ಕೊಪ್ಪಳದ ಪ್ರತಿಭಾವಂತ ಛಾಯಾಗ್ರಾಹಕರಿಗೆ ರಾಜ್ಯ ಪ್ರಶಸ್ತಿ


ಕೊಪ್ಪಳ, ಸೆ. ೧೬: ನಗರದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರತಿಭಾವಂತ ಛಾಯಾಗ್ರಾಹಕರಾದ ಟಿವಿ9 ವಿಡಿಯೋ ಜರ್ನಲಿಷ್ಟ್ ಮಾರುತಿ ಕಟ್ಟಿಮನಿ ಮತ್ತು ಬಿಟಿವಿ ವಿಡಿಯೋ ಜರ್ನಲಿಷ್ಟ್ ಈರಣ್ಣ ಬಡಿಗೇರರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಗಿದೆ.
, ಮೈಸೂರಿನ ಟೌನ್‌ಹಾಲ್‌ನಲ್ಲಿ ಸೆ. ೧೫ ರಂದು ನಡೆದ ಕಾವೇರಿ ಕರ್ನಾಟಕ ಸಾಂಸ್ಕೃತಿಕ ಹಬ್ಬದಲ್ಲಿ ಇವರನ್ನು ಸನ್ಮಾನಿಸಲಾಯಿತು. ಈರಣ್ಣ ಬಡಿಗೇರ ಅವರ ಮೊಬೈಲ್ ಫೋಟೊಗ್ರಫಿ ಚಾಯಾಚಿತ್ರ ಪ್ರದರ್ಶನವನ್ನು ಸಹ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಸಾನಿಧ್ಯವನ್ನು ಡಾ. ಬಸವರಾಜ ಮಹಾನಂದ ಸ್ವಾಮಿಗಳು, ಸಮ್ಮೇಳನಾಧ್ಯಕ್ಷ ಡಾ. ಡಿ.ಎಸ್ ಅಶ್ವಥ್, ಚಲನಚಿತ್ರ ಕಲಾವಿಧರಾದ ಶಂಕರ್ ಬಟ್, ಮೀನಾ ಸೇರಿದಂತೆ ಇನ್ನಿತರ ಕಲಾವಿದರು, ಸಾಹಿತಿಗಳು ಪಾಲ್ಗೊಂಡಿದ್ದರು .

Please follow and like us: