ಪೆರಿಯಾರ್ ರಾಮಸ್ವಾಮಿ ಜನ್ಮ ದಿನ ಆಚರಣೆ

ಕೊಪ್ಪಳ : ಸ.೧೮ ಅಂಬೇಡ್ಕರ ನಗರದಲ್ಲಿ ಪ್ರತಿಭಾ ಗ್ರಾಮೀಣಾಭಿವೃದ್ಧಿ ಶಿಕ್ಷಣ ಹಾಗೂ ಸಾಂಸ್ಕೃತಿಕ ಕಲಾ ಸಂಸ್ಥೆ, ಹಾಗೂ ಬಿಎಎಮ್‌ಸಿ ವತಿಯಿಂದ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನ ಹಾಗೂ ಪೆರಿಯಾರ್ ರಾಮಸ್ವಾಮಿಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಪ್ರತಾಪ್ ಜಿ. ಬೆಲ್ಲದ್ ಮಾತನಾಡಿ ದ್ರಾವಿಡ್ ಜನಾಂಗದ ನಾಯಕರಾದ ಪೆರಿಯಾರ್ ರಾಮಸ್ವಾಮಿ ಅವರು ಜನರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿದರು ಮೂಢ ನಂಬಿಕೆಗಳನ್ನು ಕಟುವಾಗಿ ಟೀಕಿಸಿದವರು. ಮೌಢ್ಯತೆಯ ವಿರುದ್ಧವಾಗಿ ಹಲಿರುಳು ಹೋರಾಟ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ ಮಹಾನ್ ನಾಯಕ್ ಪೆರಿಯಾರ್ ರಾಮಸ್ವಾಮಿ ಎಂದರು.
ಈ ಸಂದರ್ಭದಲ್ಲಿ ಬಿಎಎಮ್‌ಸಿಎಫ್‌ನ ಕಾರ್ಯಕರ್ತರು, ಸಂಸ್ಥೆ ಪದಾಧಿಕಾರಿಗಳು, ನಗರದ ಹಿರಿಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

Please follow and like us: