ಹಿಂದುತ್ವವಾದಿಗಳಿಂದ ಹಿಂದೂಗಳು ಕಲಿಯುವುದು ಏನೂ ಇಲ್ಲ-ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ

ಸೌಹಾರ್ದ ಮಂಟಪದ ಎರಡನೇ ದಿನದ ಉದ್ಘಾಟನಾ ಗೋಷ್ಟಿಯಲ್ಲಿ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿರವರ ಮಾತುಗಳು.

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ಏರ್ಪಡಿಸಿರುವ ಸೌಹಾರ್ದ ಮಂಟಪದ ಎರಡನೇ ದಿನದ ವೇದಿಕೆಯಲ್ಲಿರುವ ಎಲ್ಲ ಗಣ್ಯರೆ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆಗಾಗಿ ಹೋರಾಡುತ್ತಿರುವ ಎಲ್ಲಾ ಬಂಧುಗಳೇ, ಕುವೆಂಪುರವರು ಹುಟ್ಟಿದ ದಿನ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹುಟ್ಟಿದೆ ಮತ್ತು ಅವರ ಆಶಯಗಳನ್ನಿಟ್ಟುಕೊಂಡು ಕೆಲಸ ಮಾಡುತ್ತಾ ಬಂದಿದೆ. ಆಧುನಿಕ ಕರ್ನಾಟಕ ಸಂದರ್ಭದಲ್ಲಿ, ವೈಚಾರಿಕ ನೆಲೆಗಟ್ಟು ಒದಗಿಸಿದವರು ಕವೆಂಪುರವರು. ಹೇಗೆ ಫುಲೆ ಅಂಬೇಡ್ಕರ್ ಶೋಷಿತರ ದನಿಯಾದರು, ಪೆರಿಯಾರ್ ತಮಿಳರ ಸ್ವಾಭಿಮಾನದ ಪ್ರತೀಕವಾದರೋ, ಹಾಗೆಯೇ ಕುವೆಂಪುರವರು ಕನ್ನಡಿಗರ ಸ್ವಾಭಿಮಾನದ ಪ್ರತೀಕರಾಗಿದ್ದಾರೆ. ಕನ್ನಡಿಗಿರ ಸ್ವಾಬಿಮಾನ, ಸೌಹಾರ್ದತೆಗಾಗಿ ದುಡಿವ ಪ್ರತೀಕವಾಗಿ ನಾಡಿಗೆ ಮಾರ್ಗದರ್ಶಕರಾಗಿದ್ದಾರೆ. ಕುವೆಂಪುರವರು ನನ್ನಮಾನಸ ಗುರುಗಳು ಸಹ ಹೌದು. ನಾನು 10 ವರ್ಷ ಅವರ ಒಡನಾಡದಲ್ಲಿದ್ದೆ. ಕನ್ನಡದ ನೆಲದಲ್ಲಿ ವಿಶ್ವಮಾನವ ತತ್ವವನ್ನು ಬೋಧಿಸಿದಂತ, ಬದುಕಿದಂತ ಚೇತನ ಕುವೆಂಪುರವರು. ಅವರ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಮತ್ತು ಸರ್ವಜನಾಂಗದ ಶಾಂತಿಯ ತೋಟದ ಆಶಯದ ಮೂಲಕ ಈ ಕಾರ್ಯಕ್ರಮ ನಡೆಯುತ್ತಿದೆ.

ಇಲ್ಲಿ ಗೌರಿ ಲಂಕೇಶ್‍ರವರ ಸ್ಮರಣೆಯಾಗುತ್ತಿದೆ. ಗೌರಿ ಬಿಟ್ಟರೆ ನಮ್ಮ ಸಮಾಜದಲ್ಲಿ ಸಮಾಜದ ಕೆಡಕುಗಳ ವಿರುದ್ದ, ಕ್ರೌರ್ಯದ ವಿರುದ್ದ ಅಷ್ಟು ಗಟ್ಟಿ ದನಿಯಲ್ಲಿ ಹೋರಾಡಿದ ಮತ್ತೊಬ್ಬ ಮಹಿಳೆ ಸಿಗುವುದಿಲ್ಲ. ಅವರನ್ನು ನಾವು ಕಳೆದುಕೊಂಡಿದ್ದೇವೆ. ಯಾವದೇ ವ್ಯಕ್ತಿಯನ್ನು ಕೊಂದ ಮಾತ್ರಕ್ಕೆ ಅವರ ವಿಚಾರಧಾರೆ, ತತ್ವ, ಸತ್ಯವನ್ನು ಕೊಲ್ಲಲ್ಲು ಸಾಧ್ಯವಿಲ್ಲ. ಆ ವಿಚಾರಧಾರೆ ಅನೇಕ ರೀತಿಯಲ್ಲಿ ಮರುಹುಟ್ಟು ಪಡೆದು ನಮ್ಮ ಜನಮಾನಸದಲ್ಲಿ ನಿರಂತರವಾಗಿರುತ್ತದೆ. ಗೌರಿ ನಮ್ಮಲ್ಲಿ ಮರುಹುಟ್ಟು ಪಡೆದಿದ್ದಾರೆ. ಈ ನಾಡಿನ ದಾರ್ಶನಿಕರ ತತ್ವಗಳನ್ನು ಪೊರೆಯುವ ಮನಸ್ಸುಗಳಲ್ಲಿ ಅವರು ಜೀವಂತವಾಗಿದ್ದಾರೆ. ಅವರ ನೆನಕೆ ನನಗೆ ಸಮಾಧಾನಕಾರ ಸಂಗತಿ.

ನಾನು 16-17 ವರ್ಷಗಳ ಹಿಂದೆ ಚಿಕ್ಕಮಗಳೂರಿಗೆ ಬಂದಿದೆ. ಮೊದಲಿಗೆ ಬಂದಾಗ ಬಾಬಾಬುಡನ್ ಗಿರಿ ಸನ್ನಿದಿಗೆ ಹೋಗಿದ್ದೆ. ಅಲ್ಲಿ ಪ್ರಶಾಂತವಾದ ಪರಿಸರ ಮತ್ತು ಶಾಂತಿ ಇತ್ತು. ಆ ದಿನಗಳಲ್ಲಿ ಸಂಘರ್ಷ ಇರಲಿಲ್ಲ, ಅನ್ಯೋನ್ಯತೆ ಮತ್ತು ಭಾವೈಕ್ಯತೆ ಇತ್ತು. ಆದರೆ ಕೆಲವೇ ದಿನಗಳಲ್ಲಿ ಪರಿಸ್ಥಿತಿಯೇ ಬದಲಾಯಿತು. ಹಿಂದೂ ಮುಸ್ಲಿಂರ ಭಾವೈಕ್ಯತೆಯ ಸ್ಥಳ ಇಂದು ದ್ವೇಷದ ಸ್ಥಾನವಾಗಿರುವುದು ದುಃಖದ ವಿಚಾರ. ಕರ್ನಾಟಕದಲ್ಲಿ ಈ ರೀತಿಯ ಸಾವಿರಾರು ದರ್ಗಾಗಳಿವೆ. ನಮ್ಮಲ್ಲಿ ಸಾವಿರಾರು ವರ್ಷಗಳಿಂದ ಕ್ರೈಸ್ತರು ಶಾಂತಿ ಬೋಧಿಸಿದ್ದಾರೆ. ಸೂಫಿ ಸಂತರು ಇಸ್ಲಾಂಅನ್ನು ಪ್ರಚಾರ ಮಾಡಿದ್ದಾರೆ. ಪಾರ್ಸಿಗಳು ಇಲ್ಲಿಗೆ ಬಂದಿದ್ದಾರೆ. ಎಲ್ಲಾ ಬಂದರೂ ಕೂಡಿ ಬಾಳುವ ಪರಿಸ್ಥಿತಿ ನಮ್ಮಲ್ಲಿ ಇತ್ತು. ಆದರೆ ಇಂದು ಈ ಪರಿಸ್ಥಿತಿ ಬದಲಾಗಿದೆ. ಆ ಸ್ನೇಹ, ಸೌಹಾರ್ದತೆ ಸ್ಥಾನಗಳು ಇಂದು ದ್ವೇಷ ಮತ್ತು ರಕ್ತ ಚೆಲ್ಲುವ ಸ್ಥಾನಗಳಾಗಿರುವುದು ದುರಂತ.

ದತ್ತಾತ್ತೇಯರು ಅವೈದಿಕರು. ಅವಧೂತ ಕೀರ್ತಿಯ ಯಜ್ಞದಲ್ಲಿ ಹೇಳುವಂತೆ ವೇದಗಳು, ಗ್ರಂಥಗಳು, ವರ್ಣವ್ಯವಸ್ಥೆಯಾಗಲಿ ಶಾಶ್ವತವಲ್ಲ. ಬ್ರಹ್ಮಧರ್ಮ ಮಾತ್ರ ಶಾಶ್ವತ ಎಂದಿದೆ. ದತ್ತಾತ್ರೇಯ ಅವೈಧಿಕ ಹಿಂದೂ ಸಂತ ಆಗಿದ್ದರು. ನಮ್ಮ ದೇಶದಲ್ಲಿ ಸಂತರು ಯಾವುದೇ ಒಂದು ಧರ್ಮದ ಕಟ್ಟುಪಾಡುಗಳಿಗೆ ಒಳಗಾದವರಲ್ಲ. ಜಾತಿ ಭೇಧ ಮಾಡುತ್ತಿರಲಿಲ್ಲ. ಅವರು ನೈತಿಕ ಮೌಲ್ಯಗಳನ್ನು, ಮನುಷ್ಯನ ಪರಿಶುದ್ದತೆ ಮತ್ತು ಒಳ್ಳೆಯತನವನ್ನು ಎತ್ತಿಹಿಡಿದವರಾಗಿದ್ದಾರೆ. ದೇವರು ಎಲ್ಲರನ್ನು ಮನುಷ್ಯರನ್ನಾಗಿ ಮಾಡಿದ್ದಾರೆ. ಎಲ್ಲರೂ ಎಲ್ಲರನ್ನು ಪ್ರೀತಿಸಿದಾಗ ಮಾತ್ರ ನಾವು ದೈವತ್ವ ಪಡೆಯಲು ಸಾಧ್ಯ. ಇದನ್ನೆ ಸೂಫಿ ಪ್ರೇಮ ತತ್ವ ಎನ್ನಬಹುದು. ದತ್ತಾತ್ರೇಯ ತತ್ವಕ್ಕೂ ಸೂಫಿ ತತ್ವಕ್ಕೂ ಯಾವುದೇ ವ್ಯತ್ಯಾಸವಿಲ್ಲ.

ಇಸ್ಲಾಮೀಕರಣವನ್ನು ಮಾನವೀಕರಣ ಮಾಡಿದವರು ಸೂಫಿ ಸಂತರು. ಪ್ರೇಮ ವಾಕ್ಯ ಮಾಡಿದವರು ಅವರು. ಖಡ್ಗದಿಂದ ಇಸ್ಲಾಂ ಬೆಳೆಯಿತು ಎನ್ನುವುದು ಅರ್ಧಸತ್ಯ. ಬದಲಿಗೆ ಸೂಫಿ ಸಂತರ ಪ್ರೇಮದಿಂದ ಇಲ್ಲಿ ಇಸ್ಲಾಂ ಬೆಳೆದಿದೆ. ಬಾಬ ಬುಡನ್ ಗಿರಿಯಲ್ಲಿ ದತ್ತಾತ್ರೇಯ ಸಂತರ ನಂತರ ಬಾಬಾ ಖಲಂಧರ್ ರವರು ಬಂದು ತಪಸ್ಸು ಮಾಡಿರಬೇಕು. ನಮ್ಮ ಜನ ದತ್ತ ಮತ್ತು ಬಾಬಾ ಇಬ್ಬರನ್ನೂ ಒಂದೇ ಎಂದುಕೊಂಡರು. ಈ ದೇಶದ ಬಹುಸಂಖ್ಯತಾ ಜನ ಕೂಡಿ ಬಾಳುವ ತತ್ವದಲ್ಲಿ ನಂಬಿಕೆ ಇಟ್ಟವರು. ಹಾಗಾಗಿ ಅವರಿಗೆ ದತ್ತಾತ್ರೇಯ ಮತ್ತು ಬಾಬಾ ಬೇರೆಯಲ್ಲ. ಉದಾಹರಣೆ ಬಿಜಾಪುರದ ಬ್ರಹ್ಮನಂದಾನೈಕ್ಯಸ್ವಾಮಿ. ಶ್ರೀನಗರದ ದರ್ಗಾ ಸಹ ಆಗಿದೆ.
ನಮ್ಮ ಜನ ಹಿಂದೂ ಮತ್ತು ಮುಸ್ಲಿಂ ಸಂತರನ್ನು ಬೇರೆ ಬೇರೆ ಎಂದು ನೋಡಲಿಲ್ಲ. ಬದಲಿಗೆ ಎರಡೆರೆಡು ಹೆಸರಿನಿಂದ ಆರಾಧಿಸಿದರು. ನಮ್ಮ ದೇಶದಲ್ಲಿ ಯಾವುದೇ ಶ್ರದ್ಧಾಕೇಂದ್ರಕ್ಕೆ ಯಾವುದೇ ಧರ್ಮ ಮತ್ತು ಜಾತಿ ಇರಲಿ ಭಕ್ತರು ಭಕ್ತರಾಗಿ ಬರುತ್ತಾರೇಯೇ ಹೊರತು ಧಾರ್ಮಿಕ ವ್ಯಕ್ತಿಗಳಾಗಿ ಅಲ್ಲ. ಈ ಶ್ರದ್ದಾಕೇಂದ್ರಗಳು ಯಾವುದೇ ಜಾತಿ ಧರ್ಮಕ್ಕೆ ಸೇರಿರುವುದಿಲ್ಲ. ಅವು ಮನುಷ್ಯರಿಗೆ ಸೇರಿದವು ಎಂಬುದನು ತಿಳಿಯಬೇಕು. ಆದರೆ ಇಂದು ಇದನ್ನು ಬದಲಾಯಿಸಲು ಕೆಲವು ಪಟ್ಟಭದ್ರರು ಪ್ರಯತ್ನಿಸುತ್ತಿದ್ದಾರೆ. ಡಿಸೆಂಬರ್ 6, 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸದ ನಂತರ ಉಗ್ರವಾದ ಬೆಳೆಯುತ್ತಿದೆ. ಇದಕ್ಕೂ ಮುನ್ನ ಉಗ್ರವಾದ ಇರಲಿಲ್ಲ. ಇಡೀ ದೇಶಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಶಾಂತಿ ಸೌಹಾರ್ದತೆ ಕೆಡಿಸಿ ಅವರಿಗೆ ಅಧೀನವಾಗಿ, ಎರಡನೇ ದರ್ಜೆ ಪ್ರಜೆಯಾಗಿ ಬದುಕಬೇಕೆಂದು ಬಯಸುವುದು ಸರಿಯಲ್ಲ ಎಂದರು.

ಸಚಿವರ ಪ್ರಶ್ನೆಗೆ ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ ಎಂದ ಬಸವಣ್ಣನ ಉತ್ತರವೇ ಇಂದಿನ ಜಾತ್ಯಾತೀತರಾದ ನಾವು ಕೊಡಬೇಕಾದ ಉತ್ತರವಾಗಿದೆ. ಅವರು ಸಂವಿಧಾನದ ಬದಲಾವಣೆಯ ಬಗ್ಗೆ ಹೇಳುತ್ತಾರೆ. ಇಂತಹ ಕೆಟ್ಟ ವ್ಯಕ್ತಿಯನ್ನು ನಾನೆಂದು ನನ್ನ ಸಾರ್ವಜನಿಕ ಜೀವನದಲ್ಲಿ ನೋಡಿರಲಿಲ್ಲ. ಇಂದು ಕರ್ನಾಟದಲ್ಲಿ ಬಿಜೆಪಿ ಸೋಲಿಸಲು ರಾಹುಲ್ ಗಾಂಧಿ, ಸಿದ್ದರಾಮಯ್ಯ ಬೇಕಿಲ್ಲ, ಅನಂತ್‍ಕುಮಾರ್ ಹೆಗಡೆ, ಪ್ರತಾಪ್ ಸಿಂಹ ಸಾಕು ಎಂಬ ಪರಿಸ್ಥಿತಿ ಬಂದಿದೆ. ಅವರಿಗೆ ಸಂವಿಧಾನ, ಜಾತ್ಯಾತೀತತೆಯಲ್ಲಿ ನಂಬಿಕೆ ಇಲ್ಲ, ಹಾಗಾಗಿ ನಮ್ಮ ಮುಂದೆ ಬಹಳ ಜವಾಬ್ದಾರಿ ಇದೆ. ಯಾರನ್ನು ಆಯ್ಕೆ ಮಾಡಬೇಕು, ಯಾರ ಪರ ನಿಲ್ಲ ಬೇಕು ಎಂಬ ಜಬಾಬ್ದಾರಿ ನಮ್ಮ ಮುಂದಿದೆ. ಇವತ್ತು ಸಂವಿಧಾನ ಬದಲಿಸುವವರು, ಮೀಸಲಾತಿ ತೆಗೆಯುವವರು, ಸಮಾನತೆ ತೆಗೆಯುವವರು, ಏಕ ಸಂಸ್ಕøತಿಯನ್ನು ಹೇರಿ, ಬಹುತ್ವವನ್ನು ನಾಶ ಮಾಡುವವರು ನಮಗೆ ಬೇಕಾ ಎಂಬ ತೀರ್ಮಾನವನ್ನು ಜನ ತೆಗೆದುಕೊಳ್ಳಬೇಕು.

ಸಾವಿರಾರು ವರ್ಷಗಳಿಂದ ಕೂಡಿ ಬಾಳುವ, ಹಂಚಿ ತಿನ್ನುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ ಅದನ್ನು ಇಂದು ಜಾತಿ ಧರ್ಮದ ಹೆಸರಿನಲ್ಲಿ ವಿಭಜಿಸಿ ತಮ್ಮ ಸ್ವಾರ್ಥ ಸಾಧಿಸುತ್ತಿರವವರು ಎಲ್ಲಾ ಪಕ್ಷಗಳಲ್ಲಿಯೂ ಇದ್ದಾರೆ. ಕೋಮುವಾದಿ ಪಕ್ಷದಲ್ಲಿ ಹೆಚ್ಚು ಇದ್ದಾರೆ ಎನ್ನುವುದನ್ನು ಮರೆಯಬಾರದು. ಇಂದು ಎಲ್ಲಾ ಧರ್ಮದಲ್ಲಿ ಧರ್ಮಾಂದರು ಇದ್ದಾರೆ. ಕೋಮುವಾದದಿಂದ ಉಗ್ರವಾದ ಮತ್ತು ಉಗ್ರವಾದದಿಂದ ಕೋಮುವಾದ ಬೆಳೆಯುತ್ತಿದೆ. ಹಾಗಾಗಿ ಎಲ್ಲಾ ಧರ್ಮದ ಸಜ್ಜನರು, ಶಾಂತಿಪ್ರಿಯರು, ಸ್ನೇಹಮಯಿಗಳು ಒಟ್ಟಾಗಬೇಕು ಮತ್ತು ತಮ್ಮ ತಮ್ಮ ಧರ್ಮಗಳಲ್ಲಿನ ಇಂತಹ ಕೆಟ್ಟವರನ್ನು ದೂರ ಮಾಡಬೇಕು. ಪೈಂಗಬರರ ಪ್ರಕಾರ ತಮ್ಮ ಧರ್ಮದಲ್ಲಿನ ಜನ ತಪ್ಪು ಮಾಡುತ್ತಿದ್ದರೆ ಅವರನ್ನು ವಿರೋಧÀ ಮಾಡದೇ ಇರುವುದೇ ಕೋಮುವಾದವಾಗಿದೆ. ಹಾಗಾಗಿ ನಾವು ಕೋಮುವಾದಿಗಳನ್ನು ದೂರ ಇಡಬೇಕಿದೆ. ಇವತ್ತು ಇದು ಆಗುತ್ತಿಲ್ಲ. ಸಂಯೋಜಕ ಶಕ್ತಿಗಳಿಗೆ ಬೆಲೆಯಿಲ್ಲ, ಬದಲಿಗೆ ವಿಭಜಕ ಶಕ್ತಿಗಳಿಗೆ ಬೆಲೆ ಇದೆ. ಇವತ್ತು ಯಾರಿಂದ ಯಾರು ಕಲಿಯಬೇಕು ಎಂಬ ಪ್ರಶ್ನೆ ನಮ್ಮ ಮುಂದಿದೆ.
ಹಿಂದುತ್ವವಾದಿಗಳಿಂದ ಹಿಂದೂಗಳು ಕಲಿಯುವುದು ಏನು ಇಲ್ಲ. ಬಹುತ್ವವನ್ನು ಪ್ರತಿಪಾದಿಸುವ ಹಿಂದೂ ಜನರಿಂದ ಹಿಂದೂತ್ವವಾದಿಗಳು ಕಲಿಯಬೇಕಿದೆ. ಹಿಂದೂ ಧರ್ಮ ಒಂದು ಅಸಮಾನತೆಯಿಂದ ಕೂಡಿರುವ ಧವರ್i. ಹಾಗಾಗಿ ಜನರನ್ನು ಒಂದು ಮಾಡಲು ಸಾಧ್ಯವಿಲ್ಲ. ಹಾಗಾಗಿ ಹಿಂದೂತ್ವ ಎನ್ನು ಒಂದು ರಾಜಕೀಯ ಅಜೆಂಡಾ ಇಟ್ಟುಕೊಂಡು ಒಂದು ಮಾಡುವ ನಾಟಕವನ್ನು ಹಿಂದೂತ್ವವಾದಿಗಳು ಮಾಡುತ್ತಿದ್ದಾರೆ. ಹಿಂದೂ ಧರ್ಮ ಗಾಂಧಿಜಿ ಹೇಳಿದ್ದು. ಹಿಂದುತ್ವ ಗೋಡ್ಸೆ ಹೇಳಿದ್ದು. ಹಾಗೆಯೇ ಮುಸ್ಲಿಂ ಧರ್ಮದಲ್ಲಿಯೂ ಬಿನ್ ಲಾಡೆನ್, ಐಎಸ್‍ಐ ಹೇಳುವ ಧರ್ಮ ನಮಗೆ ಬೇಕಿಲ್ಲ. ಬದಲಿಗೆ ಸಹಿಷ್ಣುಗಳು ಹೇಳುವ ಮುಸ್ಲಿಂ ಧರ್ಮ ನಮಗೆ ಬೇಕು. ಹಾಗಾಗಿ ಗೋಡ್ಸೆಗೆ ಸ್ಮಾರಕ ಕಟ್ಟಲು ಹೊರಟಿರುವವರಿಗಂದ ನಮಗೆ ಅಪಾಯವಿದೆ. ಸಾಮರಸ್ಯ, ಪ್ರೀತಿ ಶಾಂತಿಯ ಹಿಂದೂ ಜನರು ಹೇಳುವ ಧರ್ಮ ನಮಗೆ ಬೇಕು.

ಸಾಮರಸ್ಯದ ಶ್ರೇಷ್ಟ ರೂಪಕವಾಗಿರುವ ಬಾಬಾಬುಡನ್‍ಗಿರಿಯ ಮೊಕದ್ದಮೆ ಆದಷ್ಟು ಬೇಗ ಮುಗಿಯಬೇಕೆಂದು, ನ್ಯಾಯಮೂರ್ತಿ ಜಸ್ಟೀಸ್ ನಾಗಮೋಹನ್ ದಾಸ್‍ರವರು ಕೊಟ್ಟಿರುವ ವರದಿಯನ್ನು ಬಿಡುಗಡೆ ಮಾಡಬೇಕೆಂದು, ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರವಾಗಿ ಕೆಲಸ ಮಾಡಬೇಕೆಂದು ಈ ವೇದಿಕೆಯ ಮೂಲಕ ಒತ್ತಾಯಿಸುತ್ತೇನೆ. ಈ ನಾಡಿನಲ್ಲಿ 15 ವರ್ಷಗಳಿಂದ ದಲಿತಪರ, ರೈತಪರ ಅನೇಕ ಹೋರಾಟಗಳು ನಡೆದರೂ ಕೂಡ ಕೋಮು ಸೌಹಾರ್ದಗಾಗಿಯೇ ಒಂದು ತಾತ್ವಿಕ ವೇದಿಕೆ ಇರಲಿಲ್ಲ. ಎಲ್ಲಾ ಬಿಡಿ ಬಿಡಿಯಾಗಿದ್ದರು. ಇಂತಹ ಸಂದರ್ಭದಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಒಂದು ತಳಹದಿ ಹಾಕಿ ಎಲ್ಲಾ ಸೌಹಾರ್ದ ಮನಸ್ಸುಗಳನ್ನು, ಸಂಘಟನೆಗಳನ್ನು ಒಟ್ಟಿಗೆ ತಂದು ನಿರಂತರವಾಗಿ ಶ್ರಮಿಸಿದೆ. ಇದಕ್ಕೆ ನನ್ನ ಮನಃಪೂರ್ವಕ ಧನ್ಯವಾದಗಳು. ಮಾನವಧರ್ಮ ಉಳಿಯಲು ಶ್ರಮಿಸುತ್ತಿರುವ ಈ ಕೋಮು ಸೌಹಾರ್ದ ವೇದಿಕೆಯ ಜೊತೆ ನಾವೆಲ್ಲರೂ ಕೈ ಜೋಡಿಸಬೇಕು. ಈ ಕಾರ್ಯಕ್ರಮ ಯಶಸ್ವಿಯಾಗಲು ಎಂದು ಹಾರೈಸುತ್ತೇನೆ. ಧನ್ಯವಾದಗಳು.

Please follow and like us: