ಗಂಗಾವತಿ ಗಲಾಟೆ : ಮಾನವೀಯತೆ ಮೆರೆದ ಪೋಲಿಸ್ ಇಲಾಖೆ

ಕೊಪ್ಪಳ… ನಿನ್ನೆಯ ಗಂಗಾವತಿ ಚಾಕು ಇರಿತ ಪ್ರಕರಣಕ್ಕೆ ಸಂಬಂದಿಸಿದಂತೆ ಪೋಲಿಸರು ರಾತ್ರೋ ರಾತ್ರಿ 14 ಹುಡುಗ್ರನ್ನ ಕರೆತಂದು ವಿಚಾರಣೆ ನಡೆಸಿದ್ದಾರೆ. ಇದರಲ್ಲಿ ಅಮಾಯಕರೂ ಸೇರಿದ್ದಾರೆ. ಗಲಾಟೆ ನಡೆದ ಓಣಿಯವರು ಎನ್ನುವ ಕಾರಣಕ್ಕೆ ಕೆಲವರನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ.

ಇವರಲ್ಲಿ ಇಂದು ಪರೀಕ್ಷೆ ಬರೆಯೋ ಹುಡುಗನನ್ನು ಕರೆತಂದು ರಾತ್ರಿ ಇಡೀ ವಿಚಾರಣೆ ಮಾಡಿದ್ದಾರೆ.

ಮಗನನ್ನು ಬಿಡುವಂತೆ ಪೋಲಿಸ್ ಠಾಣೆಯ ಮುಂದೆ ಪೋಷಕರ ಅಳಲು ತೋಡಿಕೊಂಡರೂ ಬಿಟ್ಟಿರಲಿಲ್ಲ. ಕೊನೆಗೆ ಮಗನ ಹಾಲ್ ಟಿಕೆಟ್ ನೋಡಿ ಪರೀಕ್ಷೆ ಬರೆಯಲು ಅನುಮತ ಕೋರಿದಾಗ ವಿಷಯ ಎಸ್ಪಿ ಅನೂಪ್ ಶೆಟ್ಟಿಯವರ ಗಮನಕ್ಕೂ ಬಂದಿದೆ. ಹೀಗಾಗಿ ಪೋಲಿಸ್ ಭದ್ರತೆಯಲ್ಲಿ ಬಿಕಾಂ ಎಕ್ಸಾಮ್ ಬರೆಯಲು ಮೊಹಮ್ಮದ್ ಜಾವೀದ್ ಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಬಂಧಿತ 14 ಹುಡುಗರು ಗುಂಡಮ್ಮ ಕ್ಯಾಂಪ್ ನ ನಿವಾಸಿಗಳು. ಬೂದಿ ಮುಚ್ಚಿದ ಕೆಂಡದಂತಾಗಿರುವ ಗಂಗಾವತಿ ವಾತಾವರಣವಿದೆ. ಅಮಾಯಕ ಮಕ್ಕಳನ್ನು ಕರೆತರಲಾಗಿದೆ ಎನ್ನುವುದು ಪೋಷಕರ ವಾದ. ಪರೀಕ್ಷೆಗೆ ಹೋಗಬೇಕಾಗಿದ್ದ ವಿದ್ಯಾರ್ಥಿಗೆ ಪರೀಕ್ಷೆಗೆ ಹೋಗಲು ಎಸ್ಪಿ ಸೇರಿದಂತೆ ಪೋಲಿಸ್ ಇಲಾಖೆಯವರು ಸಹಕಾರ ನೀಡಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Please follow and like us: