ಮಾಧ್ಯಮ ವಿದ್ಯಾರ್ಥಿಗಳು ಬಹಳಷ್ಟು ಕಲಿಯಬೇಕಿದೆ – ತುಕಾರಾಂ

koppal_pg_center


ಕೊಪ್ಪಳ. ಮೇ.೪. ಮಾಧ್ಯಮ ಕ್ಷೇತ್ರ ತುಂಬಾ ವಿಶಾಲವಾಗಿದ್ದು ಬೆಳೆದಿದ್ದು, ಹೊಸ ತಲೆಮಾರಿನ ವಿಧ್ಯಾರ್ಥಿಗಳು ಹೆಚ್ಚು ಹೆಚ್ಚು ಕಲಿಕೆಯತ್ತ ಗಮನಹರಿಸಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ. ತುಕಾರಾಂ ಹೇಳಿದರು.
ಅವರು ನಗರದ ಪಿ.ಜಿ. ಕೇಂದ್ರದ ಆಡಿಟೋರಿಯಮ್ ಹಾಲ್‌ನಲ್ಲಿ ವಿಎಸ್‌ಕೆಯು ವಿಶ್ವವಿದ್ಯಾಲಯ ಕೊಪ್ಪಳ ಸ್ನಾತಕೋತ್ತರ ಕೇಂದ್ರದ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮ ವಿಭಾಗದ ಮಾಧ್ಯಮ ವಿದ್ಯಾರ್ಥಿಗಳ ವೇದಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಜ್ಞಾನಸಂಪದ ನಾಲ್ಕು ಸಂಚಿಕೆಗಳ ವಿದ್ಯಾರ್ಥಿ ಪ್ರಾಯೋಗಿಕ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು, ಅದರ ಜೊತೆಗೆ ಅಧ್ಯಯನ ಹಾಗೂ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳು ನಿರ್ವಹಣೆಯನ್ನು ಖುದ್ದಾಘಿ ಹೋಗಿ ನೋಡಿಯೇ ತಿಳಿದುಕೊಂಡು ಕಲಿಯಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿ ಮಾತನಾಡಿದ, ಈಟಿವಿ ವರದಿಗಾರ ಶರಣಪ್ಪ ಬಾಚಲಾಪೂರ, ಮಾಧ್ಯಮದಲ್ಲಿ ಕೆಲಸ ಮಾಡುವರು ಯಾವುದೇ ದಾಕ್ಷಿಣ್ಯಕ್ಕೆ ಒಳಗಾಗಬಾರದು, ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಮತ್ತು ಎರಡು ತುದಿಯ ನಡುವೆ ಇರುವ ಮಾಧ್ಯಮ ಕೇವಲ ಒಂದು ಪ್ರಯತ್ನ ಮಾತ್ರ, ಅವರಾರು ಬದಲಾವಣೆ ಮಾಡಿಯೇ ತೀರುವ ದೈವಶಕ್ತಿ ಅಲ್ಲ ಎಂದ ಅವರು, ಪ್ರೆಸ್ ಎಂಬ ಲೇಬಲ್ ಅಂಟಿಸಿಕೊಂಡ ತಕ್ಷಣ ಅಹಂ ಸೇರಿಬಿಡುತ್ತದೆ, ಅಂಥಹ ಅಹಂ ಮತ್ತು ಇಸಂಗಳಿಂದ ದೂರವಿದ್ದು ಸಾಮಾನ್ಯ ಸಮಾಜಮುಖಿ ಕೆಲಸಗಾರರಾಗಿರಬೇಕು. ಅಷ್ಟಕ್ಕೂ ಜನಸಾಮಾನ್ಯರ ಕಣ್ಣಲ್ಲಿ ಇಂದು ಪತ್ರಿಕೆಗಳು ಮೊದಲಿದ್ದ ಗೌರವ ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ ಎಂದ ಅವರು ಪ್ರಾಮಾಣಿಕ ಕೆಲಸದ ಅಗತ್ಯವನ್ನು ಒತ್ತಿ ಹೇಳಿದರು.
ವೇದಿಕೆ ಉದ್ಘಾಟನೆಯನ್ನು ವಿಎಸ್‌ಕೆಯು ವಿಶ್ವವಿದ್ಯಾಲಯದ ಕುಲಸಚಿವ ಪ್ರೋ. ಟಿ. ಎಂ. ಭಾಸ್ಕರ್ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡುತ್ತ, ಇಂದು ನಮ್ಮ ಸಹೋದರಿಯರನ್ನ, ತಾಯಿಯನ್ನ, ಹೆಂಡತಿಯನ್ನ ಸರಿಯಾಗಿ ನಡೆಸಿಕೊಳ್ಳದ ದುಸ್ಥಿತಿಯಲ್ಲಿರುವದು ನಿಜಕ್ಕೂ ನಾವು ಎತ್ತ ಸಾಗುತ್ತಿದ್ದೇವೆ ಎಂಬ ಅನುಮಾನ ನಮ್ಮನ್ನು ಕಾಡುತ್ತದೆ, ನಮ್ಮ ನಾಡು ಶರಣರಿಂದ ಕೂಡಿದ ಶರಣತತ್ವದ ಬೀಡು, ಇಲ್ಲಿ ಕಾಯಕವೇ ಕೈಲಾಸ ಎಂಬ ಮಾತಿನಾದಿಯಾಗಿ ದುಡಿಮೆ ಮತ್ತು ಜನಸಾಮಾನ್ಯ ಬದುಕನ್ನು ಕಟ್ಟಿಕೊಟ್ಟಿರುವ ಪ್ರದೇಶ. ಅವುಗಳನ್ನು ಮುಂದುವರೆಸಿಕೊಂಡು ಹೋಗುವ ವಾಋಸುದಾರರಾದ ವಿದ್ಯಾರ್ಥಿ ಸಮೂಹ ಹೆಚ್ಚು ಅಧ್ಯಯನಪರತೆಯನ್ನು ರೂಢಿಸಿಕೊಳ್ಳಬೇಕು, ಕಾಯವಾಚಾ ಮನಸಾ ಪರಿಶುದ್ಧವಾಘಬೇಕು, ಬುದ್ಧ-ಬಸವ-ಅಂಬೇಡ್ಕರರಂತೆ ಮಾತನಾಡುವದನ್ನು ಕಲಿಯಬೇಕು ಅದರ ಜೊತೆ ಅದನ್ನು ಪಾಲಿಸುವದನ್ನು ಕಲಿಯಬೇಕು ಎಂದರು.
ವಿಶೇಷ ಆಹ್ವಾನಿತರಾಗಿ ಸಿಂಡಿಕೇಟ್ ಸದಸ್ಯರಾದ ಡಾ|| ಕೆ. ಬಿ. ಬ್ಯಾಳಿ, ಸಾವಿತ್ರಿ ಮುಜುಂದಾರ್, ಅಲಾವಲ್ಲಿ ಭಾಷಾ ಕುಲ್ಮಿ, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಶಂಕರ ಬಿಸನಳ್ಳಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಡಾ|| ಮನೋಜಕುಮಾರ ಡೊಳ್ಳಿ, ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಡಾ|| ಎಸ್.ವಿ.ಮಂಜಪ್ಪ, ಇತಿಹಾಸ ವಿಭಾಗದ ಡಾ|| ಹೇಮಾವತಿ, ಕನ್ನಡ ವಿಭಾಗದ ನೀಲಪ್ಪ, ಶಿವಕುಮಾರ, ಇಂಗ್ಲೀಷ ವಿಭಾಗದ ಶಿಮಲ್ಲಿಕಾರ್ಜುನ ಮತ್ತು ವಿಶಾಲಾಕ್ಷಿ, ಸಮಾಜಸೇವಾ ವಿಭಾಗದ ಸುರೇಶ, ಅರ್ಥಶಾಸ್ತ್ರ ವಿಭಾಗದ ಪಾಂಡುರಂಗ ಮತ್ತು ಶೃತಿ ಮುಂತಾದವರು ವೇದಿಕೆಯಲ್ಲಿದ್ದರು.
ಮಂಜುಳಾ ಮತ್ತು ಕಮಲ ಕಾರಟಗಿ ಪ್ರಾರ್ಥಿಸಿದರು, ರಾಘವೇಂದ್ರ ದೇವರಮನಿ ಸ್ವಾಗತಿಸಿದರು, ಮಂಜುನಾಥ ಜಿ. ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಾಫರ್ ಮಕಾಂದಾರ್ ಮತ್ತು ಉಮಾ ಭಾವಿಕಟ್ಟಿ ನಿರ್ವಹಿಸಿದರು, ಹನುಮಂತಪ್ಪ ಮ್ಯಾಗಳಮನಿ ವಂದಿಸಿದರು.

Please follow and like us: