ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷದ ಸಿದ್ದಾಂತ , ನಿಲುವುಗಳನ್ನು ಒಪ್ಪಿಕೊಂಡು ಬಂದಲ್ಲಿ ಪಕ್ಷಕ್ಕೆ ಸ್ವಾಗತಿಸಲಾಗುವುದು – ಸಿದ್ದರಾಮಯ್ಯ

ಚಿಕ್ಕಮಗಳೂರು  : ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷದ ಸಿದ್ದಾಂತ , ನಿಲುವುಗಳನ್ನು ಒಪ್ಪಿಕೊಂಡು ಬಂದಲ್ಲಿ ಪಕ್ಷಕ್ಕೆ ಸ್ವಾಗತಿಸಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ . ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಪಕ್ಷದ ಸಿದ್ದಾಂತ , ನಿಲುವುಗಳನ್ನು ಒಪ್ಪಿಕೊಂಡು ಬಂದಲ್ಲಿ ಅನರ್ಹ ಶಾಸಕರನ್ನು ಪಕ್ಷಕ್ಕೆ ಸ್ವಾಗತಿಸಲಾಗುವುದು . ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ . ಶೀಘ್ರ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು . ರಾಜ್ಯದಲ್ಲಿ ಈ ಬಾರಿ ಅತಿವೃಷ್ಟಿಯೊಂದಿಗೂ ಬರಗಾಲವೂ ಇತ್ತು . 39 ತಾಲೂಕುಗಳಲ್ಲಿ ಬರಗಾಲವಿದ್ದರೆ , 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹ ಇತ್ತು . ಕಂದಾಯ ಸಚಿವ ಆರ್ . ಆಶೋಕ್ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ . ಅತಿವೃಷ್ಟಿ , ಬರದ ಸಮಸ್ಯೆ ನೀಗಿಸಲು ಕೇಂದ್ರ ಸರಕಾರ 60 ದಿನಗಳ ಬಳಿಕ ಪರಿಹಾರ ಧನ ಬಿಡುಗಡೆ ಮಾಡಿದ್ದು , ಈ ಪರಿಹಾರಧನ ಎಲ್ಲಿಗೂ ಸಾಲುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ . ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಅತಿವೃಷ್ಟಿಯಾದಾಗ ಒಮ್ಮೆಯೂ ಭೇಟಿ ನೀಡಿ , ಜನರ ಬಗ್ಗೆ ಸಿಂಪತಿ ತೋರಲಿಲ್ಲ . ಅತಿವೃಷ್ಟಿ ವೇಳೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಪರ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದರು . ರಾಜ್ಯದಲ್ಲಿ ಪ್ರವಾಹದಿಂದ 2 ಕೋಟಿಯಷ್ಟು ಜನರು ಸಂತ್ರಸ್ತರಾಗಿದ್ದಾರೆ . 90 ಮಂದಿ ಸಾವನ್ನಪ್ಪಿದ್ದಾರೆ . 5 ಮಂದಿ ನಾಪತ್ತೆಯಾಗಿದ್ದು , ಒಂದು ಲಕ್ಷ ಕೋಟಿ ನಷ್ಟ 


ಸಂಭವಿಸಿದೆ . ಕೇಂದ್ರ ಸರಕಾರ ನೀಡಿರುವ ಪರಿಹಾರ ಧನ ಸಾಲುವುದಿಲ್ಲ ಎಂದ ಸಿದ್ದರಾಮಯ್ಯ , ಪ್ರಧಾನಿ ಮೋದಿ 56 ಇಂಚಿನ ಎದೆ ಇದ್ದರೆ ಸಾಲದು , ಬಡವರು , ಕಾರ್ಮಿಕರು , ನೊಂದವರಿಗೆ ನೆರವಾಗುವ ಮಾತೃ ಹೃದಯವೂ ಇರಬೇಕು

, ಸಚಿವ ಸಿಟಿ ರವಿ ಹಾಗೂ ಮೂಡಿಗೆರೆ ಶಾಸಕ ಕುಮಾರಸ್ವಾಮಿ ರೈತರ ಮನೆಗೆ ಭೇಟಿ ನೀಡಿಲ್ಲ . ಈ ಸಂಬಂಧ ಸಿಟಿ ರವಿ | ಅವರನ್ನು ಕೇಳಿದರೆ , ಸರಕಾರದ ಚೆಕ್‌ನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಹೋಗುತ್ತೇನೆಂದು ಬಾಲಿಶವಾಗಿ ಮಾತನಾಡುತ್ತಾರೆಂದು ಸಿದ್ದರಾಮಯ್ಯ ಕಿಡಿಕಾರಿದರು . ನನ್ನ ಅಧಿಕಾರವಧಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರಿಗೆ 5 ಲಕ್ಷ ರೂ . ಪರಿಹಾರಧನ , ಅವರ ಕುಟುಂಬಕ್ಕೆ 2 ಸಾವಿರ ರೂ . ಮಾಶಾಸನ , ಮಕ್ಕಳಿಗೆ ಆರೋಗ್ಯ ಸೇವಾ ಯೋಜನೆಗಳನ್ನು ಜಾರಿ ಮಾಡಿದ್ದೆ . ಆದರೆ ಬಿಜೆಪಿ ಸರಕಾರ ಇದನ್ನು ಜಾರಿ ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು , ಅತಿವೃಷ್ಟಿಯಿಂದ ರಾಜ್ಯದಲ್ಲಿ ಬಾರೀ ನಷ್ಟ ಸಂಭವಿಸಿದೆ . 7 , 31 , 000 ಶಾಲಾ ಪುಸಕ್ತಗಳು ಹಾಳಾಗಿವೆ . 60 ದಿನಗಳ ಕಾಲ ಶಾಲೆಗಳು ಮುಚ್ಚಿವೆ . 12 ಸಾವಿರ ಶಾಲೆಗಳಿಗೆ ಹಾನಿಯಾಗಿದೆ . ಜನರ ಕಷ್ಟ ಅಧಿವೇಶನಗಳಲ್ಲಿ ಚರ್ಚಿಸದೇ ಇನ್ನೆಲ್ಲಿ ಹೇಳಬೇಕು . ಅತಿವೃಷ್ಟಿ ಬಗ್ಗೆ ಚರ್ಚೆ ನಡೆಸಲು ಉತ್ತರ ಕರ್ನಾಟಕದಲ್ಲಿ ಅಧಿವೇಶನ ಕರೆಯಿರಿ ಎಂದು ಸರಕಾರವನ್ನು ಕೇಳಿದ್ದೆ . ಆದರೆ ಬಿಜೆಪಿ ಗಿರಾಕಿಗಳು ಸರಕಾರದ ಬಂಡವಾಳ ಬಯಲಾಗುವ ಭೀತಿಯಿಂದ ಅಲ್ಲಿ ಅಧಿವೇಶನ ಕರೆಯಲೂ ಒಪ್ಪಲಿಲ್ಲ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು . ವಿಧಾನಸಭೆ ಸ್ಪೀಕರ್ ಆರೆಸ್ಸೆಸ್‌ನವರು , ಅವರು ಕೇಶವಕೃಪದ ಆದೇಶವನ್ನು ಮಾತ್ರ ಪಾಲಿಸುತ್ತಾರೆ . ಸರಕಾರ ಹೇಳಿದ್ದಕ್ಕೆ ತಲೆಯಾಡಿಸುತ್ತಿದ್ದಾರೆ . ವಿಧಾನಸಭೆಯ ಗೌರವ ಘನತೆಗಳನ್ನು ಸ್ಪೀಕರ್ ಎತ್ತಿಹಿಡಿಯುತ್ತಿಲ್ಲ . ಇದು ಮುಂದುವರಿದಲ್ಲಿ ಕಠಿಣ ಕ್ರಮಕೈಗೊಳ್ಳುತ್ತೇವೆ . ಇದಕ್ಕೂ ಬಗ್ಗದಿದ್ದಲ್ಲಿ ಜನತಾ ನ್ಯಾಯಾಲಕ್ಕೆ ಹೋಗುತ್ತೇವೆ ಎಂದು ಇದೇ ವೇಳೆ ಸಿದ್ದು ಹೇಳಿದರು .

Please follow and like us: