ ಕೆರೆಯಲ್ಲಿ ತೇಲಿ ಬಂದ ಅನಾಮಧೇಯ ಶವ. ಸುಮಾರು 55 ವರ್ಷದ ವಯಸ್ಸಿನ ವ್ಯಕ್ತಿಯ ತೇಲಿ ಬಂದಿದ್ದು ಶವವನ್ನು ಅಗ್ನಿ ಶಾಮಕದಳ ಸಿಬ್ಬಂದಿಗಳು, ಪೋಲೀಸರು. ಹೊರತೆಗೆದಿದ್ದಾರೆ. ಹಾವೇರಿ ನಗರ ಪೋಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದರೆ ಕೊಪ್ಪಳ  ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ. ಮಹಾಮಳೆಗೆ ವ್ಯಕ್ತಿಯೋರ್ವ ಬಲಿಯಾಗಿದ್ದಾರೆ ಹಳ್ಳದಲ್ಲಿ ವ್ಯಕ್ತಿ ಶವ ಕೊಚ್ಚಿಕೊಂಡು ಬಂದಿದೆ.ಕೊಪ್ಪಳದ ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದಲ್ಲಿ ಘಟನೆ.ಹಳ್ಳದಲ್ಲಿ ಕೊಚ್ಚಿಕೊಂಡು ಬರ್ತಿದ್ದ ಶವ ನೋಡಿದ ಸ್ಥಳೀಯರು ಶವವನ್ನು ಜೆಸಿಬಿ ಮೂಲಕ ಹೊರ ತೆಗೆದಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Please follow and like us: