ಮಾಸ್ಟರ್ ವೈಭವ ಅಳವಂಡಿಗೆ ಕರ್ನಾಟಕ ಕಲಾ ಜ್ಯೋತಿ ರಾಜ್ಯ ಪ್ರಶಸ್ತಿ

ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಸುರ್ವೆ ಕಲ್ಚರಲ್ ಅಕಾಡೆಮಿ ತನ್ನ ೨೬ನೇ ವಾರ್ಷಿಕೋತ್ಸವದ ಅಂಗವಾಗಿ, ಡಾ. ವಿ.ಕೃ. ಗೋಕಾಕ್ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಮತ್ತು ರಾಷ್ಟ್ರೀಯ ಚಿಣ್ಣರ ಹಬ್ಬವನ್ನು ದಿನಾಂಕ ೧೪. ೧೫. ೧೬. ೧೭ ಫೆಬ್ರುವರಿ ೨೦೧೯ ರಂದು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ೧೭ ರಂದು ವಿಶ್ವೇಶ್ವರಯ್ಯ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಸುರ್ವೆ ಅವರು ನೀನೆ ರಾಜಕುಮಾರ್ ಚಿತ್ರದ ಬಾಲ ನಟನೆ ಗುರುತಿಸಿ ಕರ್ನಾಟಕ ಕಲಾ ಜ್ಯೋತಿ ರಾಜ್ಯ ಪ್ರಶಸ್ತಿ ವೈಭವ ಅಳವಂಡಿಗೆ ನೀಡಿ ಗೌರವ ನೀಡಲಿದ್ದಾರೆ. ಕಲೆಯನ್ನು ಪ್ರೀತಿಸುವ ಮನಸುಗಳ ನಡುವೆ ಕಲಾವಿದ ಎನ್ನುವ ಅದ್ಭುತ ಶಕ್ತಿ ಅಡಗಿಕೊಂಡಿರುತ್ತಾನೆ. ‘ಕಲೆ’  ಕೇವಲ ಒಬ್ಬರ ಆಸ್ತಿಯಲ್ಲ. ಸಾಧಿಸುವ ಛಲ – ಸಾಧನೆಯ ಗುರಿ ಆತ್ಮ ವಿಶ್ವಾಸದ ನೋಟ ಇದ್ದರೆ ಈ ಕಲಾಸಾಗರ ಎಲ್ಲರೊಳಗಲ್ಲೂ ಹರಿಯಬಲ್ಲುದು ಎಂಬುದಕ್ಕೆ ನೀನೆ ರಾಜಕುಮಾರದ ಚಿತ್ರ ದ ಈ ಬಾಲಪ್ರತಿಭೆಯೇ ಸಾಕ್ಷಿ. ಒಟ್ಟಿನಲ್ಲಿ ಹಲವಾರು ಪ್ರತಿಭೆಯ ಆಗರ, ಕಲಾ ಆಗಸದ ಚಂದಿರ ಅಂದರೆ ಅತಿಶಯೋಕ್ತಿ ಅನಿಸದು. ಇವನ ಪ್ರತಿಭೆ ಇನ್ನೂ ಬಾನೆತ್ತರಕ್ಕೆ ಬೆಳೆದು ಲೋಕವೇ ಇವರನ್ನು ಗುರುತಿಸುವಂತಾಗಲಿ, ಮಾನವೀಯತೆ ಚಿತ್ರ ಯುವಕರಿಗೆ ದಾರಿದೀಪವಾಗಲಿ ಎಂಬುದು ನೀನೆ ರಾಜಕುಮಾರ ಚಿತ್ರ ತಂಡದ ಆಶಯ.
Please follow and like us: