ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ತೀವ್ರ ಪ್ರತಿಭಟನೆ

ಕೊಪ್ಪಳ :ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ.ಅಶೋಕ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ, ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ.ಪ್ರಗತಿಪರ ಹೊರಾಟಗಾರರು, ಪತ್ರಕರ್ತರಿಂದ ಪ್ರತಿಭಟನೆ.ಎಮ್.ಎಮ್ ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಹಂತಕರನ್ನು ಕೂಡಲೇ ಬಂದಿಸುವಂತೆ ಆಗ್ರಹಿಸಿ ಪ್ರತಿಭಟನೆ.ರಾಜ್ಯ ಸರ್ಕಾರ ಆರೊಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿದೆ.ಗೌರಿ ಲಂಕೇಶ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು.ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ತಿಕ್ಕುತ್ತಿರುವವರನ್ನುಹಂತಕರನ್ನು ಕೂಡಲೇ ಬಂಧಿಸಬೇಕು, ಬರಹಗಾರರಿಗೆ  ಸಾಹಿತಿಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ.
 ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅಮಾನುಷ ಹತ್ಯೆ ಖಂಡಿಸಿ ಕೊಪ್ಪಳ ಜಿಲ್ಲೆಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಯಿತು. ಹಲವಾರು ಹೋರಾಟಗಳಲ್ಲಿ ಭಾಗೀಯಾಗಿ ಸಮಾಜಮುಖಿ ಚಿಂತನೆಗಳಲ್ಲಿ ಮತ್ತು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಗೌರಿ ಲಂಕೇಶ್ ರ ಹತ್ಯೆಗೆ ಕೊಪ್ಪಳದಲ್ಲಿ ತೀವ್ರ ಆಕ್ರೋಶವ್ಯಕ್ತವಾಗಿದೆ. ಕೊಪ್ಪಳ ನಗರದ ಅಶೋಕ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ ಪ್ರಗತಿ ಪರ ಚಿಂತಕರು, ಹೋರಾಟಗಾರರು, ಪತ್ರಕರ್ತರು, ಬರಹಗಾರರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಗೌರಿ ಲಂಕೇಶ್ ಹಂತಕರನ್ನು ಬಂದಿಸಲೇ ಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು. ಕಾರ್ಯನಿರತ ಪತ್ರಕರ್ತರ ಸಂಘ, ಪಿಯುಸಿಎಲ್, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕನ್ನಡಪರ ಸಂಘಟನೆಗಳು, ಸಿ.ಎಫ್.ಐ, ಸಿ.ಪಿ.ಐ.ಎಂ.ಎಲ್, ಜೀವಯಾನ ಬಳಗ, ಬಸವ ಬಳಗ ಸೇರಿದಂತೆ ವಿವಿಧ ಸಂಘಟನೆಗಳವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಶೋಕ್ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ಮಾಡಿ ನಂತರ ಟೈರ್ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು . ಗಾಂಧಿಯಿಂದ ಗೌರಿಯವರೆಗೆ ಮನುವಾದಿಗಳು ಚಿಂತಕರನ್ನು ಹತ್ಯೆ ಮಾಡುತ್ತಲೇ ಬಂದಿದ್ದಾರೆ. ವಿಚಾರಗಳನ್ನು ಎದುರಿಸಲಾಗದ ಹೇಡಿಗಳು ಇಂತಹ ಕುಕೃತ್ಯಗಳಿಗೆ ಮುಂದಾಗುತ್ತಾರೆ ಅವರನ್ನು ಶೀಘ್ರ ಬಂದಿಸಬೇಕು ಎಂದು ಆಗ್ರಹಿಸಿದರು. ಕೊಪ್ಪಳ ಮಾತ್ರವಲ್ಲದೇ ಜಿಲ್ಲೆಯ ಗಂಗಾವತಿ, ಕಾರಟಗಿ, ಕನಕಗಿರಿಯಲ್ಲಿಯೂ ಸಹ ತೀವ್ರ ಪ್ರತಿಭಟನೆ ನಡೆಯಿತು. ಶೀಘ್ರವೇ ಆರೋಪಿಗಳನ್ನು ಬಂದಿಸದಿದ್ದರೆ ತೀವ್ರ ಹೋರಾಟವನ್ನು ಮಾಡಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದರು.  ಅಲ್ಲದೇ ಫೇಸ್ ಬುಕ್ ನಲ್ಲಿ ಸಾವಿನ ಸಂಭ್ರಮದ ಕಾಮೆಂಟ್ ಮಾಡಿದ ಯುವಕನ ವಿರುದ್ದ ಕೂಡಾ ಹೋರಾಟಗಾರರು ದೂರು ದಾಖಲಿಸಿದರು…

Please follow and like us:
error