ಗವಿಸಿದ್ದೇಶ್ವರ ಜಾತ್ರೆ : ಪಾರ್ಕಿಂಗ್ ಹಾಗೂ ಬಂದೋಬಸ್ತ್ ವ್ಯವಸ್ಥೆ

ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತವಾಗಿರುವ ಕೊಪ್ಪಳದ ಗವಿಮಠದ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಅನೂಪ್ ಶೆಟ್ಟಿ ಎರಡು ಔಟ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು ೫ ಜನ ಡಿಎಸ್ಪಿಗಳು, ೧೩ ಪಿಎಸ್ಐ ಗಳು ಸೇರಿದಂತೆ ೮೭೦ಕ್ಕೂ ಅಧಿಕ ಸಿಬ್ಬಂದಿಗಳು ಹಾಗೂ ೪೦೦ ಕ್ಕೂ ಹೆಚ್ಚು ಗೃಹರಕ್ಷಕದಳದವರನ್ನು ನಿಯುಕ್ತಿಗೊಳಿಸಲಾಗಿದೆ ಎಂದರು.

ಅಲ್ಲದೇ ಭಾರೀ ವಾಹನಳನ್ನು ಬೈಪಾಸ್ ರಸ್ತೆಯ ಮೂಲಕ ಸಾಗುವಂತೆ ವಿವಿಧ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು ಸೂಕ್ತ ಸಂಚಾರ ಮತ್ತು ಬಂದೋಬಸ್ತ ಮಾಡಲಾಗಿದೆ ಎಂದರು. ಸುಗಮವಾಗಿ ಜಾತ್ರೆ ನಡೆಯಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು. ಜನೇವರಿ ೩ರಂದು ರಥೋತ್ಸವ ಇದೆ.

Please follow and like us: