ಶಿವಪುರ, ಗುಳದಳ್ಳಿ ಗ್ರಾಮಕ್ಕೆ ಜಿಪಂ ಸಿಇಓ ಭೇಟಿ: ಪರಿಶೀಲನೆ

Get real time updates directly on you device, subscribe now.

ಕೊಪ್ಪಳ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಜೂನ್ 10ರಂದು ಕೊಪ್ಪಳ ತಾಲೂಕಿನ ಗುಳದಳ್ಳಿ ಹಾಗು ಶಿವಪುರ ಗ್ರಾಮಗಳಿಗೆ ಭೇಟಿ ನೀಡಿ ವಾಂತಿ ಬೇಧಿ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಇದೆ ವೇಳೆ ಗ್ರಾಮಗಳಲ್ಲಿ ಸಂಚರಿಸಿ ಮನೆಮನೆಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಈ ವೇಳೆ ಮಾತನಾಡಿದ ಸಿಇಓ ಅವರು, ವಾಂತಿ ಬೇಧಿ ಪ್ರಕರಣಗಳ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು. ಆರೋಗ್ಯ ಇಲಾಖೆಯವರು ಗ್ರಾಮಗಳಲ್ಲಿ 24*7 ಹಾಜರಿದ್ದು ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗ್ರಾಮಸ್ಥರು ಪ್ರತಿಯೊಬ್ಬರು ಕಾಯಿಸಿ ಆರಿಸಿ ನೀರು ಕುಡಿಯಲು ಮತ್ತು ಅನಾರೋಗ್ಯ ಕಾಣಿಸಿದ ಕೂಡಲೇ ಚಿಕಿತ್ಸೆಗೆ ತಕ್ಷಣ ದಾಖಲಾಗುವ ಬಗ್ಗೆ ಗ್ರಾಮಸ್ಥರಲ್ಲಿ ಸ್ವಚ್ಚತಾ ವಾಹಿನಿಗಳ ಮೂಲಕ ಆರೋಗ್ಯ ಜಾಗೃತಿ ಮೂಡಿಸಲು ಕ್ರಮ ವಹಿಸಬೇಕು. ಕುಡಿಯುವ ನೀರು ಸರಬರಾಜು ಆಗುವ ಪೈಪಲೈನ್‌ಗಳಲ್ಲಿ ಚರಂಡಿ ಇಲ್ಲವೇ ಕಲುಷಿತ ನೀರು ಸೇರದ ಹಾಗೆ ನೋಡಿಕೊಳ್ಳಬೇಕು. ಗ್ರಾಮದ ಎಲ್ಲಾ ಕಡೆಗಳಲ್ಲಿನ ಚರಂಡಿಗಳನ್ನು ಕೂಡಲೇ ಸ್ವಚ್ಛಗೊಳಿಸಬೇಕು. ಎಲ್ಲಾ ಓವರ್ ಹೆಡ್ ಟ್ಯಾಂಕ್‌ಗಳನ್ನು ಸಹ ಶುಚಿಗೊಳಿಸಲು ಒತ್ತು ಕೊಡಬೇಕು. ಗ್ರಾಮ ಪಂಚಾಯಿತಿಯಿಂದ ಶುದ್ದ ಕುಡಿಯುವ ನೀರಿನ ಘಟಕದ ಮೂಲಕ ಮನೆಮನೆಗೆ ಕುಡಿಯುವ ನೀರು ಸರಬರಾಜು ಮಾಡುವಂತೆ ಶಿವಪುರ ಗ್ರಾಪಂ ಪಿಡಿಒ ಶ್ರೀನಿವಾಸ ಅವರಿಗೆ ಸಿಇಓ ಅವರು ಸೂಚನೆ ನೀಡಿದರು.
ಶಿವಪುರ ಗ್ರಾಮದಲ್ಲಿ ಕಂಡು ಬಂದ 17 ವಾಂತಿ ಬೇಧಿ ಪ್ರಕರಣಗಳಲ್ಲಿ 15 ಜನರು ಈಗಾಗಲೇ ಗುಣಮುಖರಾಗಿದ್ದು ಇಬ್ಬರನ್ನು ಹುಬ್ಬಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿರುವ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿಯು ಸಿಇಓ ಅವರಿಗೆ ಮಾಹಿತಿ ಒದಗಿಸಿದರು.
*ಸಿಇಓ ಮೆಚ್ಚುಗೆ*: ಬಳಿಕ ಸಿಇಓ ಅವರು ಗುಳದಳ್ಳಿ ಗ್ರಾಮಕ್ಕೆ ಸಹ ಭೇಟಿ ನೀಡಿದರು. ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಸಿಇಓ ಅವರು ಖುದ್ದು ಪರಿಶೀಲಿಸಿದರು. ಗುಳದಳ್ಳಿ ಗ್ರಾಮದಲ್ಲಿ ವರದಿಯಾದ 24 ಪ್ರಕರಣಗಳಲ್ಲಿ 24 ಜನರು ಸಹ ಗುಣಮುಖರಾಗಿದ್ದಕ್ಕೆ ಗ್ರಾಪಂ ಮತ್ತು ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಸಿಇಓ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಟಿ.ಕೃಷ್ಣಮೂರ್ತಿ, ಕೊಪ್ಪಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ತಾಲೂಕು ಆರೋಗ್ಯಾಧಿಕಾರಿ ರಾಮಾಂಜನೇಯ, ಶಿವಪುರ ಗ್ರಾಪಂ ಅಧ್ಯಕ್ಷೆ ಲಲಿತಾ, ಪಿಡಿಓ ಶ್ರೀನಿವಾಸ ಪತ್ತಾರ, ಗುಳದಳ್ಳಿ ಪಿಡಿಓ ಶಿವಬಸಪ್ಪ ಹಂಚಿನಾಳ, ಗುಳದಳ್ಳಿ ಗ್ರಾಪಂ ಅಧ್ಯಕ್ಷರಾದ ಗಂಗಮ್ಮ ಬೇವಿನಗಿಡದ, ಗ್ರಾಪಂ ಸದಸ್ಯರಾದ ಯಮನೂರಪ್ಪ, ಮೈಲಾರಪ್ಪ ಹಾಗೂ ಗ್ರಾಮಸ್ಥರು, ವೈದ್ಯಾಧಿಕಾರಿಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: