ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಅವಕಾಶ ನೀಡಿ-ಹೈದ್ರಾಬಾದ ಕರ್ನಾಟಕ ಮುಸ್ಲಿಂ ಪಾಲಿಟಿಕಲ್‌ ಫೋರಂ

 

ಕೊಪ್ಪಳ : ಲೋಕಸಭಾ ಚುನಾವಣೆಯಲ್ಲಿ ಜಾತ್ಯಾತೀತ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಹೈದ್ರಾಬಾದ ಕರ್ನಾಟಕ ಮುಸ್ಲಿಂ ಪಾಲಿಟಿಕಲ್‌ ಫೋರಂ ಆಗ್ರಹಿಸಿದೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೋರಂನ ಪದಾಧಿಕಾರಿಗಳು

ನಮ್ಮ ದೇಶದಲ್ಲಿ ಮುಸ್ಲಿಂರನ್ನು ಕಳೆದ 70 ವರ್ಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯವಸ್ಥಿತವಾಗಿ ತುಳಿಯುತ್ತ ಬರಲಾಗಿದೆ . ಸರಕಾರದ ಹಲವಾರು ವರದಿಗಳು ವಿಶೇಷವಾಗಿ ನ್ಯಾ . ಸಾಚಾರ ಸಮಿತಿ ಹಾಗೂ ನ್ಯಾ . ರಂಗನಾಥ ಮಿಶ್ರಾ ಆಯೋಗದ ವರದಿಗಳು ಇತ್ತೀಚಿನ ಉದಾಹರಣೆಗಳು . ಈ ವರದಿಗಳ ಪ್ರಕಾರ ಮುಸ್ಲಿಂರು ಕೇವಲ ಆರ್ಥಿಕ , ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪಟ್ಟಿಯಲ್ಲಿವೆಯಲ್ಲದೇ ರಾಜಕೀಯ ಸ್ಥಾನಮಾನಗಳಲ್ಲಿ ಕೂಡ ದೂರ ತಳ್ಳಲ್ಪಟ್ಟಿವೆ . ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸಮುದಾಯದ ಬೆಳವಣಿಗೆ , ಅಭಿವೃದ್ಧಿ ಆ ಸಮುದಾಯದ ರಾಜಕೀಯ ಪ್ರಾತಿನಿಧ್ಯ ನಿರ್ಧರಿಸುತ್ತದೆ ಎಂದು ಹೇಳಲಾಗಿದೆ . ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 70ರ ದಶಕದಲ್ಲಿ ಸುಮಾರು 50 ಜನ ಲೋಕಸಭಾ ಸದಸ್ಯರು ಮುಸ್ಲಿಂ ಸಮುದಾಯದಿಂದ ಆಯ್ಕೆಯಾಗಿದ್ದರೂ , 90ರ ದರದಲ್ಲಿ ಈ ಸಂಖ್ಯೆ 40 ದಾಟಲಿಲ್ಲ . 2014ರ ಲೋಕಸಭಾ ಚುನಾವಣೆಯಲ್ಲಿ ಈ ಸಂಖ್ಯೆಯೂ ಕೇವಲ 23ಕ್ಕೆ ಬಂದು ನಿಂತಿದೆ . ಅದೇ ರೀತಿ ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ 1978ರಲ್ಲಿ 27 ಜನ ವಿಧಾನಸಭಾ ಅಭ್ಯರ್ಥಿಗಳು ಮುಸ್ಲಿಂ ಸಮುದಾಯದಿಂದ ಆಯ್ಕೆಯಾಗಿದ್ದು ಈವರೆಗಿನ ಅತೀ ಹೆಚ್ಚು ಪ್ರಾತಿನಿದ್ಯವಾಗಿದೆ . 2011ರ ಜನಗಣತಿ ಪ್ರಕಾರ 90 ಲಕ್ಷ ಜನಸಂಖ್ಯೆ ಮುಸ್ಲಿಂ ಸಮುದಾಯ ಈ ರಾಜ್ಯದಲ್ಲಿ ಇದ್ದರೂ , ಕಳೆದ ವಿಧಾನಸಭೆಯಲ್ಲಿ 11 ಜನ ಶಾಸಕರು ಆಯ್ಕೆಯಾಗಿದ್ದರು , ಆದರೆ ಈಗಿನ ವಿಧಾನಸಭೆಯಲ್ಲಿ ಕೇವಲ 7 ಜನ ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ . ಮುಸ್ಲಿಂ ಸಮುದಾಯವು ಜಾತ್ಯಾತೀತ ಮನಸ್ಸಿನಿಂದ ಇತರ ಸಮುದಾಯದ ಅಭ್ಯರ್ಥಿಗಳಿಗೆ ಮತ ನೀಡುತ್ತ ಬಂದಿದೆ . ಆದರೆ ಮುಸ್ಲಿಂ ಸಮುದಾಯದ ಅಭ್ಯರ್ಥಿ ಚುನಾವಣಾ ಕಣದಲ್ಲಿ ಇದ್ದರೆ ಅವನು ಸಮಾಜದಿಂದ ಪ್ರತ್ಯೇಕಗೊಳ್ಳುತ್ತಾನೆ . ಈ ವ್ಯವಸ್ಥೆಯು ಸಮುದಾಯದ ಪ್ರಾತಿನಿದ್ಯವನ್ನು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಕಡಿಮೆ ಮಾಡುತ್ತ ನಡೆದಿದೆ . ಜಾತ್ಯಾತೀತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜನತಾದಳ ( ಜಾ ) ವು ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ , ಐದು ಕಡೆ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಬಿ – ಫಾರಂ ನೀಡಬೇಕೆಂದು ನಮ್ಮ ಸಂಘಟನೆಯು ಆಗ್ರಹಿಸುತ್ತದೆ , ವಿಶೇಷವಾಗಿ ಹೈದ್ರಾಬಾದ ಕರ್ನಾಟಕದಲ್ಲಿ 4 . 5 ಲಕ್ಷಕ್ಕೂ ಹೆಚ್ಚು ಮುಸ್ಲಿಂ ಮತದಾರರಿರುವ ಲೋಕಸಭಾ ಕ್ಷೇತ್ರ ಬೀದರ ಇದ್ದು , ಈ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕೆಂದು ಈ ಮೂಲಕ ನಾವು ಆಗ್ರಹಿಸುತ್ತೇವೆ . ಗುಲ್ಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮುಲಿ ಮತದಾರರಿದ್ದು , ಈಗ ಆ ಕ್ಷೇತ್ರ ಗಗಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ . ಈ ಹಿಂದೆ ಸತತವಾಗಿ ಈ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿರುವ ಉದಾಹರಣೆಯಿದೆ . ಆದ ರೀತಿ ರಾಜ್ಯದಲ್ಲಿ ಮುಸ್ಲಿಂ ಬಾಹುಳ್ಯ ಕ್ಷೇತ್ರಗಳಾದ ಧಾರವಾಡ , ಬೆಂಗಳೂರು ಕೇಂದ್ರ , ಮಂಗಳೂರು ಹಾಗೂ ಹಾವೇರಿ ಲೋಕಸಭಾ ಕ್ಷೇತ್ರಗಳಿಗೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕೆಂದು ಆಗ್ರಹಿಸಿದರು. ಅಲ್ಲದೇ

ರಾಜ್ಯ ಸರಕಾರವು  ಸಮುದಾಯದ ಕೆಲವು ಬೇಡಿಕೆಗಳನ್ನು  ಈಡೇರಿಸಬೇಕೆಂದು ಕೋರಿದರು.

1 , ರಾಜ್ಯದ ಬಜೆಟ್‌ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ( 2500 ಕೋಟಿ ) ಈ ವರ್ಷದಲ್ಲಿ ಅನುದಾನವನ್ನು 1000 ಕೋಟಿ ಕಡಿಮ ಮಾಡಲಾಗಿದೆ , ಇದನ್ನು ಸರಿಪಡಿಸಬೇಕು .

2 . ರಾಜ್ಯ ಸರಕಾರವು ರಾಜ್ಯದ ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಶೇ 12 ರಿಂದ 15 ರಷ್ಟು

: ಸ್ಥಾನಗಳನ್ನು ಮುಸ್ಲಿಂರಿಗೆ ನೀಡಬೇಕು .

3 . ವಕ್ಫ  ಆಸ್ತಿಗಳಲ್ಲಿ ಶಾಲಾ ಕಾಲೇಜುಗಳನ್ನು , ಆಸ್ಪತ್ರೆಗಳನ್ನು ಸ್ಥಾಪಿಸಿ ಅಭಿವೃದ್ದಿ ಪಡಿಸಬೇಕು .

4 , ಅಲ್ಪಸಂಖ್ಯಾತರ ಮುಸ್ಲಿಂ ಸಮುದಾಯದ ಬಡ ಕುಟುಂಬಗಳಿಗೆ ಮನೆ ಕಟ್ಟಲು 1000 ಕೋಟಿ ರೂಪಾಯಿ ಅನುದಾನ ನೀಡಬೇಕು .

5 . ರಾಷ್ಟ್ರ ಮಟ್ಟದಲ್ಲಿ ಮುಸ್ಲಿಂ ಸಮುದಾಯಕ್ಕೆ ನ್ಯಾ . ರಂಗನಾಥ ಮಿಶ್ರಾ ಆಯೋಗದ ಶಿಫಾರಸ್ಸಿನಂತೆ ಶೇ 12 ರಷ್ಟು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪೋರಂನ ಸಂಚಾಲಕ ಅಲೀಮ್ ಅಹ್ಮದ್, ಕಾರ್ಯದರ್ಶಿ ಅಪ್ಜಲ್ ಮೆಹಬೂಬ್, ಮೇರಾಜ್ ಕಲ್ಯಾಣವಾಲಾ ಕೋರ್ ಕಮಿಟಿ ಸದಸ್ಯ ಹಾಗೂ ರಾಜ್ಯ ಉಪಾದ್ಯಕ್ಷರಾದ ಎಚ್.ವಿ.ರಾಜಾಬಕ್ಷಿ. ಶಾಹೀನ್‍ ಕೌಸರ್, ಖಾಜಾ ನಿಯಾಜಿ, ಖುದ್ದೂಸ್ ನಿಯಾಜಿ ಉಪಸ್ಥಿತರಿದ್ದರು.

 

 

Please follow and like us: