ನಮ್ಮನ್ನು ಬಿಟ್ಟೋಗಬೇಡಿ ಸರ್… ವರ್ಗಾವಣೆಯಾಗಿ ಹೋಗುತ್ತಿದ್ದ ಶಿಕ್ಷಕನನ್ನು ತಬ್ಬಿಕೊಂಡು ಅತ್ತ ಮಕ್ಕಳು

ಮಕ್ಕಳ ಗುರುವಿನ ಬಾಂಧವ್ಯದ ದೃಶ್ಯ ವೈರಲ್

ಹಾವೇರಿ : ಬಿಟ್ಟೊಗಬೇಡಿ ನಮ್ಮನ್ನು ಬಿಟ್ಟೊಗಬೇಡಿ ಎಂದು ಮಕ್ಕಳು ಶಾಲೆಯ ಶಿಕ್ಷಕ ವರ್ಗಾವಣೆ ಆಗಿದ್ದಕ್ಕೆ ಕೈ ಕಾಲು ಹಿಡಿದು ಕಣ್ಣೀರು ಹಾಕಿದ್ದಾರೆ. ಹಾವೇರಿ ಜಿಲ್ಲೆಯ ಕಲ್ಲಿಹಾಳ ಗ್ರಾಮದಲ್ಲಿ ಇಂತಹದೊಂದು ಮನಕಲುಕುವ ಘಟನೆ ನಡೆದಿದೆ.

ಕಲ್ಲಿಹಾಳದ  ಸರ್ಕಾರಿ ಶಾಲೆಯ ಎಸ್ ಸಿ ಕಲ್ಮನಿ ಎಂಬ ಇಂಗ್ಲಿಷ್ ಶಿಕ್ಷಕರು ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದರು.  ಈಗ ಅವರಿಗೆ ಕಲ್ಲಿಹಾಳದಿಂದ ಕಬ್ಬೂರು ಶಾಲೆಗೆ ವರ್ಗಾವಣೆಯಾಗಿದೆ.   ಗುರುವಿನ  ವರ್ಗಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಮಕ್ಕಳು . ಶಿಕ್ಷಕ ವರ್ಗಾವಣೆಯಾಗಿರುವ  ಸುದ್ದಿ ಕೇಳಿ ದಿಡೀರನೆ ಬಂದು ತಬ್ಬಿಕೊಂಡು ಅತ್ತಿದ್ದಾರೆ. ಎಲ್ಲಿ ಹೋಗ್ತಿರೊ ಹೋಗ್ರಿ ಎಂದು ಕೈ ಕಾಲು ಹಿಡಿದುಕೊಂಡು ಅಳುತ್ತಿರುವ ಮಕ್ಕಳ ಈ ದೃಶ್ಯ ಕಂಡು ಶಿಕ್ಷಕ ಮತ್ತು ಶಾಲಾ ಸಿಬ್ಬಂದಿಯೂ ಅತ್ತಿದ್ದಾರೆ. ಮಕ್ಕಳ ಗುರುವಿನ ಬಾಂಧವ್ಯದ ದೃಶ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

Please follow and like us:
error