ಕೃಷಿ ಅಭಿಯಾನದಲ್ಲಿ ರೈತರಿಗೆ ಸಮಗ್ರ ಕೃಷಿ ಸೌಲಭ್ಯ, ತಾಂತ್ರಿಕ ಮಾಹಿತಿ ನೀಡಲು ಸೂಚನೆ

ಕೊಪ್ಪಳ ಮೇ. 

: ಸರ್ಕಾರ ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಮೂಲಕ ಹಲವಾರು ರೈತರಿಗೆ ಹಲವಾರು ಸೌಲಭ್ಯ ಹಾಗೂ ಯೋಜನೆಗಳನ್ನು ಕಲ್ಪಿಸಿದ್ದು ಇವುಗಳ ಸಮಗ್ರವಾಗಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೂಚನೆ ನೀಡಿದರು. ಅವರು 2019-20 ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವ ಸಿದ್ದತೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರದಂದು (ಮೇ.15) ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಗಾರು ಹಂಗಾಮು ಆರಂಭವಾಗುವುದರಿಂದ ಫಸಲ್ ಬಿಮಾ ಯೋಜನೆಯಡಿ ಅಧಿಸೂಚಿತ ಬೆಳೆಗಳಿಗೆ ವಿಮಾ ಕಂತು ಪಾವತಿಸಿ ಅತೀವೃಷ್ಟಿ, ಅನಾವೃಷ್ಟಿ ಸಂಭವಿಸಿದಾಗ ಪರಿಹಾರ ಪಡೆಯಲು ಸಹಕಾರಿಯಾಗಲಿದ್ದು ಈ ಬಗ್ಗೆ ಕೃಷಿ ಇಲಾಖೆಯಿಂದ ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಫಸಲ್ ಬಿಮಾ ಯೋಜನೆಯ ಅಧಿಸೂಚಿತ ಬೆಳೆಗಳ ಮಾಹಿತಿ ನೀಡಬೇಕು. ಅಧಿಸೂಚಿತ ಬೆಳೆಗಳು ಮತ್ತು ಘಟಕಗಳ ಬಗ್ಗೆ ಬ್ಯಾಂಕುಗಳು, ರೈತ ಸಂಪರ್ಕ ಕೇಂದ್ರಗಳ ಮತ್ತು ಗ್ರಾಮಪಂಚಾಯಿತಿ ಕಛೇರಿಗಳ ಸೂಚನಾ ಫಲಕಗಳ ಮೇಲೆ ಪ್ರಕಟಿಸಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಪ್ರಚಾರ ಕಾರ್ಯ ಕೈಗೊಂಡು ರೈತರಿಗೆ ತಿಳುವಳಿಕೆ ನೀಡುವುದು ಮತ್ತು ಯೋಜನೆಯ ಬಗ್ಗೆ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ, ಗ್ರಾಮ ಸಭೆಗಳಲ್ಲಿ ಹಾಗೂ ಜನಸ್ಪಂದನ ಸಭೆಗಳಲ್ಲಿ ರೈತರಿಗೆ ಮಾಹಿತಿ ನೀಡಬೇಕು. ಇಲಾಖೆಯ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮತ್ತು ಜಂಟಿ ಕೃಷಿ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡುವ ರೈತರಿಗೆ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ. ಯೋಜನೆಯ ಅನುಷ್ಠಾನಕ್ಕೆ ತೋಟಗಾರಿಕೆ, ಕಂದಾಯ, ಜಿಲ್ಲಾ ಸಾಂಖ್ಯಿಕ ಇಲಾಖೆ ಮತ್ತು ಬ್ಯಾಂಕ್ ಸಿಬ್ಬಂದಿಗಳಿಗೆ ಯೋಜನೆಯ ಮಾರ್ಗ ಸೂಚಿಗಳನ್ನು ಒದಗಿಸಬೇಕು. ಬೆಳೆ ಬಿತ್ತನೆ ಕ್ಷೆÃತ್ರವನ್ನು ಕಂದಾಯ ಮತ್ತು ಸಂಖ್ಯಿಕಾ ಇಲಾಖೆಯ ಸಮನ್ವಯದೊಂದಿಗೆ ಒದಗಿಸುವುದು ಹಾಗೂ ಕಂದಾಯ, ಸಾಂಖ್ಯಿಕ ಇಲಾಖೆ ಮತ್ತು ಇತರ ಇಲಾಖೆಗಳೊಂದಿಗೆ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಬೇಕು. ಬೆಳೆ ಕಟಾವು ಬಗ್ಗೆ ವಿಮಾ ಕಂಪನಿಗಳಿಗೆ ಸರಿಯಾದ ವರದಿ ನೀಡದಿರುವುದರಿಂದ ಮತ್ತು ಈ ಬಗ್ಗೆ ಪರಿಶೀಲನೆ ನಡೆಸದಿರುವುದರಿಂದ 2016-17 ನೇ ಸಾಲಿನ ಬೆಳೆ ವಿಮಾ ಪರಿಹಾರ ರೈತರಿಗೆ ಇನ್ನೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ವಿಮಾ ಕಂಪನಿಗಳು ಸರಿಯಾಗಿ ಕೆಲಸ ಮಾಡಬೇಕು. ಅಧಿಕಾರಿಗಳು ಮತ್ತು ವಿಮಾ ಕಂಪನಿಗಳು ಸಕಾಲದಲ್ಲಿ ಕ್ರಮ ಕೈಗೊಳ್ಳದಿರುವುದಕ್ಕೆ ರೈತರು ಕಾರಣರಾಗುವುದಿಲ್ಲ. ಬೆಳೆ ವಿಮೆ ಪಾವತಿಸಿದ ರೈತರಿಗೆ ಸಕಾಲದಲ್ಲಿ ಪರಿಹಾರ ಸಿಗುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು. ಕಂದಾಯ ಇಲಾಖೆಯು ರೈತರಿಗೆ ಬಿತ್ತನೆ ದೃಢಿಕರಣ ಪತ್ರ ನೀಡುವುದು ಹಾಗೂ ಬಿತ್ತನೆ ಕ್ಷೆÃತ್ರವನ್ನು ಪಹಣಿಯಲ್ಲಿ ದಾಖಲಿಸಬೇಕು. ಹಂಚಿಕೆಗೊಂಡ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಬೇಕು. ಸಹಕಾರ ಇಲಾಖೆ ಹಾಗೂ ಹಣಕಾಸು ಸಂಸ್ಥೆಯಿಂದ ಸಾಲಗಾರ ರೈತರ ಸಾಲದ ಜೊತೆಗೆ ವಿಮಾಕಂತನ್ನು ಸಹ ಮಂಜೂರು ಮಾಡಿ ಕಡ್ಡಾಯವಾಗಿ ನೊಂದಾಯಿಸಬೇಕು. ಬೆಳೆ ಸಾಲ ಪಡೆಯದ ರೈತರನ್ನು ನಿಗದಿತ ದಿನಾಂಕದೊಳಗೆ ನೊಂದಾಯಿಸಬೇಕು. ಕ್ರೊÃಢೀಕೃತ ಪ್ರಸ್ತಾವನೆಯನ್ನು ನೋಡಲ್ ಬ್ಯಾಂಕುಗಳ ಮೂಲಕ ನಿಗದಿತ ಸಮಯದೊಳಗೆ ವಿಮಾ ಸಂಸ್ಥೆಗೆ ಕಳುಹಿಸುವುದು ಮತ್ತು ವಿಮಾ ಸಂಸ್ಥೆಯಿಂದ ಪಡೆದ ಬೆಳೆ ವಿಮಾ ನಷ್ಟ ಪರಿಹಾರವನ್ನು 7 ದಿನದೊಳಗೆ ರೈತರ ಖಾತೆಗೆ ಜಮಾ ಮಾಡುವುದು. ಫಲಾನುಭವಿಗಳ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸುವುದು ಹಾಗೂ ಬ್ಯಾಂಕುಗಳು ಮಾಡುವ ತಪ್ಪು, ಲೋಪದೋಷಗಳಿಗೆ ಅವರೇ ಹೊಣೆಗಾರರಾಗಿರುತ್ತಾರೆ. ಸಾಮಾನ್ಯ ಸೇವಾ ಕೇಂದ್ರಗಳಾದ ಎಸ್.ಪಿ.ವಿ (ಸ್ಪೆಶಿಯಲ್ ಪರ್ಪೊಸ್ ವೈಕಲ್) & ವಿ.ಎಲ್.ಇ. (ವಿಲೆಜ್ ಎಂಟ್ರೆಪ್ರೆನಿಯರ್)ಗಳ ಮೂಲಕ ಬೆಳೆ ಸಾಲ ಪಡೆದ ರೈತರನ್ನು ನೊಂದಾಯಿಸುವುದು. ರೈತರ ನೊಂದಣಿಯ ವಿಮಾ ಕಂತನ್ನು ಸ್ವಿÃಕರಿಸಿದ ಮೂರು ದಿನಗಳ ಒಳಗಾಗಿ ಅಗ್ರಿÃಕಲ್ಚರ ಇನ್ಸೂರೆನ್ಸ ಕಂಪನಿ ಇಂಡಿಯಾ ಲಿಮಿಟೆಡ್‌ಗೆ ಪಾವತಿಸಬೇಕು. ಅನುಷ್ಠಾನ ಸಂಸ್ಥೆ ನೀಡಿದ ಬೆಳೆ ವಿಮೆಯ ಪ್ರಚಾರಕ್ಕೆ ಸಂಬಧಿಸಿದ ಪೋಸ್ರ‍್ಸ್, ಬ್ಯಾನರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿ. ರೈತರಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಸಂರಕ್ಷಣೆ ಪೋರ್ಟಲ್‌ನಲ್ಲಿ ಬೆಳೆ ವಿಮೆ ನೊಂದಾಯಿಸಲು ಸೂಚನೆ ನೀಡಿದರು. ಅನುಷ್ಠಾನ ಸಂಸ್ಥೆಯು ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ., ಕೊಪ್ಪಳ ಜಿಲ್ಲೆಗೆ ಆಯ್ಕೆಯಾಗಿರುತ್ತದೆ. ಕೃಷಿ ಇಲಾಖೆಯಿಂದ ಇಳುವರಿ ಮಾಹಿತಿ ಪಡೆದು ಬೆಳೆವಿಮಾ ನಷ್ಟ ಪರಿಹಾರವನ್ನು ಲೆಕ್ಕ ಹಾಕುವುದು ಹಾಗೂ ಅಂತಿಮಗೊಳಿಸುವುದು. ತರಬೇತಿ, ಪ್ರಕಟಣೆ ಮತ್ತು ತಿಳುವಳಿಕೆ ಮೂಡಿಸುವ ಕಾರ್ಯಕ್ರಮದ ವ್ಯವಸ್ಥೆ ಮಾಡುವುದರಲ್ಲಿ ಸಮನ್ವಯ ನೀಡುವುದು. ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟಗಳಲ್ಲಿ ಯೋಜನೆಯನ್ನು ಉತ್ತಮವಾಗಿ ಅನುಷ್ಠಾನಗೊಳಿಸಲು ಮತ್ತು ರೈತರ ಬೆಳೆ ವಿಮೆ ಸಮಸ್ಯೆಗಳನ್ನು ಬಗೆಹರಿಸಲು ಕೃಷಿ ಪದವೀಧರರನ್ನು ನೇಮಿಸುವುದು. ಬೆಳೆ ಕಟಾವು ಪ್ರಯೋಗಗಳಲ್ಲಿ ಸಕ್ರಿಯಾವಾಗಿ ಭಾಗವಹಿಸಬೇಕೆಂದು ಅಧಿಕಾರಿಗಳಿಗಳಿಗೆ ಸೂಚನೆ ನೀಡಿದರು. ಕೊಪ್ಪಳ ಜಂಟಿ ಕೃಷಿ ನಿರ್ದೇಶಕಿ ಶಬಾನ ಎಂ. ಶೇಖ್‌ರವರು ಮಾತನಾಡಿ, ಜಿಲ್ಲೆಯಲ್ಲಿ ಭೌಗೋಳಿಕ ವಿಸ್ತಿÃರ್ಣ 552495 ಹೆಕ್ಟರ್, ಸಾಗುವಳಿಗೆ ಲಭ್ಯವಿರುವ ಭೂಮಿ 433447 ಹೆಕ್ಟರ್, ಕೃಷಿ ಬೆಳೆ ಸಾಗುವಳಿ ಕ್ಷೆÃತ್ರ 390241 ಹೆಕ್ಟರ್, ತೋಟಗಾರಿಕೆ ಬೆಳೆ ಸಾಗುವಳಿ ಕ್ಷೆÃತ್ರ 39850 ಹೆಕ್ಟರ್, ರೇಷ್ಮೆ ಬೆಳೆ ಸಾಗುವಳಿ ಕ್ಷೆÃತ್ರ 3356 ಹೆಕ್ಟರ್, ಮುಂಗಾರು ಕೃಷಿ ಬೆಳೆ ಕ್ಷೆÃತ್ರ 252500 ಹೆಕ್ಟರ್, ಹಿಂಗಾರು ಕೃಷಿ ಬೆಳೆ ಕ್ಷೆÃತ್ರ 155200 ಹೆಕ್ಟರ್, ಬೇಸಿಗೆ ಕೃಷಿ ಬೆಳೆ ಕ್ಷೆÃತ್ರ 71900 ಹೆಕ್ಟರ್, ನೀರಾವರಿ ಕ್ಷೆÃತ್ರ 78083 ಹೆಕ್ಟರ್, ಖುಷ್ಕಿ ಕ್ಷೆÃತ್ರ 312158 ಹೆಕ್ಟರ್, ಒಂದಕ್ಕಿಂತ ಹೆಚ್ಚುಬಾರಿ ಬಿತ್ತನೆ ಆಗುವ ಕ್ಷೆÃತ್ರ 89359 ಹೆಕ್ಟರ್, ಒಟ್ಟು ಹಿಡುವಳಿದಾರರು (ಸಂಖ್ಯೆ) 218102, ಸಣ್ಣ ಹಿಡುವಳಿದಾರರು (ಸಂಖ್ಯೆ) 75113, ಅತಿಸಣ್ಣ ಹಿಡುವಳಿದಾರರು (ಸಂಖ್ಯೆ) 66901, ದೊಡ್ಡ ಹಿಡುವಳಿದಾರರು (ಸಂಖ್ಯೆ) 76088, ವಾರ್ಷಿಕ ವಾಡಿಕೆ ಮಳೆ 599.80, ಮಳೆ ಮಾಪನ ಕೇಂದ್ರಗಳು 144 ಇವೆ. 2018 ನೇ ಪೂರ್ವ ಮುಂಗಾರು ಮಳೆ ಪರಿಸ್ಥಿತಿ ಅವಲೋಕಿಸಲಾಗಿ ಒಟ್ಟಾರೆ ಜಿಲ್ಲೆಯ ವಾಸ್ತವಿಕ ಮಳೆ 600 ಮೀ.ಮೀ. ಇದ್ದು, ವಾಸ್ತವಿಕ 398 ಮೀ.ಮೀ. -34% ಮಳೆ ಕೊರತೆ ಇರುತ್ತದೆ. ಫಸಲ ಬೀಮಾ ಯೋಜನೆ; 2019-20 ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬೀಮಾ ಯೋಜನೆಯನ್ನು ಮುಂಗಾರು ಹಂಗಾಮಿನಲ್ಲಿ ಅನುಷ್ಟಾನಗೊಳಿಸಲಾಗುತ್ತಿದ್ದು, ವಿವರಗಳು ಇಂತಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಿಸೂಚಿತ ಬೆಳೆಗಳಾದ ಗಂಗಾವತಿ ಭತ್ತ (ನೀರಾವರಿ), ಕೊಪ್ಪಳ ಮತ್ತು ಕುಷ್ಟಗಿ ಮುಸಕಿನಜೋಳ (ಮಳೆಯಾಶ್ರಿತ), ಸಜ್ಜೆ ( ಮಳೆಯಾಶ್ರಿತ), ಯಲಬುರ್ಗಾ ಹೆಸರು, ಮುಸುಕಿನಜೋಳ (ಮಳೆಯಾಶ್ರಿತ), ಹೋಬಳಿ ಮಟ್ಟದಲ್ಲಿ ಅಧಿಸೂಚಿತ ಬೆಳೆಗಳಾದ ಭತ್ತ (ಮಳೆಯಾಶ್ರಿತ/ನೀರಾವರಿ), ಜೋಳ (ಮಳೆಯಾಶ್ರಿತ/ನೀರಾವರಿ), ಮುಸಕಿನ ಜೋಳ (ಮಳೆಯಾಶ್ರಿತ / ನೀರಾವರಿ), ಸಜ್ಜೆ (ಮಳೆಯಾಶ್ರಿತ / ನೀರಾವರಿ), ಸೂರ್ಯಕಾಂತಿ (ಮಳೆಯಾಶ್ರಿತ/ ನೀರಾವರಿ), ಅಲಸಂದಿ (ಮಳೆಯಾಶ್ರಿತ), ನವಣೆ (ಮಳೆಯಾಶ್ರ‍್ರಿತ), ತೊಗರಿ (ಮಳೆಯಾಶ್ರಿತ/ನೀರಾವರಿ), ಹೆಸರು (ಮಳೆಯಾಶ್ರಿತ), ಹುರಳಿ (ಮಳೆಯಾಶ್ರಿತ), ಎಳ್ಳು (ಮಳೆಯಾಶ್ರಿತ), ನಲೆಗಡಲೆ (ಶೇಂಗಾ) (ಮಳೆಯಾಶ್ರಿತ/ನೀರಾವರಿ), ಹತ್ತಿ (ಮಳೆಯಾಶ್ರಿತ/ನೀರಾವರಿ), ಈರುಳ್ಳಿ (ನೀರಾವರಿ/ ಮಳೆಯಾಶ್ರಿತ), ಟಮೋಟೊ. ಹತ್ತಿ (ನೀರಾವರಿ) ಮತ್ತು ಹೆಸರು (ಮಳೆಯಾಶ್ರಿತ) ಬೆಳೆಗಳಿಗೆ ನೊಂದಾಯಿಸಲು ಕೊನೆಯ ದಿನಾಂಕ: 16-07-2019 ಹಾಗೂ ಇತರೆ ಅದಿಸೂಚಿತ ಬೆಳೆಗಳಿಗೆ ನೊಂದಾಯಿಸಲು ಕೊನೆಯ ದಿನಾಂಕ: 31-07-2019 ಆಗಿರುತ್ತದೆ. ಪಾಲು ಬೆಳೆಗಾರರು ಹಾಗೂ ಗೇಣಿದಾರರು ಸೇರಿದಂತೆ ಎಲ್ಲಾ ರೈತರು ಭಾಗವಹಿಸಬಹುದಾಗಿದೆ. ಬೆಳೆ ಸಾಲ ಪಡೆಯುವ ರೈತರಿಗೆ ಯೋಜನೆ ಕಡ್ಡಾಯ. ಬೆಳೆ ಸಾಲ ಪಡೆಯದ ರೈತರಿಗೆ ಯೋಜನೆ ಐಚ್ಚಿಕ. ಆಹಾರ ಬೆಳೆಗಳು, ಎಣ್ಣೆಕಾಳು ಬೆಳೆಗಳು, ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆವಿಮೆಯೋಜನೆಯಲ್ಲಿ ಅಳವಡಿಸಲಾಗಿದೆ. ವಿಮಾ ಕಂತಿನ ದರಗಳಲ್ಲಿ ಸಾಮಾನ್ಯ ವಿಮೆಗೆ ವಿಮ ಕಂತಿನ ದರಗಳು ಇಂತಿವೆ. ಇತರೆ ಬೆಳೆಗಳಿಗೆ ಮುಂಗಾರು 2%, ಹಿಂಗಾರು 1.5%, ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳಿಗೆ ಮುಂಗಾರು ಮತ್ತು ಹಿಂಗಾರಿನಲ್ಲಿ 5% ರಷ್ಟು. ಇರುತ್ತದೆ. ಕೃಷಿ ಅಭಿಯಾನ; “ಕೃಷಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ”ಎಂಬಂತೆ ಕೃಷಿ ಅಭಿಯಾನವನ್ನು ಅನುಷ್ಠಾನಗೊಳಿಸಲು ಸಮಿತಿ/ ಕಾರ್ಯತಂಡಗಳು ರಚಿಸಬೇಕಾಗಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ರಚನೆ. ತಾಲೂಕು ಸಹಾಯಕ ಕೃಷಿ ನಿರ್ದೆಶಕರ ಸಂಯೋಜಕತ್ವದಲ್ಲಿ ತಾಲೂಕ ಮಟ್ಟದ ಕಾರ್ಯತಂಡ. ಹೋಬಳಿ ಮಟ್ಟದ ಕೃಷಿ ಅಧಿಕಾರಿ ಸಂಯೋಜಕತ್ವದಲ್ಲಿ ಹೋಬಳಿ ಮಟ್ಟದ ಅನುಷ್ಟಾನ ಕಾರ್ಯತಂಡ ರಚನೆ. ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡಲು ಮತ್ತು ಹೆಚ್ಚತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸಲು ಲಭ್ಯವಿರುವ ಸಾಗುವಳಿ ಜಮೀನಿನಲ್ಲಿ ಗರಿಷ್ಠ ಉತ್ಪಾದನೆಯನ್ನು ಪಡೆಯುವುದು ಅವಶ್ಯಕವಾಗಿದೆ. ಇದಕ್ಕಾಗಿ ಕೃಷಿ ಮತ್ತು ತೋಟಗಾರಿಕೆಯೊಂದಿಗೆ ಪೂರಕ ಕಸಬುಗಳಾದ ಪಶು ಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆ ಮುಂತಾದ ಚಟುವಟಿಕೆಗಳನ್ನು ರೈತರು ಅಳವಡಿಸಿಕೊಳ್ಳುವವುದು ಅನಿವಾರ್ಯವಾಗಿದೆ. ಆದ್ದರಿಂದ ಕೃಷಿ ವಲಯದ ಪ್ರಸ್ತುತ ಪರಿಸ್ಥಿತಿಯನ್ನು ಮನಗಂಡು ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವಶ್ಯವಿರುವ ತಂತ್ರಜ್ಞಾನವನ್ನು ಅಳವಡಿಸಲು ಏಕಗವಾಕ್ಷಿ ವಿಸ್ತರಣಾ ಪದ್ದತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ತಲುಪಿಸಲು ವಿವಿಧ ಅಭಿವೃದ್ದಿ ಇಲಾಖೆಗಳ ಸಮನ್ವಯದೊಂದಿಗೆ ಏರ್ಪಡಿಸುವ ಸಮೂಹ ಜಾಗೃತಿ ಕಾರ್ಯಕ್ರಮವೇ “ಕೃಷಿ ಅಭಿಯಾನ”. ಕೃಷಿ ಮತ್ತು ಬೇಸಾಯ ಸಂಬಂಧಿಂತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದು. ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ. ವಿಜ್ಞಾನಿಗಳೊಂದಿಗೆ ರೈತರ ನೇರ ಸಂವಾದ ಒದಗಿಸುವುದು ಈ ಕೃಷಿ ಅಭಿಯಾನದ ಮುಖ್ಯ ಉದ್ದೆÃಶವಾಗಿದ್ದು ಮೇ ಅಂತ್ಯದಿಂದ ಜೂನ್ ಮೊದಲ ವಾರದಲ್ಲಿ ಸಮಗ್ರ ಮಾಹಿತಿಗಾಗಿ ಕೃಷಿ ಅಭಿಯಾನ ಏರ್ಪಡಿಸಲು ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು. ಕೃಷಿ ಅಭಿಯಾನದಲ್ಲಿ ಭಾಗವಹಿಸುವಿಕೆ; ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಪಾಲನೆ, ಸಹಕಾರ ಹಾಗೂ ಕಂದಾಯ ಇಲಾಖೆಗಳು, ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು, ಕೆ.ವಿ.ಕೆ ವಿಜ್ಞಾನಿಗಳು, ರೈತರು, ಆತ್ಮಗುಂಪುಗಳು, ಸಾವಯವ ಕೃಷಿ ಸಂಘಗಳು, ಸ್ವಸಹಾಯ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು ಆಯಾ ಕ್ಷೆÃತ್ರದ ಜನಪ್ರತಿನಿದಿಗಳು, ಸಾಲ ಸೌಲಭ್ಯ ನೀಡುವ ಸಂಸ್ಥೆಗಳು ಅಥವಾ ಬ್ಯಾಂಕ್ ಸಿಬ್ಬಂದಿ ರೈತ ಸಂಪರ್ಕ ಕೇಂದ್ರಗಳಿಗೆ ನಿಯೋಜನೆಗೊಂಡಿರುವ ವಿದ್ಯಾರ್ಥಿಗಳು. ಅಭಿಯಾನದಲ್ಲಿ ಅಳವಡಿಸಬೇಕಾದ ಅಂಶಗಳು; ಏಕದಳ ಧಾನ್ಯಗಳಿಗೆ ಕಂಠಕವಾಗಬಹುದಾದ ಹುಸಿ ಸೈನಿಕ ಹುಳು ನಿಯಂತ್ರಣಾ ಕ್ರಮಗಳು. ಕೃಷಿ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವುದು. ಬರಸಹಿಷ್ಣತೆಗಾಗಿ ಬೀಜ ಗಟ್ಟಿಗೊಳಿಸುವಿಕೆ ಕುರಿತು ರೈತರಿಗೆ ಮಾಹಿತಿ. ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ, ರೈತರ ಮನೋಸ್ಥೆöÊರ್ಯ ಹೆಚ್ಚಸುವ ಕಾರ್ಯಕ್ರಮ. ಸಿರಿಧಾನ್ಯಗಳ ಉಪಯುಕ್ತತೆ ಕುರಿತು ಬ್ಯಾನರಗಳನ್ನು ಕಡ್ಡಾಯವಾಗಿ ಅಳವಡಿಸವುದು. ಕೃಷಿ ಯಾಂತ್ರಿÃಕರಣ ಹಾಗೂ ಕಳೆನಾಶಕಗಳ ಬಗ್ಗೆ ಹೆಚ್ಚು ಪ್ರಚಾರ ಪಡಿಸುವುದು. ಬೆಳೆಗಳ ರೋಗ ಮತ್ತು ಕೀಟಗಳ ಸಮಗ್ರ ನಿರ್ವಹಣೆ. ಮಣ್ಣು ಆರೋಗ್ಯದ ಕುರಿತು ಮಾಹಿತಿ ನೀಡುವುದು ಹಾಗೂ ಬೆಳೆ ವಿಮೆ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ. ಕೃಷಿ ಅಭಿಯಾನ ಕಾರ್ಯಕ್ರಮ; ಕೃಷಿ ಅಭಿಯಾನ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗುವುದು. ಮೊದಲನೇ ಮತ್ತು ಎರಡನೇ ದಿನ ಪ್ರತಿ ಹೋಬಳಿಯಲ್ಲಿ ಗ್ರಾಮ ಪಂಚಾಯತಿವಾರು ಕಾರ್ಯತಂಡಗಳನ್ನು ರಚಿಸಿಕೊಂಡು ಆಯಾ ಪಂಚಾಯತಿಗೆ ಸಿದ್ದಪಡಿಸಿದ ವೇಳಾಪಟ್ಟಿಯಂತೆ ಎಲ್ಲಾ ಗ್ರಾಮ ಪಂಚಾಯತಿಗಳನ್ನು ಒಳಗೊಂಡಂತೆ ಸಂಚಾರಿ ಕೃಷಿ ಮಾಹಿತಿ ಘಟಕಗಳ ಮೂಲಕ ತೀವ್ರ ಪ್ರಚಾರ ಕಾರ್ಯಕ್ರಮ ಕೈಗೊಳ್ಳಲಾಗುವುದು. ಮೂರನೇ ದಿನ ಹೋಬಳಿ ಕೇಂದ್ರಸ್ಥಾನದಲ್ಲಿ ಕೃಷಿವಸ್ತು ಪ್ರದರ್ಶನ, ರೈತರ ಸಂವಾದದೊಂದಿಗೆ ಹೆಚ್ವಿನ ಸಂಖ್ಯೆಯಲ್ಲಿ ರೈತರ ಭಾಗವಹಿಸಲು ಅನುವಾಗುವಂತೆ ಕೃಷಿ ಅಭಿಯಾನ ಸಮಾರಂಭವನ್ನು ಏರ್ಪಡಿಸಲಾಗುವುದು. ಕೃಷಿ ವಸ್ತು ಪ್ರದರ್ಶನವನ್ನು ವಿವಿಧ ಕೃಷಿ ಪರಿಕರ ಸಂಸ್ಥೆಗಳು, ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ ವಿಶ್ವವಿದ್ಯಾನಿಲಯ, ಸಾಲ ಸೌಲಭ್ಯ ಒದಗಿಸುವ ಸಂಸ್ಥೆಗಳು ಹಾಗೂ ಇತರೆ ಇಲಾಖೆಗಳ ಸಹಯೋಗದೊಂದಿಗೆ ಏರ್ಪಡಿಸಲಾಗುವುದು. ಹಾಗೂ ರೈತ ಸಂವಾದ ಕಾರ್ಯಕ್ರಮದಲ್ಲಿ ರೈತರ ಆತ್ಮಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರೈತರ ಮನೋಸ್ಥೆöÊರ್ಯ ಹೆಚ್ಚಿಸುವಂತೆ ಕಾರ್ಯಕ್ರಮ ರೂಪಿಸಲಾಗುವುದು. ಈ ವಿಷಯದ ಬಗ್ಗೆ ರೈತರಿಗೆ ಮಾಹಿತಿ ನೀಡುವುದರ ಜೊತೆಗೆ ರೈತರ, ರೈತ ಮುಖಂಡರ, ಪ್ರಗತಿ ಪರ ರೈತರ ನಡುವೆ ಪರಸ್ಪರ ಚರ್ಚೆ ನಡೆಸಲಾಗುವುದು. ಹಾಲಿ ಇರುವ ಬೆಳೆವಿಮೆ ಬಗ್ಗೆ ರೈತರಲ್ಲಿ ಅರಿವು ಮೂಡಿಸುವುದು ಹಾಗೂ ನೊಂದಣಿಗೆ ಪ್ರೊÃತ್ಸಾಹಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿಮಾ ಕಂಪನಿಯರು ಉಪಸ್ಥಿತರಿದ್ದರು.

Please follow and like us: