ಆದೇಶ ಪ್ರತಿ ವಿತರಣೆ ಮಾಡಿದ ಶಾಸಕ ಇಕ್ಬಾಲ್ ಅನ್ಸಾರಿ

ಶಾಸಕ ಇಕ್ಬಾಲ್ ಅನ್ಸಾರಿ 2017-18 ನೇ ಸಾಲಿನ ನಗರಸಭೆ ಆಶ್ರಯ ಯೋಜನೆಯ

ಫಲಾನುಭಾವಿಗಳಿಗೆ ಆದೇಶ ಪ್ರತಿ ವಿತರಣೆ.

ಗಂಗಾವತಿಯ ಶಾಸಕರಾದ ಇಕ್ಬಾಲ್ ಅನ್ಸಾರಿ ತಮ್ಮ ಶಾಸಕರ ಗೃಹ ಕಚೇರಿಯಲ್ಲಿ 2017-18 ನೇ ಸಾಲಿನ ನಗರಸಭೆಯ ವಿವಿಧ ಆಶ್ರಯ ಯೋಜನೆಗಳ ಸುಮಾರು 230 ಫಲಾನುಭಾವಿಗಳಿಗೆ ಆದೇಶ ಪ್ರತಿ ನೀಡಿದರು.

2017-18 ನೇ ಸಾಲಿನಲ್ಲಿ ಎಸ್.ಸಿ / ಎಸ್.ಟಿ ಜನಾಂಗದ ನಗರ ವಾಸಿಗಳಿಗೆ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆಯಡಿ ಹಾಗೂ ಅಲ್ಪಸಂಖ್ಯಾತ , ಹಿಂದುಳಿದ ನಗರ ವಾಸಿಗಳಿಗೆ ಮನೆ ಕಟ್ಟಿಕೊಳ್ಳಲು ವಾಜಪೇಯಿ ನಗರ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭಾವಿಗಳಿಗೆ ಆದೇಶ ಪ್ರತಿಯನ್ನು ನೀಡಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ನಗರ ಆಶ್ರಯ ಸಮೀತಿಯ ಅಧ್ಯಕ್ಷರಾಗಿ ತಾವು ಯಾವತ್ತು , ಅಂಗವಿಕಲ , ವಿಧವೆ ಸೇರಿದಂತೆ ತೀರ ಬಡ ಕುಟುಂಬದ ವಸತಿ ರಹಿತರನ್ನು ಗುರುತಿಸಿ ಆಯ್ಕೆ ಮಾಡಿದ್ದು ಸರಕಾರದ ವತಿಯಿಂದ ಇದೊಂದು ಉಚಿತ ಯೋಜನೆಯಾಗಿದ್ದು ಫಲಾನುಭಾವಿಗಳು ಯಾವುದೇಕಾರಣಕ್ಕು ನಗರಸಭೆಯಲ್ಲಿ ಹಾಗೂ ವಾರ್ಡಿನಲ್ಲಿ ಯಾರಿಗೂ ಸಹಿತ ಹಣವನ್ನು ಕೊಡಬಾರದೆಂದು ಎಚ್ಚರಿಸಿದರು.

2017-18 ನೇ ಸಾಲಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಗಮದಿಂದ ಪರಿಶಿಷ್ಟ ಜಾತಿಯವರಿಗೆ – 70 , ಪರಿಶಿಷ್ಟ ಪಂಗಡದವರಿಗೆ – 13 ಸೇರಿದಂತೆ ವಾಜಪೇಯಿ ನಗರ ವಸತಿ ಯೋಜನೆಯಡಿ ಹಿಂದುಳಿದ ವರ್ಗದವರಿಗೆ – 145 ಹಾಗೂ ಅಲ್ಪಸಂಖ್ಯಾತರಿಗೆ – 24 ಸೇರಿ ಒಟ್ಟು 252 ಮನೆಗಳು ಮಂಜೂರಾವೆ.

ಈ ಸಂಧರ್ಭದಲ್ಲಿ ಯುವ ಮುಖಂಡರಾದ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸಣ್ಣ ಹುಲಿಗೆಮ್ಮ ದೇವಪ್ಪ ಕಾಮದೊಡ್ಡಿ , ಪೌರಾಯುಕ್ತರಾದ ಖಾಜಾ ಮೋಯಿನುದ್ದೀನ್ , ಸ್ಥಾಯಿ ಸಮೀತಿ ಅಧ್ಯಕ್ಷರಾದ ಮನೋಹರ್ ಸ್ವಾಮಿ ಹಿರೇಮಠ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಹಿರಿಯ ಸದಸ್ಯರಾದ ಶ್ಯಾಮೀದ್ ಮನಿಯಾರ್ , ನ.ಯೋ.ಪ್ರಾ ಅಧ್ಯಕ್ಷರಾದ ನಾಗರಾಜ ನಂದಾಪೂರ, ಸದಸ್ಯರಾದ ಹುಸೇನ್ ಪೀರಾ ಜವಳಗೇರಾ , ಅಪ್ಪಿ ಕೇಶವ, ಹುಸೇನಪ್ಪ ಹಂಚಿನಾಳ, ಮಲ್ಲೆಶ ದೇವರಮನಿ , ರಾಜ್ಯ ಕಾಂಗ್ರೇಸ್ ಎಸ್.ಸಿ ಸೆಲ್ ಸಂಚಾಲಕರಾದ ದೇವಪ್ಪ ಕಾಮದೊಡ್ಡಿ , ರಾಜ್ಯ ಕಾಂಗ್ರೇಸ್ ಎಸ್.ಟಿ ಸೆಲ್ ಕಾರ್ಯದರ್ಶಿಯಾದ ರಾಜು ನಾಯಕ , ಮುಖಂಡರಾದ ಬಳ್ಳಾರಿ ರಾಮಣ್ಣ ನಾಯಕ ಹಾಗೂ ಇನ್ನಿತರೆ ಮುಖಂಡರು ಉಪಸ್ಥಿತರಿದ್ದರು.

Please follow and like us: