ಯಡಿಯೂರಪ್ಪ ಮಹದಾಯಿ ವಿವಾದ ಬಗೆಹರಿಸಿದರೆ ರಾಜ್ಯದ ಜನರ ಪರವಾಗಿ ಧನ್ಯವಾದ ಹೇಳುತ್ತೇನೆ-ಎಚ್.ಡಿ. ದೇವೇಗೌಡ

ನಾನು 1996 ರಲ್ಲಿಯೇ ಸಿಎಂ ಆಗಬೇಕಾಗಿತ್ತು ಎಂಬ  ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿದ ದೇವೇಗೌಡ ಅವರು, ಅಂದು ನನಗೆ ಕಾಂಪಿಟೇಷನ್  ಮಾಡ್ತಿಯಾ ಎಂದು ಜೆ.ಎಚ್. ಪಟೇಲ್ ಸಿದ್ದರಾಮಯ್ಯಗೆ ಜೋಡು ತೆಗೆದುಕೊಂಡಿದ್ದರು ಎಂದು ಗರಂ ಆಗಿ ಹೇಳಿದರು. ಮುಂದೊಂದು ದಿನ ಸಿದ್ದರಾಮಯ್ಯಗೆ ರಿಯಲೈಜೆಶನ್ ಆಗುತ್ತೆ. ಸಿದ್ದರಾಮಯ್ಯ ಹೆಗಡೆಗಿಂತ ದೊಡ್ಡ ಲೀಡರ್ ಅಲ್ಲ. ಸಿದ್ದರಾಮಯ್ಯ, ರಾಯರಡ್ಡಿ ಎಲ್ಲಿದ್ದರು? ಉಪಮುಖ್ಯಮಂತ್ರಿಯಾಗವವರೆಗೆ ಬೆಳೆಸಿದ್ದು ಯಾರು ಎಂದು ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯಗೆ ದುಡ್ಡು ಇದೆ, ಅಹಂಕಾರ ಇದೆ ಮಾತನಾಡಲಿ. ದೇವೇಗೌಡನಿಗೆ ಜನರೇ ಶಕ್ತಿ ಎಂದು ಹೇಳಿದರು. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಮಹಾದಾಯಿ ವಿವಾದ ಬಗೆ ಹರಸ್ತೀನಿ ಎಂದು ಹೇಳಿದ್ದಾರೆಂದು ಪ್ರಶ್ನೆ ಕೇಳಿದ ಕೂಡಲೇ ಕೈ ಜೋಡಿಸಿದ ಮಾಜಿ ಪ್ರಧಾನಿ ದೇವೆಗೌಡ,  ನರೇಂದ್ರ ಮೋದಿಯವರಿಗೆ ನಾನು ಕೈಮುಗಿದು ಕೇಳಿದರೂ ಮಹದಾಯಿ ವಿಷಯವಾಗಿ ಅವರು ಏನೂ ಮಾತನಾಡಲಿಲ್ಲ. ಇನ್ನು  ಯಡಿಯೂರಪ್ಪ ಒಂದು ತಿಂಗಳೊಳಗಾಗಿ ಮಹದಾಯಿ ವಿವಾದ ಬಗೆ ಹರಿಸಿದರೆ ಆ ಭಾಗದ ಜನರ ಹಾಗೂ ಇಡೀ ರಾಜ್ಯದ ಜನರ ಪರವಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದರು.

ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ದೊಡ್ಡವರಿದ್ದಾರೆ. ಅವರ ಬಗ್ಗೆ ನಾನು ಮಾತಾನಾಡಲ್ಲ ಎಂದರು. ರಾಜ್ಯದಲ್ಲಿ ಕುಮಾರಸ್ವಾಮಿಗೆ ಅವಕಾಶ ಕೊಡಬೇಕು ಅನ್ನೋದು ಜನರ ಭಾವನೆ ಇದೆ. ಅದಕ್ಕೆ ಕಾರಣ ಅವರ ಆಡಳಿತ ಅವಧಿ. ಕಳೆದ 10 ವರ್ಷದಿಂದನ ರಾಜ್ಯದ ಜನರು ಕಾಂಗ್ರೆಸ್, ಬಿಜೆಪಿ ಆಡಳಿತ ಗೊಂದಲವನ್ನು ನೋಡಿದ್ದಾರೆ. ಜೆಡಿಎಸ್ ಪಕ್ಷದ ಸಂಘಟನೆ ದೃಷ್ಟಿಯಿಂದ ಬಾಂಬೆ ಕರ್ನಾಟಕದ ಆರು ಜಿಲ್ಲೆಗೆ ನಾನು ಭೇಟಿ ಮಾಡಿದ್ದೇನೆ. ಕುಮಾರಸ್ವಾಮಿ ನೇತೃತ್ವದಲ್ಲಿ ಕುಮಾರಪರ್ವ ಆರಂಭವಾಗಿದೆ. ಎರಡು ರಾಷ್ಟ್ರೀಯ ಪಕ್ಷದ ಮಧ್ಯೆ ಪ್ರಾದೇಶಿಕ ಪಕ್ಷ ಉಳಿಯಬೇಕು.  ಚಂಪಾ ಅವರು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಬೇಕೆಂದು ಹೇಳಿದ್ದಾರೆ.  ಎರಡು ರಾಷ್ಟ್ರೀಯ ಪಕ್ಷಗಳು ಇನ್ನು ಅಭ್ಯರ್ಥಿಗಳ ಪಟ್ಟಿ ಮಾಡಿಲ್ಲ.  ಕುಮಾರಸ್ವಾಮಿ ಅವರಿಗೆ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಬೇಕು ಎಂಬ ಮನಸಿದೆ. ಆದರೆ, ಆದರೆ ನಾನೇ ಕುಮಾರಸ್ವಾಮಿಗೆ ಹೇಳಿದ್ದೇನೆ. ಪಕ್ಷದ ಮುಖಂಡರ ಜೊತೆ ಚರ್ಚೆ ಮಾಡಿ ಬಿಡುಗಡೆ ಮಾಡುವಂತೆ ಹೇಳಿದ್ದೇನೆ.  ಕೊಪ್ಪಳ ಜಿಲ್ಲೆಯಲ್ಲಿ ಜೆಡಿಎಸ್ ಅಷ್ಟೊಂದು ಶಕ್ತಿಯುತವಾಗಿಲ್ಲ. ಒಂದೇ ದಿನದಲ್ಲಿ ಶಕ್ತಿ ತುಂಬಲು ಸಾಧ್ಯವಿಲ್ಲ.  ಕಾರ್ಯಕರ್ತರ ನಡುವೆ ಸ್ವಲ್ಪ ಮಟ್ಟಿನ  ಭಿನ್ನಾಭಿಪ್ರಾಯವಿದೆ. ಕಾರ್ಯಕರ್ತರಲ್ಲಿ ಐಕ್ಯತೆ ಮೂಡಿಸಲು ನಾನು ಕೊಪ್ಪಳಕ್ಕೆ ಬಂದಿದ್ದೇನೆ. ಮುಂದಿನ ತಿಂಗಳು ಮೊದಲ ವಾರದಲ್ಲಿ ನಾನು ಮತ್ತೆ ಕೊಪ್ಪಳಕ್ಕೆ ಬರುತ್ತೇನೆ.  ಶಾಂಸಕ ಸಾರಾ ಮಹೇಶ್ ಮಗ ಬಾಲಕನಿಗೆ ಥಳಿಸಿರುವ ಕುರಿತಂತೆ ಪ್ರತಿಕ್ರಿಯಿಸಿದ ದೇವೇಗೌಡ ಅವರು, ಯಾರ ಮಗನೇ ತಪ್ಪು ಮಾಡಿದ್ರು ಅವನ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

Please follow and like us: