ಮಾದ್ಯಮಗಳ ಮೇಲೆ ವಿಶ್ವಾಸ ಕಡಿಮೆಯಾಗುತ್ತಿರುವುದು ವಿಷಾದನೀಯ- ದಿನೇಶ ಅಮೀನ ಮಟ್ಟು

ಹತ್ತಾರು

 ಸೈದ್ದಾಂತಿಕ ಭಿನ್ನಾಭಿಪ್ರಾಯಗಳೂ ಇದ್ದಾಗಲೂ ಸಹ ಎಲ್ಲ ಪತ್ರಕರ್ತರು ಒಗ್ಗಟ್ಟಾಗಿರಬೇಕು. ಭಿನ್ನಾಭಿಪ್ರಾಯಗಳನ್ನು ಮೀರಿ ಮಾನವೀಯ ಸಂಬಂದಗಳನ್ನುಬೆಳೆಸಿಕೊಳ್ಳಬೇಕು. ಹಿಂದೆ ಜನ ಚಳುವಳಿಗಳ ಜೊತೆ ಮಾದ್ಯಮಗಳೂ ಬೆಳೆದವು. ಮಾದ್ಯಮಗಳಿಂದ ಚಳುವಳಿಗೆ ಶಕ್ತಿ ಸಿಕ್ಕಿತ್ತು. ಆದರೆ ಈಗ  ಆ ಪರಿಸ್ಥಿತಿ ಇಲ್ಲ. ಮಾಧ್ಯಮಗಳು ಚಳುವಳಿಗಳನ್ನು ಸೃಷ್ಟಿ ಮಾಡುತ್ತಿವೆ ಮತ್ತು ಹಾಳು ಮಾಡುತ್ತಿವೆ. ಪತ್ರಕರ್ತರಿಗೆ ಶೀಲ ಎನ್ನುವುದು ಬಹುಮುಖ್ಯವಾಗಿರುವಂತಹದ್ದು. ಪತ್ರಕರ್ತ ಸಿನಿಕನಾಗದೇ ಸಮಾಜಸೇವಕನಾಗೇಕು. ಪತ್ರಕರ್ತನಿಗೆ ನಡತೆ ಹಾಗೂ ವಿಶ್ವಾಸ ಬಹಳ ಮುಖ್ಯ. ಎಂದು ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರ ದಿನೇಶ ಅಮೀನಮಟ್ಟು ಹೇಳಿದರು. ಅವರು ಕೊಪ್ಪಳದಲ್ಲಿಂದ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಹಿಂದೆ ಪತ್ರಕರ್ತರಿಗೆ ಬೆದರಿಸಲಾಗುತ್ತಿತ್ತು. ಎದೆಯ ಮೇಲೆ ಆಯುಧ ವಿಟ್ಟು ಹೆದರಿಸಿದಾಗ ಪತ್ರಕರ್ತ ಸಿಡಿದೆಳುತ್ತಿದ್ದ ಆದರೆ ಇಂದು ಆತನ ಹೆಗಲ ಮೇಲೆ ಕೈ ಹಾಕಿ ಆತನ ಜೇಬಿಗೆ ದುಡ್ಡಿಟ್ಟು ಓಲೈಕೆ ಮಾಡಲಾಗುತ್ತಿದೆ ಇದು ಅಪಾಯಕಾರಿ. ಪತ್ರಿಕಾವೃತ್ತಿ ಎನ್ನುವುದು ಈಗ ಉದ್ಯಮವಾಗಿದೆ. ಉದ್ಯಮವನ್ನು ಮೀರಿ ಇವತ್ತು ಬೆಳೆಯುತ್ತಿದೆ. ಓದುಗರನ್ನು ಸೃಷ್ಟಿಸುತ್ತಿಲ್ಲ. ಗ್ರಾಹಕರನ್ನು ಸೃಷ್ಟಿ ಮಾಡುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರಜಾಟಿವಿ ಕ್ಯಾಮರಾಮನ್ ಪಾಂಡುರಂಗ  ಮತ್ತು ಇನ್ನೊರ್ವ ಕ್ಯಾಮರಾಮನ್ ಈರಣ್ಣ ತೆಗೆದಿರುವ ಫೋಟೋಗಳ ಪ್ರದರ್ಶನ ಹಾಗೂ ಪತ್ರಿಕೆಗಳ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ವೇದಿಕೆಯ ಮೇಲೆ ಸಂಸದ ಕರಡಿ ಸಂಗಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಜೆಡಿಎಸ್ ನ  ವಿರೇಶ ಮಹಾಂತಯ್ಯನಮಠ, ಕೆ.ಎಂ.ಸಯ್ಯದ್, ವಾರ್ತಾಧಿಕಾರಿ ಬಿ.ವಿ.ತುಕಾರಾಂ ಸೇರಿದಂತೆ ಇತರರು ಉಪಸ್ಥಿತರಿದ್ದರು, ದೇವು ನಾಗನೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ವಿವಿಧ ಪತ್ರಕರ್ತರಿಗ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.   

Please follow and like us: